spot_img
Saturday, March 7, 2026
spot_img

ಶೀರೂರು ಪರ್ಯಾಯ: ಜ.9ರಂದು ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರ ಪ್ರವೇಶ | ಜ.18ರಂದು ಪರ್ಯಾಯೋತ್ಸವ

udupi: ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಉಡುಪಿಯ ಶ್ರೀಕೃಷ್ಣ ದೇವರ ನಿತ್ಯ ಪೂಜಾ ಕೈಂಕರ್ಯಗಳು ಅಷ್ಟಮಠದ ಯತಿಗಳವರಿಂದ ಪ್ರತಿದಿನವೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುತ್ತಿದೆ. ಶ್ರೀಮಧ್ವ-ವಾದಿರಾಜ ಯತಿವರ್ಯರು ರೂಪಿಸಿದ ಸತ್ಸಂಪ್ರದಾಯದಂತೆ ಪ್ರಸ್ತುತ ಶೀರೂರು ಮಠದ ಪೀಠಾಧಿಪತಿಗಳಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿ ಧಾರ್ಮಿಕ ಸಂಚಾರದಲ್ಲಿ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ, ಶ್ರೀ ಮಠದ ಪಟ್ಟದ ದೇವರೊಂದಿಗೆ, ಶ್ರೀ ಸ್ವಾಮೀಜಿಯವರ ಪುರಪ್ರವೇಶದ ಮೆರವಣಿಗೆಯು ದಿನಾಂಕ 09 ಜನವರಿ 2026 ರಂದು ಮಧ್ಯಾಹ್ನ 3 ಘಂಟೆಗೆ ಶ್ರೀ ಶೀರೂರು ಮೂಲಮಠದಿಂದ ಹೊರಟು ಹಿರಿಯಡ್ಕ, ಪರ್ಕಳ, ಮಣಿಪಾಲ, ಕಡಿಯಾಳಿ ಮಾರ್ಗವಾಗಿ ಸಾಯಂಕಾಲ 5:45 ಘಂಟೆಗೆ ಉಡುಪಿಯ ಶ್ರೀಮಠವನ್ನು ಪ್ರವೇಶ ಮಾಡಲಿದ್ದಾರೆ. ಅದೇ ದಿನ ಸಂಜೆ 6:30 ಘಂಟೆಗೆ ಉಡುಪಿಯ ರಥಬೀದಿಯಲ್ಲಿ ಭಾವೀ ಪರ್ಯಾಯ ಶ್ರೀಪಾದರಿಗೆ ಪೌರ-ಸಮ್ಮಾನ ನಡೆಯಲಿದೆ.

ಜನವರಿ 18 ಜನವರಿ 2026ರಂದು ಅಷ್ಟಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಭವ್ಯವಾದ ಪರ್ಯಾಯ ಮೆರವಣಿಗೆಯು ನಸುಕಿನ ಜಾವ 3 ಘಂಟೆಗೆ ಜೋಡುಕಟ್ಟೆಯಿಂದ ಹೊರಟು ಮುಂಜಾನೆ 5:45 ಘಂಟೆಗೆ ಪರ್ಯಾಯ ಶ್ರೀ ಶೀರೂರು ಮಠಾಧೀಶರು ಪ್ರಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿ. ಮುಂದಿನ ಎರಡು ವರ್ಷಗಳ (2026-2028) ಅವಧಿಗೆ ಶ್ರೀಕೃಷ್ಣ ದೇವರ ನಿತ್ಯ ಪೂಜಾ ಕೈಂಕರ್ಯವನ್ನು ನಡೆಸಲಿದ್ದಾರೆ.

ವಿಶೇಷ ಸೇವೆಗೆ ಅವಕಾಶ: ಪರ್ಯಾಯ ಶ್ರೀಪಾದರು ಮಧ್ಯಾಹ್ನ ಮಹಾಪೂಜೆಯ ಸಂದರ್ಭದಲ್ಲಿ ಶ್ರೀಕೃಷ್ಣ ದೇವರಿಗೆ 14 ಸೇರು ಅಕ್ಕಿಯ(ಉರುಳಿ) ನೈವೇದ್ಯವನ್ನು ಸಮರ್ಪಣೆ ಮಾಡುತ್ತಾರೆ. ಅನ್ನ-ಬ್ರಹ್ಮ ಶ್ರೀಕೃಷ್ಣ ದೇವರ ಪ್ರತೀ ಪೂಜಾ ಸಮಯದಲ್ಲಿ, ಪ್ರಕೃತಿಯ ಕೊಡುಗೆಗಳಾದ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಸಮರ್ಪಣೆಯು ಭಗವಂತನಿಗೆ ಅರ್ಪಿಸಲ್ಪಡುವ ಅತಿದೊಡ್ಡ ಸೇವೆಯಾಗಿದೆ. ಶ್ರೀಕೃಷ್ಣ ದೇವರಿಗೆ ನಿತ್ಯವೂ ಅನ್ನ ನೈವೇದ್ಯದೊಡನೆ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಕೂಡಾ ಸಮರ್ಪಿಸಲಾಗುತ್ತಿದೆ. ಶಾಸ್ತ್ರದಲ್ಲಿ ತಿಳಿಸಿರುವಂತೆ ಶ್ರೀದೇವರಿಗೆ ಅರ್ಪಿಸಲಾಗುವ ಒಂದು ತೆಂಗಿನಕಾಯಿಯ ಸಮರ್ಪಣೆಯು ಒಂದು ಸೇರು ಅಕ್ಕಿಯ (ಉರುಳಿ) ನೈವೇದ್ಯಕ್ಕೆ ಸಮ ಎಂದು ಪ್ರಮಾಣೀಕರಿಸಲಾಗಿದೆ.

ಶ್ರೀಭಕ್ತ ಜನರ ಒತ್ತಾಸೆಯ ಮೇರೆಗೆ ಭಾವೀ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಪ್ರತಿ ಮನೆಯಿಂದ ಕನಿಷ್ಠ ಹದಿನಾಲ್ಕು ತೆಂಗಿನಕಾಯಿಗಳನ್ನು ಶ್ರೀಕೃಷ್ಣದೇವರ ನಿತ್ಯಪೂಜೆಗೆ ವಿನಿಯೋಗಿಸಲು ಅನುಕೂಲವಾಗುವಂತೆ ವಿಶೇಷ ಸೇವೆಗೆ ಅವಕಾಶ ಕಲ್ಪಿಸಿರುತ್ತಾರೆ.

ಉಡುಪಿಯ ಶ್ರೀಕೃಷ್ಣನ ಕ್ಷೇತ್ರದಲ್ಲಿ ಅನ್ನ ಪ್ರಸಾದದ ಸ್ವೀಕಾರ ಹಾಗೂ ಅನ್ನದಾನ ಸೇವೆಯು ಕೂಡಾ ಅತ್ಯಂತ ಫಲಪ್ರದವೆಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಪ್ರತಿನಿತ್ಯ ಯತಿಗಳು ಉಷಃಕಾಲದಲ್ಲಿ ಶ್ರೀಕೃಷ್ಣ ದೇವರಿಗೆ ಮಂಗಳಾರತಿ ಬೆಳಗಿ ಅಕ್ಷಯಪಾತ್ರೆಗೆ ಪೂಜೆ ಸಲ್ಲಿಸುತ್ತಾರೆ. ಜಗದ್ಗುರು ಶ್ರೀ ಮಧ್ವಾಚಾರ್ಯರ ಸಂಕಲ್ಪಾನುಸಾರವಾಗಿ ಕಳೆದ ಎಂಟು ಶತಮಾನಗಳಿಂದ ಈ ಪೂಜೆ ಇಂದಿಗೂ ಶ್ರೀಕೃಷ್ಣ ದೇವರ ಗರ್ಭಗೃಹದಲ್ಲಿರುವ ಅಕ್ಷಯಪಾತ್ರೆಗೆ ಸಲ್ಲುತ್ತದೆ.

ಪರ್ಯಾಯೋತ್ಸವದ ಪ್ರಮುಖ ಪರ್ವ ದಿನಗಳಾದ 2026ರ ಜನವರಿ 17 ಮತ್ತು 18 ರಂದು ಪರ್ಯಾಯ ಸಂಭ್ರಮದ ವೀಕ್ಷಣೆಯ ಜೊತೆಗೆ ಅನ್ನಬ್ರಹ್ಮ ಶ್ರೀಕೃಷ್ಣದೇವರ ಅನ್ನಪ್ರಸಾದ ಸೇವಿಸಲು ಲಕ್ಷಕ್ಕೂ ಮಿಕ್ಕಿ ಭಕ್ತ ಸಮುದಾಯ ಶ್ರೀ ಸನ್ನಿಧಿಗೆ ಆಗಮಿಸಲಿದ್ದಾರೆ. ಭಕ್ತರು ಅನ್ನಸಂತರ್ಪಣೆಗೆ ಹಸಿರು ಹೊರೆಕಾಣಿಕೆ ಸಮರ್ಪಣೆಗೂ ಅವಕಾಶ ನೀಡಲಾಗಿದೆ. ಜನವರಿ 10ರಂದು ಶ್ರೀಕೃಷ್ಣ ಭಕ್ತರಿಗೆ ಹೊರೆ ಕಾಣಿಕೆ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಹೊರೆಕಾಣಿಕೆ ಬಗ್ಗೆ ಕ್ಷೇತ್ರವಾರು ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!