spot_img
Monday, October 26, 2026
spot_img

ಕೋಟ: ಸೈಕಲ್‌ಗೆ ಕಾರು ಡಿಕ್ಕಿ: ಹಿರಿಯ ಆರ್.ಎಸ್.ಎಸ್ ಮುಖಂಡ ಗುರುದಾಸ ಶೆಣೈ ನಿಧನ

ಕೋಟ: ಕೋಟ ಜಂಕ್ಷನ್ ನಲ್ಲಿ ಸೈಕಲ್ ಗೆ ಕಾರು ಡಿಕ್ಕಿ ಹೊಡೆದ ಕಾರಣ ಸೈಕಲ್ ಸವಾರ ಗುರುದಾಸ ಶೆಣೈ (65) ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನೆಡದಿದೆ.

ಮೃತ ಗುರುದಾಸ ಶೆಣೈ ಅವರು ಆರ್.ಎಸ್.ಎಸ್ ನ ಹಿರಿಯ ಮುಖಂಡರಾಗಿ ಪರಿವಾರದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು.

ಬೆಳಿಗ್ಗೆ 6.20ರ ಸುಮಾರಿಗೆ ಗಿಳಿಯಾರು ಗ್ರಾಮದ ಕೋಟ ಜಂಕ್ಷನ್ ಬಳಿ ಗುರುದಾಸ ಶೆಣೈ ರವರು ಅವರ ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ನ್ನು ದಾಟಿ ಮುಂದುವರೆದು ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ೬೬ ಯನ್ನು ದಾಟಿ ರಸ್ತೆಯ ಅಂಚಿಗೆ ಬರುತ್ತಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಂಡಾ ಸಿಟಿ ಕಾರಿನ ಚಾಲಕ ಪ್ರದೀಪ ಕಾಂಚನ್ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ಗುರುದಾಸ ಶೆಣೈ ರವರಿಗೆ ಡಿಕ್ಕಿ ಹೊಡೆದು ಕಾರನ್ನು ರಸ್ತೆಗೆ ಅಳವಡಿಸಿದ್ದ ಗ್ರಿಲ್ಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಗುರುದಾಸ ಶೆಣೈ ರವರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ, ಕೈ ಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯ ಉಂಟಾಗಿದ್ದು, ಕೂಡಲೇ ಗುರುದಾಸ ಶೆಣೈ ರವರನ್ನು ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಗುರುದಾಸ ಶೆಣೈ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!