spot_img
Thursday, July 30, 2026
spot_img

ಕಿರಿಮಂಜೇಶ್ವರ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಲಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ದಾಖಲೆಯ18 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಹುಡುಗರ -45ಕೆಜಿ ವಿಭಾಗದಲ್ಲಿ ಪ್ರಸಾದ್, -50 ಕೆಜಿ ವಿಭಾಗದಲ್ಲಿ ಅನ್ವೇಷಣ್,-54 ಕೆಜಿ ವಿಭಾಗದಲ್ಲಿ ರಜತ್ ಆರ್,-58 ಕೆಜಿ ವಿಭಾಗದಲ್ಲಿ ಸಾಯಿನಾಥ್ ,- 66 ಕೆಜಿ ವಿಭಾಗದಲ್ಲಿ ಪ್ರವೀಶ್,
-70 ಕೆಜಿ ವಿಭಾಗದಲ್ಲಿ ರಯಾನ್ ಅಹಮದ್ ಖಾನ್, -74ಕೆಜಿ ವಿಭಾಗದಲ್ಲಿ ಸೋಹಾನ್, -78ಕೆಜಿ ವಿಭಾಗದಲ್ಲಿ ಪ್ರೀತಮ್, +82ಕೆಜಿ ವಿಭಾಗದಲ್ಲಿ ಸ್ಕಂದ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದರೆ,
17ರ ವಯೋಮಾನದ ಹುಡುಗಿಯರ -40ಕೆಜಿ ವಿಭಾಗದಲ್ಲಿ ಸನ್ಮಿತಾ,-52ಕೆಜಿ ವಿಭಾಗದಲ್ಲಿ ಶರಣ್ಯ,+68 ಕೆಜಿ ವಿಭಾಗದಲ್ಲಿ ಕೃತಿಕಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿಕೊಂಡರು.

14ರ ವಯೋಮಾನದ ಹುಡುಗರ-25 ಕೆಜಿ ವಿಭಾಗದಲ್ಲಿ ತನ್ಮಯ್, -40 ಕೆಜಿ ವಿಭಾಗದಲ್ಲಿ ನಿಮಯ್, -60 ಕೆಜಿ ವಿಭಾಗದಲ್ಲಿ ಸಾಕ್ಷಿತ್,
-35 ಕೆಜಿ ವಿಭಾಗದಲ್ಲಿ ಸಮರ್ಥ್,
-60 ಕೆಜಿ ವಿಭಾಗದಲ್ಲಿ ಆಶಿಶ್ ಹಾಗೂ *14ರ ವಯೋಮಾನದ ಹುಡುಗಿಯರ* ವಿಭಾಗದಲ್ಲಿ -46 ಕೆಜಿ ವಿಭಾಗದಲ್ಲಿ ಶ್ರೇಯಾ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು, ಮುಂದಿನ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. *14ರ ವಯೋಮಾನದ ಹುಡುಗರ*20 ಕೆಜಿ ವಿಭಾಗದಲ್ಲಿ ದಿಗಂತ್ ಭಟ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ.

ದಾಖಲೆಯ ಜಯಭೇರಿಯೊಂದಿಗೆ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವಿಜೇತ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ್ ಮೊಗವೀರರು, ಕಾರ್ಯದರ್ಶಿಯಾಗಿರುವ ಶ್ಯಾಮಲ ಗಣೇಶ್ ಮೊಗವೀರ, ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ , ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!