spot_img
Saturday, March 7, 2026
spot_img

ಹಂಗಳೂರು: ಬೈಕ್ ಗೆ ಟಿಪ್ಪರ್ ಡಿಕ್ಕಿ :ಬೈಕ್ ಸವಾರ ಬಲಿ

ಕುಂದಾಪುರ: ಶೆಟ್ರಕಟ್ಟೆ ರಸ್ತೆ ಅಪಘಾತದ ಘಟನೆ ಮಾಸುವ ಮುನ್ನವೆ ಮರಳು ತುಂಬಿದ ಟಿಪ್ಪರ್ ಲಾರಿ ಹೊಂಡಾ ಅಕ್ಟಿವ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹಂಗಳೂರು ಯೂನಿಟಿ ಹಾಲ್ ಬಳಿ ಸಂಭವಿಸಿದೆ.

ಕೋಟೇಶ್ವರ ಕಡೆ ತೆರಳುತ್ತಿದ್ದ ಕೃಷ್ಣಮೂರ್ತಿ ಅಡಿಗ ಬೀಜಾಡಿ (58) ಮೃತ ದುರ್ದೈವಿ.
ಬೆಳಿಗ್ಗೆ 10-00 ಘಂಟೆಗೆ ಹಂಗಳೂರು ಗ್ರಾಮದ ಹಂಗಳೂರು ಜಂಕ್ಷನ್ ಹತ್ತಿರದ ಜನನಿ ಹೋಮ್ ಅಪ್ಲಾಯನ್ಸಸ್ ಎದುರು  ಅದೇ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಮರಳು ಲೋಡ್ ಇದ್ದ ಟಿಪ್ಪರ್ ಲಾರಿ ನಂಬ್ರ KA 20 C 6406 ನೇದನ್ನು ಅದರ ಚಾಲಕ ಶ್ರೇಯಾಂಶ ಯುವರಾಜ ಜೈನ್ ಎಂಬುವವನು ಟಿಪ್ಪರನ್ನು ಅತೀ ವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿ ಸವಾರನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಕೂಟಿ ಸಮೇತ ರಸ್ತಗೆ ಬಿದ್ದು ಟಿಪ್ಪರ್ ಲಾರಿ ಆತನ ಮೇಲೆ ಹಾದು ಹೋದ ಪರಿಣಾಮ ಸ್ಕೂಟಿ ಸವಾರನ ತಲೆಗೆ ಹಾಗೂ ಎದೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!