spot_img
Saturday, October 24, 2026
spot_img

ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ನಲ್ಲಿ ‘ಪೇರೆಂಟ್ಸ್ ಪ್ರೈಡ್’ ವಿಶೇಷ ಕಾರ್ಯಕ್ರಮ

ಕುಂದಾಪುರ: ಎಂ.ಎಂ. ಹೆಗ್ಡೆ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ನಡೆಸಲ್ಪಡುವ ಸುಣ್ಣಾರಿ ಎಕ್ಸಲೆಂಟ್ ಇಂಡಿಯನ್ ಸ್ಕೂಲ್ ನಲ್ಲಿ ಇಂದು ‘ಪೇರೆಂಟ್ಸ್ ಪ್ರೈಡ್’ (Parents& Pride) ವಿಶೇಷ ಕಾರ್ಯಕ್ರಮವು ಅತ್ಯಂತ ಸಡಗರದಿಂದ ನಡೆಸಲಾಯಿತು.

ಪೋಷಕರು ಮೊದಲ ಶಿಕ್ಷಕರು ಹಾಗೂ ಪ್ರೀತಿ ಮತ್ತು ಮಾರ್ಗದರ್ಶನದ ಬಲವಾದ ಸ್ತಂಭಗಳು ಎಂಬ ಥೀಮ್‌ನೊಂದಿಗೆ ಈ ಕಾರ್ಯಕ್ರಮವನ್ನು ಪೂರ್ವ ಪ್ರಾಥಾಮಿಕ ಮಕ್ಕಳಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಬಸ್ರೂರು ಶ್ರೀ ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಶೆಟ್ಟಿ ಅವರು ಮಾತನಾಡಿ,ಪೋಷಕರು ಮಕ್ಕಳ ಜೊತೆ ಸಮಯವನ್ನು ಕಳೆಯಬೇಕು ಕೇವಲ ಅಂಕಗಳ ಹಿಂದೆ ಓಡಲು ಬಿಡದೆ ಬದುಕಿನಲ್ಲಿ ಶಿಸ್ತನ್ನು ರೂಡಿಸಿಕೊಳ್ಳುವಂತೆ ನೋಡಿಕೊಳ್ಳುವುದರ ಜೊತೆಗೆ ಶಾಲೆಯ ಎಲ್ಲಾ ಕಾರ್ಯಚಟುವಟಿಕೆಯಲ್ಲಿ ಪೋಷಕರು ಕೈಜೋಡಿಸಬೇಕು ಆಗ ಮಾತ್ರ ಮಗುವಿನ ಸಂಪೂರ್ಣ ಬೆಳವಣಿಗೆ ಸಾಧ್ಯ .ಅಲ್ಲದೆ ಮಕ್ಕಳ ನಡುವಿನ ಹೋಲಿಕೆ ನಿಲ್ಲಿಸಬೇಕು ,ಜೊತೆಗೆ ಯಾವುದೇ ಕಾರಣಕ್ಕೂ ಮಗುವಿನ ಮುಂದೆ ಶಿಕ್ಷಕರನ್ನು ,ಶಾಲೆಯನ್ನು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಬಾರದು ಎಂಬ ಕಿವಿ ಮಾತಿನ ಜೊತೆ ಈ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ಜೀವನದ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ,ಇಂತಹ ಕಾರ್ಯಕ್ರಮಗಳು ಮಕ್ಕಳು ಮತ್ತು ಪೋಷಕರ ನಡುವೆ ಇನ್ನಷ್ಟು ಭಾಂದವ್ಯ ಬೆಸೆಯಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕುಂದಾಪುರ ಇದರ ಅಧ್ಯಕ್ಷರಾದ ಮಹೇಶ ಎಂ ಹೆಗ್ಡೆ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿಗೆ ಹೊಸ ಅಧ್ಯಾಯವನ್ನು ಬರೆಯುವ ದೃಷ್ಟಿಯಲ್ಲಿ ಆರಂಭಗೊಂಡು ಯಶಸ್ಸನ್ನು ಸಾಧಿಸಿದ ನಮ್ಮ ಸಂಸ್ಥೆ ,ಇಂದು ಪ್ರಾಥಮಿಕ ಹಂತದ ಮಕ್ಕಳಿಗೆ ಭದ್ರ ಅಡಿಪಾಯದ ಜೊತೆ ಜೊತೆಗೆ ಮಕ್ಕಳಲ್ಲಿ ಸನಾತನ ಮಾದರಿಯಲ್ಲಿ ಜೀವನದ ಮೌಲ್ಯಗಳನ್ನು ರೂಪಗೊಳಿಸುವಲ್ಲಿ ಯಶಸ್ಸಿಯಾಗುವುದರ ಜೊತೆಗೆ ಮಕ್ಕಳು ತಮ್ಮ ಭದ್ರವಾದ ಗಟ್ಟಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ ಎಂಬುದನ್ನು ಸಣ್ಣ ಕಥೆಯ ಮೂಲಕ ಪೋಷಕರಿಗೆ ತಿಳಿಸಿದರು.

ಸಿಬಿ‌ಎಸ್‌ಇ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ ಮಾತನಾಡಿ ಕಾರ್ಯಕ್ರಮದ ಮಹತ್ವ ಮತ್ತು ಪೋಷಕರು ಮತ್ತು ಶಾಲೆಯ ನಡುವಿನ ಬಾಂಧವ್ಯದ ಕೊಂಡಿ ಹೇಗಿರಬೇಕು ಎಂಬುದನ್ನು ವಿವರಿಸಿದರು .

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯ ಹಾಗೂ ಎಲ್ಲಾ ಪೋಷಕರು ಉಪಸ್ಧಿತರಿದ್ದರು. ಪುಟಾಣಿ ಮಕ್ಕಳು ತಮ್ಮ ಬದುಕನ್ನು ರೂಪಿಸುವ ನಿಜ ಹೀರೋಗಳಾದ ತಂದೆತಾಯಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.
ಕಾರ್ಯಕ್ರಮವನ್ನು ಸಹಶಿಕ್ಷಕಿ ಪ್ರತಿಮಾ ನಿರೂಪಿಸಿದರು. ಸ್ವೀಕೃತಿ ಸ್ವಾಗತಿಸಿ. ತೃಪ್ತಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!