spot_img
Monday, October 26, 2026
spot_img

ಮಂಗಳೂರು ವಿ.ವಿ.ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿಗೆ ಸಮಗ್ರ ಪ್ರಥಮ ಪ್ರಶಸ್ತಿ

ಕುಂದಾಪುರ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಜ್ರ ಮಹೋತ್ಸವ ಅಂಗವಾಗಿ ಯಕ್ಷಗಾನ ಅಕಾಡೆಮಿ,ಬೆಂಗಳೂರು ಇದರ ಸಹಯೋಗದಲ್ಲಿ 23ನೇಅಕ್ಟೋಬರ್2026ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಸಮಗ್ರ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಯಕ್ಷಗಾನ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.
ಪುರುಷ ವೇಷ – ಪ್ರಥಮ ಅನಂತಕೃಷ್ಣ ನಾವಡ – ತೃತೀಯ ಬಿ ಕಾಂ, ಸ್ತ್ರೀವೇಷ – ಅಶ್ವಿನಿ ಐತಾಳ್- ತೃತೀಯ ಬಿ ಎಸ್ಸಿ , ಹಾಸ್ಯ- ತನ್ಮಯ್- ದ್ವಿತೀಯ ಬಿ ಎಸ್ಸಿ ಬಹುಮಾನ ವಿಜೇತರಾಗಿದ್ದಾರೆ. ಕಾಲೇಜಿನ ತೃತೀಯ ಬಿ.ಎಸ್.ಸಿ ವಿದ್ಯಾರ್ಥಿ ಸಾತ್ಯಕಿ, ತೃತೀಯ ಬಿ.ಕಾಮ್ ನ ವಿದ್ಯಾರ್ಥಿಗಳಾದ ಅನೂಪ್ ಉರಾಳ ಮತ್ತು ವಿದಾತ ಉಡುಪ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.

ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಮತ್ತು ಲಲಿತಾ ಕಲಾ ಸಂಘದ ಸಂಯೋಜಕ ಶಶಾಂಕ್ ಪಟೇಲ್,ಕೆಳಮನೆ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು “ಕೃಷ್ಣಾರ್ಜುನ ಕಾಳಗ” ಎಂಬ ಪ್ರಸಂಗವನ್ನು ಪ್ರದರ್ಶನ ನೀಡಿದ್ದರು. ಯಕ್ಷಗಾನ ಸ್ಪರ್ಧೆಯ ಹಿಮ್ಮೇಳದಲ್ಲಿ – ಪ್ರಸಾದ್ ಮೊಗೆಬೆಟ್ಟು, ರಾಘವೇಂದ್ರ ಹೆಗಡೆ,ಯಲ್ಲಾಪುರ ಮತ್ತು ಶಿವಾನಂದ ಕೋಟ ಸಹಕರಿಸಿದ್ದರು. ವಿದ್ಯಾರ್ಥಿಗಳಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ,ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!