spot_img
Saturday, March 7, 2026
spot_img

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಗೆ ಜರ್ಮನಿಯ ಜೂಡಿತ್ ಹೆರ್ಮುನ್ ಭೇಟಿ

ಕುಂದಾಪುರ: ಭಾರತೀಯ ಪರಂಪರೆಗಳ ಅರಿವು ನೀಡುತ್ತಾ ಬಂದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿಗೆ ಜರ್ಮನಿ ಮೂಲದ ಜೂಡಿತ್ ಹೆರ್ಮನ್ ತಮ್ಮ ಮಗನ ಜೊತೆಗೆ ದಿನಾಂಕ ಜ.೫ರಂದು ಭೇಟಿ ನೀಡಿದರು. ಹೃಷಿಕೇಶದ ಪ್ರಸಿದ್ಧ ವೈದ್ಯರಾದ ಡಾ| ತನು ವರ್ಮ, ಮಂಗಳೂರಿನ ಕಿಶೋರ್ ಕೂಡ ಅವರ ಜೊತೆಗಿದ್ದರು. ಶಾಲೆಯ ಮತಂಗವನ, ಶೃಂಗವನ, ಕಣಾದವನ, ಘಟೋತ್ಕಚ, ವ್ಯಾಯಾಮಸ್ಥಳ, ಶಿಬಿವನ, ತರಗತಿ, ವಸತಿ ನಿಲಯವೇ ಮೊದಲಾದ ಪ್ರದೇಶಗಳಿಗೆ ಹೋಗಿ ಮಾಹಿತಿಗಳನ್ನು ಪಡೆದುಕೊಂಡರು. ಅಧ್ಯಯನ, ಅಧ್ಯಾಪನದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ಸಂತಸವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಜರ್ಮನಿ ಮತ್ತು ಭಾರತದ ನಡುವಿನ ಭಿನ್ನತೆಯ ಜೊತೆಗೆ ಸಾಮಾನ್ಯ ಅಂಶಗಳನ್ನು ಮಗನಾದ ಆಲ್ಬರ್ಟೊ ಡೆಸ್ಕಾನಿಯೋವಿಗೆ ಪರಿಚಯಿಸಲು ಭಾರತದ ಬೇರೆ ಬೇರೆ ಸ್ಥಳಗಳನ್ನು ಪ್ರವಾಸ ಮಾಡುತ್ತಿದ್ದೇವೆ. ಇದರಿಂದ ಜಗತ್ತನ್ನು, ಜನರನ್ನು ಹಾಗೂ ಶಾಲೆಗಳ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ಶ್ರೀಮತಿ ವೀಣಾರಶ್ಮಿ ಎಮ್, ಶಾಲಾ ಉಪಪ್ರಾಂಶುಪಾಲರಾದ ಶ್ರೀ ರಾಮ ದೇವಾಡಿಗ, ಶಿಕ್ಷಕ-ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ, ಮಾಹಿತಿಯನ್ನು ಸ್ವೀಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!