spot_img
Saturday, March 7, 2026
spot_img

ಜ.16ಕ್ಕೆ ಸಾಲಿಗ್ರಾಮ ಹಬ್ಬ

ಸಾಲಿಗ್ರಾಮ :ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಜನವರಿ 16 ಶುಕ್ರವಾರ ನಡೆಯಲಿದೆ.
ಜ.9ರಂದು ಶುಕ್ರವಾರ ಶ್ರೀ ನಾಗದೇವರಿಗೆ ಪವಮಾನ ಕಲಶಾಭಿಷೇಕ, ಬೆಳಿಗ್ಗೆ ಮಕರ ಲಗ್ನದಲ್ಲಿ ರಥಾರಂಭ, ಜ.13ರಂದು ಸಂಜೆ 5 ಗಂಟೆಯಿಂದ ಶ್ರೀ ಆಂಜನೇಯ, ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿಗೆ ರಂಗಪೂಜೆ, ಸಂಜೆ 7.30ಕ್ಕೆ ಕರ್ಕಾಟಕ ಲಗ್ನದಲ್ಲಿ ಮುಹೂರ್ತ ಬಲಿ, ಅಂಕುರಾರೋಪಣ, ಶ್ರೀ ಗುರುನರಸಿಂಹ ದೇವರಿಗೆ ಕಿರಿರಂಗಪೂಜೆ, ಉತ್ಸವಬಲಿ, ರಜತರಥೋತ್ಸವ ನಡೆಯಲಿದೆ.
ಜ.14ರಂದು ಪೂರ್ವಾಹ್ನ 11.30ಕ್ಕೆ ಮಹಾಪೂಜೆ, ಉತ್ಸವ ಬಲಿ, ರಜತ ರಥೋತ್ಸವ, ಸಂಜೆ 7.30ಕ್ಕೆ ಧ್ವಜಾರೋಹಣ ನಡೆಯಲಿದೆ. ಜ.15ರಂದು ಬೆಳಿಗ್ಗೆ ಸಂಹಿತಾ ಪಾರಾಯಣ, ಕಲಶಾಭಿಷೇಕ, 12ಕ್ಕೆ ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಸುತ್ತುಸೇವೆ, ಪಲ್ಲಕ್ಕಿ ಉತ್ಸವ, ಪುರಮೆರವಣಿಗೆ, ಕಟ್ಟೆ ಓಲಗ, ಹಿರೇರಂಗಪೂಜೆ, ಉತ್ಸವ ಬಲಿ, ಪುಷ್ಪರಥೋತ್ಸವ ನಡೆಯಲಿದೆ.

ಜ.16 ಶುಕ್ರವಾರ ಪೂರ್ವಾಹ್ನ 11ಕ್ಕೆ ಮೀನ ಲಗ್ನದಲ್ಲಿ ಶ್ರೀ ಗುರುನರಸಿಂಹ ದೇವರ ರಥಾರೋಹಣ ನಡೆಯಲಿದೆ. ಪಾನಕ ಪನಿವಾರ ಸೇವೆ (ಸೇವಾಕರ್ತರು: ಐರೋಡಿ ಎ.ಪಿ ವೈಕುಂಠ ಕಾರಂತರ ಸ್ಮರಣಾರ್ಥ ಮಕ್ಕಳಿಂದ ಮತ್ತು ಬೆಂಗಳೂರು ಓರ್ವ ಭಕ್ತರಿಂದ) ಮಧ್ಯಾಹ್ನ ಅನ್ನಸಂತರ್ಪಣೆ ಸೇವೆ ಸೇವಾಕರ್ತರು: ಕೆ.ವೈ. ಶ್ರೀಕಾಂತ ವಿಶ್ರಾಂತಿ ಭವನ, ಜಯನಗರ ಬೆಂಗಳೂರು)
ಸಂಜೆ 6 ಕ್ಕೆ ರಥಾವರೋಹಣ ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜ.13 ಮಂಗಳವಾರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ “ಕೃಷ್ಣಾಮೃತ” ವಿದ್ವಾನ್ ಡಾ|| ಪ್ರಿಯಾ ಗಣೇಶರವರ ಶಿಷ್ಯವೃಂದ, ಸಮುದ್ಭವ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು, ಜ.14 ಬುಧವಾರ ಸಂಜೆ 6.30 ರಿಂದ “ಮಧುರ ಗೀತೆಗಳ ಸುಮಧುರ ಯಾನ” ಶಿವಮೊಗ್ಗ ಸಂಗೀತ ಬಳಗ, ಜ.15 ಗುರುವಾರ ಸಂಜೆ 6ಕ್ಕೆ “ಭರತನಾಟ್ಯ” ಕು|| ಹಿತಾ ಮಯ್ಯ ಉಡುಪಿ, ಸಂಜೆ 7 ರಿಂದ “ಕಾಲಮಿತಿ ಯಕ್ಷಗಾನ” ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕೋಟ, ಜ.16 ಶುಕ್ರವಾರ ವೈವಿಧ್ಯಮಯ ಕಾರ್ಯಕ್ರಮ : ಯುವವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆ, ಜ.17ರಂದು “ಯಕ್ಷಗಾನ ಬಯಲಾಟ” ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ ಇವರಿಂದ. ಜ.18ರಂದು “ವೈವಿಧ್ಯಮಯ ಕಾರ್ಯಕ್ರಮ” ಶ್ರೀ ಗುರುಫ್ರೆಂಡ್ಸ್ ರಥಬೀದಿ, ಸಾಲಿಗ್ರಾಮ, ಜ.19 ಸೋಮವಾರ “ದಾಸ ಸಂಕೀರ್ತನೆ” ವಿದುಷಿ ಜಯಂತಿ ಶ್ರೀಧರ ಉಪಾಧ್ಯಾಯ, ಕುಂಭಾಶಿ ನಡೆಯಲಿದೆ.

ಶ್ರೀ ಗುರುಧಾಮ ಯಾತ್ರಿ ನಿವಾಸ:
ಸಾಲಿಗ್ರಾಮದಲ್ಲಿ ಶ್ರೀದೇವಳದ ಸೇವಾರ್ಥಿಗಳಿಗೆ ಸುಸಜ್ಜಿತವಾದ ವಸತಿ ವ್ಯವಸ್ಥೆಗಾಗಿ ಶ್ರೀ ಗುರುನರಸಿಂಹ ದೇವಳದ ಈಶಾನ್ಯ ಭಾಗದಲ್ಲಿ ಶ್ರೀ ಗುರುಧಾಮ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ಜ.1-2025ರಂದು ಈ ಯಾತ್ರಿ ನಿವಾಸ ಕಾರ್ಯರಂಭಗೊಂಡು ಕಾರ್ಯನಿರ್ವಹಿಸುತ್ತಿದೆ. ಶ್ರೀಗುರುದಾಮದಲ್ಲಿ 37 ಹವಾನಿಯಂತ್ರಿತ ಮತ್ತು ಟಿವಿ ಹೊಂದಿರುವ ಕೊಠಡಿಗಳು, ಮಹಿಳೆಯರಿಗೆ ಮತ್ತ ಮಹನೀಯರಿಗೆ ಪ್ರತ್ಯೇಕ ಸಮೂಹ ವಸತಿ ಕೊಠಡಿ ವ್ಯವಸ್ಥೆ, 24 ಗಂಟೆ ಸೇವಾನಿರತ ಸಿಬ್ಬಂದಿ ಮತ್ತು ವಿದ್ಯುತ್ ಹಾಗೂ ಬಿಸಿನೀರು ಸರಬರಾಜು, ಸ್ವಯಂಚಾಲಿತ ಏರಿಳಿತ ಯಂತ್ರ, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸುಧಾರಿತ ತ್ಯಾಜ್ಯ ವಿಲೇವಾರಿ ಘಟಕವನ್ನು ಹೊಂದಿದೆ. ಕೊಠಡಿಗಳನ್ನು ಕಾಯ್ದಿರಿಸಲು ದೂರವಾಣಿ ಸಂಖ್ಯೆ-8073592127 ಸಂಪರ್ಕಿಸಬಹುದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!