spot_img
Saturday, March 7, 2026
spot_img

ರಾಮಕೃಷ್ಣ ಮಠ ವಾರ್ಷಿಕೋತ್ಸವದಲ್ಲಿ ಲವ-ಕುಶ ಯಕ್ಷಗಾನ ಪ್ರದರ್ಶನ

ಬೆಂಗಳೂರು: ಶ್ರೀ ರಾಮಕೃಷ್ಣ, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ವಾರ್ಷಿಕ ಜನ್ಮದಿನೋತ್ಸವದ ಅಂಗವಾಗಿ ಬೆಂಗಳೂರಿನ ಕೆ. ಮೋಹನ್ ನಿರ್ದೇಶನದ ಯಕ್ಷದೇಗುಲ ತಂಡ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ 7-1-2026 ರಂದು ಲವ-ಕುಶ ಕಾಳಗ ಯಕ್ಷಗಾನ ಪ್ರದರ್ಶನ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ನಡೆಯಿತು. ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ ಮುಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ಮದ್ದಲೆಯಲ್ಲಿ, ಸಂಪತ್ ಚಂಡೆಯಲ್ಲಿ ಆದಿತ್ಯ ಮುಮ್ಮೇಳದಲ್ಲಿ, ಬಾಲಕೃಷ್ಣ ಭಟ್, ತಮ್ಮಣ್ಣ ಗಾಂವ್ಕರ್, ಪ್ರಶಾಂತ್ ವರ್ಧನ, ದಿನೇಶ್ ಕನ್ನಾರ್, ಸಂತೋಷ, ದೇವರಾಜ ಕರಬ, ಶ್ರೀರಾಮ ಹೆಬ್ಬಾರ್, ಹರ್ಷಿತ್, ಶಾಶ್ವತ್ ಮತ್ತು ಸುಹಾಸ್ ಭಾಗವಹಿಸಿದರು. ಮೊದಲಿಗೆ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಮಕ್ಕಳಿಂದ ಬಾಲಗೋಪಾಲ ನಡೆಯಿತು. ಈ ಸಂದರ್ಭ ರಾಮಕೃಷ್ಣ ಮಠದ ಸ್ವಾಮೀಜಿಗಳು ಯಕ್ಷದೇಗುಲದ ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್ ಮತ್ತು ತಮ್ಮಣ್ಣ ಗಾಂವ್ಕರ್‌ರವರನ್ನು ಸನ್ಮಾನಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!