spot_img
Monday, March 16, 2026
spot_img

ಬೆಳ್ವೆ ವ್ಯ.ಸೇ.ಸ.ಸಂಘದ ಮಹಾಸಭೆ: 2 ಕೋಟಿ 41 ಲಕ್ಷ ಲಾಭ | ರೈತ ಪರವಾದ ಯೋಜನೆಗಳ ಜ್ಯಾರಿ: ಎಸ್.ಜಯರಾಮ ಶೆಟ್ಟಿ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಸೆ.18: ಸಂಘವು ರೈತ ಪರವಾದ ಯೋಜನೆಗಳ ಮೂಲಕ ಯಶಸ್ಸನ್ನು ಸಾದಿಸಿದೆ. ಕೇವಲ ಲಾಭವನ್ನಷ್ಟೇ ನೋಡಿಕೊಳ್ಳದೇ ರೈತರಿಗೆ ಪೂರಕವಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಬಾರಿ 42 ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿರದಲ್ಲಿ ರೈತರಿಗೆ ಸಾಲ ಒದಗಿಸಲಾಗಿದೆ ಎಂದು ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಜಯರಾಮ ಶೆಟ್ಟಿ ಹೇಳಿದರು.

ಅವರು ಗುರುವಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ 90ಶೇಕಡಾ ರೈತರನ್ನು ಶೂನ್ಯ ಬಡ್ಡಿ ಸಾಲದ ವ್ಯಾಪ್ತಿಗೆ ತರಲಾಗಿದೆ. ಇದು 100 ಶೇಕಡಾ ಮಾಡುವ ಗುರಿ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ಅಭಿವೃದ್ಧಿ ಸಾಲವನ್ನು ನೀಡಿದ್ದೇವೆ. ರೈತರ ಉಪಯೋಗಕ್ಕಾಗಿ 1 ಉಳುಮೆ ಯಂತ್ರವಿದ್ದು, 6 ಬಾಡಿಗೆ ತಂದು ರೈತರಿಗೆ ಕಡಿಮೆ ಬಾಡಿಗೆಯಲ್ಲಿ ನೀಡಿದ್ದೇವೆ. ಈಗಾಗಲೇ ಒಂದು ಭತ್ತದ ಕಟಾವು ಯಂತ್ರವಿದ್ದು, ಇನ್ನು ಎರಡು ಕಟಾವು ಯಂತ್ರಗಳು ಒಂದು ತಿಂಗಳ ಒಳಗಾಗಿ ತರಲಿದ್ದೇವೆ. ಇದು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದರು.

2 ಕೋಟಿ 41 ಲಕ್ಷ ಲಾಭವನ್ನು ಮಾಡಿದೆ. ಸಂಘವು 824 ಕೋಟಿ ವ್ಯವಹಾರ ಸಾಧಿಸಿದ್ದು, ಸಂಘ 4 ಶಾಖೆಗಳ ಮೂಲಕ 104 ಕೋಟಿ ರೂ ಠೇವಣಿ ಸಂಗ್ರಹಿಸಿದೆ. 116 ಕೋಟಿ ಸಾಲವನ್ನು ನೀಡಲಾಗಿದೆ. ಹೈನುಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.4.10 ಕೋಟಿ ಸಾಲವನ್ನು ನೀಡಲಾಗಿದೆ. ಸಂಘವು ಈ ಬಾರಿ ಗುರಿ ಮೀರಿದ ಸಾಧನೆ ಮಾಡಿದ್ದು 16ಶೇಕಡಾ ಡಿವಿಡೆಂಡ್ ನೀಡಲಾಗುವುದು ಎಂದರು.

ಸತತ 20 ವರ್ಷಗಳಿಂದ ಅಡಿಟ್ ವರ್ಗೀಕರಣದಲ್ಲಿ ಎ ತರಗತಿಯನ್ನು ಕಾಯ್ದುಕೊಂಡಿದೆ. 7301 ಎ ತರಗತಿಯ ಸದಸ್ಯರಿದ್ದು, 5020 ಸ್ವ ಸಹಾಯ ಗುಂಪಿನ ಸದಸ್ಯರಿದ್ದಾರೆ. 400 ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡಿದ್ದು, ಯಶಸ್ವಿಯಾಗಿ ಮರುಪಾವತಿ ಆಗುತ್ತಿದೆ ಎಂದರು.
ಸಂಘ ಅಭಿವೃದ್ಧಿಯಲ್ಲಿ ಠೇವಣಿದಾರರ ಪಾತ್ರ ಬಹಳ ಮುಖ್ಯವಾದುದು. ಠೇವಣಿ ಇಡುವ ಮೊದಲು ಸಂಘದ ಜಾತಕ ನೋಡುತ್ತಾರೆ. ಅಂತಹ ನಂಬಿಕೆಯನ್ನು ಠೇವಣಿದಾರರು ಸಂಘದ ಮೇಲೆ ಇಟ್ಟಿದ್ದಾರೆ. ಆ ನಂಬಿಕೆಯಿಂದಲೇ 100 ಕೋಟಿಗೂ ಮಿಕ್ಕಿದ ಠೇವಣಿ ಸಂಗ್ರಹವಾಗಿದೆ ಎಂದು ಎಸ್. ಜಯರಾಮ ಶೆಟ್ಟಿ ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿ ಕುಮಾರ್ ಶೆಟ್ಟಿ ವಾರ್ಷಿಕ ಕಲಾಪಗಳನ್ನು ಸದಸ್ಯರ ಮುಂದಿಟ್ಟರು. ವಾರ್ಷಿಕ ವರದಿಯ ಮೇಲೆ ಚರ್ಚೆ ನಡೆದು ವಾರ್ಷಿಕ ಸರ್ವ ಸದಸ್ಯರ ಸಭೆ ಒಪ್ಪಿಗೆ ನೀಡಿ ಅಂಗೀಕರಿಸಿತು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಆಸ್ತಿ ಎಸ್. ಶೆಟ್ಟಿ ಮತ್ತು ವಾಣಿಜ್ಯ ವಿಭಾಗದಲ್ಲಿ 5ನೇ ರ್ಯಾಂಕ್ ಪಡೆದ ಅನನ್ಯ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುರೂರು ಶಾಲೆಯ ಶ್ರೀಮತಿ ಸರಸ್ವತಿ ಮತ್ತು ಆರೋಗ್ಯ ಸೇವೆಯಲ್ಲಿ ಗುರುತಿಸಿಕೊಂಡ ಡಾ. ಅನಂತ ಕೃಷ್ಣ ಅಡಿಗ ಇವರುಗಳನ್ನು ಸನ್ಮಾನಿಸಲಾಯಿತು.

ಪ್ರಗತಿಪರ ಕೃಷಿಕರೂ, ಸಾಮಾಜಿಕ ಕಾರ್ಯಕರ್ತರೂ, ಇತ್ತೀಚೆಗೆ ಬ್ರಹ್ಮಾವರ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬೆಳ್ವೆ ಸತೀಶ್ ಕಿಣಿ ಮತ್ತು ಸಂಘದ ನಿರ್ದೇಶಕರಾಗಿ ಇದೀಗ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶಿವರಾಮ ಹಾಲಾಡಿಯವರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಗಳ ಸಹಾಯಧನವನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಹರೀಶ್ ಕಿಣಿ ಬಿ., ಉದಯ ಶೆಟ್ಟಿ, ಸೀತರಾಮ ಶೆಟ್ಟಿ ಹೆಚ್.ಕೆ. ಇಚ್ಛಿತಾರ್ಥ ಶೆಟ್ಟಿ, ದಯಾನಂದ ಆರ್. ಶೆಟ್ಟಿ, ಶಿವರಾಮ, ಚಂದ್ರಶೇಖರ ಶೆಟ್ಟಿ ಎಂ. ಪ್ರದೀಪ, ದಯಾನಂದ ಪೂಜಾರಿ ಕೆ., ಕೃಷ್ಣ ನಾಯ್ಕ್, ಶ್ರೀಮತಿ ಸುಜಾತ ಪೂಜಾರಿ, ಶ್ರೀಮತಿ ಸವಿತ, ವೃತ್ತಿಪರ ನಿರ್ದೇಶಕರಾದ ಜಯದೇವ ಹೆಗ್ಡೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾಧ ಹರೀಶ್ ಕಿಣಿ ಬಿ. ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಎಂ. ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!