spot_img
Monday, February 16, 2026
spot_img

ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘ ಕ್ಷೀಪ್ರ ಅವಧಿಯಲ್ಲಿ ವೇಗದ ಮುನ್ನೆಡೆ: 72 ಲಕ್ಷ ಲಾಭ, ಶೇ.12 ಡಿವಿಡೆಂಡ್-ಪ್ರಭಾಕರ ಶೆಟ್ಟಿ

ಜನಪ್ರತಿನಿಧಿ ವಾರ್ತೆ] ಸೆ.18: ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘ ಅತ್ಯಂತ ಕ್ಷೀಪ್ರ ಅವಧಿಯಲ್ಲಿ ಸದಸ್ಯರ ಸಂಪೂರ್ಣ ಸಹಕಾರ, ವಿಶ್ವಾಸದಿಂದ ವೇಗದ ಮುನ್ನಡೆ ಇಡುತ್ತಿದೆ. ಪ್ರಾರಂಭದ ಮೂರನೇ ವರ್ಷದಲ್ಲಿಯೇ ಜಡ್ಕಲ್ ಗ್ರಾಮದ ಹೃದಯ ಭಾಗದಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ಖರೀದಿಸಿ, ಶಿಲಾನ್ಯಾಸ ನೇರವೇರಿಸಿ, ಸುಸಜ್ಜಿತ ಸ್ವಂತ ಕಟ್ಟಡ, ಗೋದಾಮು, ಹವಾನಿಯಂತ್ರಿತ ಕಚೇರಿ ಉದ್ಘಾಟನೆಗೊಂಡಿತು. ಪ್ರತೀ ವರ್ಷವೂ ಲಾಭದ ಹೆಜ್ಜೆ ಇರಿಸುತ್ತಾ ಬಂದಿರುವ ಸಂಘವು ವರದಿ ವರ್ಷದಲ್ಲಿ 203 ಕೋಟಿ ವಾರ್ಷಿಕ ವಹಿವಾಟು ನಡೆಸಿ, ರೂ.7205382.83 ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ತಿಳಿಸಿದರು.

ಅವರು ಸೆ.18ರಂದು ಬೀಸಿನಪಾರೆಯಲ್ಲಿರುವ ಜಡ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ‘ಸಹಕಾರ ಸಿರಿ’ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಡ್ಕಲ್‍ನಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವಂತಹ ಸೇವೆಗಳನ್ನು ನೀಡುತ್ತಿದ್ದೇವೆ. ಇದು ಜನರಿಗೆ ತಲುಪಿದೆ ಎನ್ನುವ ತೃಪ್ತಿ ಇದೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೂ ಸಹಕಾರ ನೀಡುತ್ತಾ ಬಂದಿದ್ದೇವೆ. ಸಂಘದ ವತಿಯಿಂದ ಈಗಾಗಲೇ ಜಡ್ಕಲ್ ಚರ್ಚ್ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದೆ. ಸಂಘವು ಸದಸ್ಯರ ಆರ್ಥಿಕ ಪ್ರಗತಿಯೊಂದಿಗೆ ಸಮಾಜಮುಖಿಯಾಗಿಯೂ ತೊಡಗಿಸಿಕೊಂಡಿದೆ ಎಂದರು.

ಸಂಘವು ವರದಿ ವರ್ಷದ ಅಂತ್ಯಕ್ಕೆ 2056 ‘ಎ’ ತರಗತಿ ಸದಸ್ಯರು, 955 ‘ಸಿ’ ತರಗತಿ ಸದಸ್ಯರು, 303 ‘ಡಿ’ ತರಗತಿ ಸದಸ್ಯರು, 53 ‘ಇ’ ತರಗತಿ ಸದಸ್ಯರನ್ನು ಹೊಂದಿದ್ದು, ಒಟ್ಟು ರೂ.24930014 ಪಾಲು ಹಣವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ.17,12,51,505.73 ಠೇವಣಾತಿ ಹೊಂದಿದ್ದು, ರೂ.34393058.37 ನಿಧಿಗಳನ್ನು ಹೊಂದಿದೆ. ರೂ.4457097 ಸವಕಳಿ ನಿಧಿಯನ್ನು ಹೊಂದಿದೆ. ರೂ.201611196 ಸಾಲವನ್ನು ಪಡೆದು ಸದಸ್ಯರ ವಿವಿಧ ಉದ್ದೇಶಗಳಿಗೆ ವಿತರಿಸಲಾಗಿದೆ. ರೂ.1107286.49 ಸಹಾಯಧನವನ್ನು ಒದಗಿಸಿಕೊಡಲಾಗಿದೆ ಎಂದರು.

ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪಾಲುಬಂಡವಾಳವಾಗಿ ರೂ.99,33,000 ಹಾಗೂ ಕ್ಷೇಮನಿಧಿ ರೂ.1,63,20,521ನ್ನು ವಿನಿಯೋಗಿಸಿದೆ. ವರ್ಷಾಂತ್ಯಕ್ಕೆ ರೂ.7,20,97,773 ಒಟ್ಟು ವಿನಿಯೋಗ ಇರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಸಂಘದ ಠೇವಣಾತಿ ಹೆಚ್ಚಳ ಮಾಡುವುದು, ಸಾಲ ವಸೂಲಾತಿಯನ್ನು ಹೆಚ್ಚಿಸುವುದು, ಸದಸ್ಯರ ಇತರ ಅಗತ್ಯತೆಯ ಸಾಲ ನೀಡುವುದು, ಕೃಷಿ ಬಗ್ಗೆ ತಜ್ಞರಿಂದ ಮಾಹಿತಿ ಶಿಬಿರದ ಮೂಲಕ ಮಾಹಿತಿ ನೀಡುವುದು, ಸಂಘದ ಕಛೇರಿ ವಠಾರದಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ಯೋಜನೆ ಸಿದ್ಧ ಪಡಿಸುವುದು, ಮೃತದೇಹ ಶೀಥಲೀಕರಣ ಪ್ರೀಜರ್ ಬಾಕ್ಸ್ ಖರೀದಿ, ವಾಣಿಜ್ಯ ಕಟ್ಟಡ ನಿರ್ಮಾಣದ ಯೋಜನೆ, ಸಂಘದ ಸದಸ್ಯರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಗುರಿ ಹೊಂದಿದೆ ಎಂದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಶ್ರೀಮತಿ ಶೋಭನಾ ಹಿಂದಿನ ಸಭೆಯ ನಡಾವಳಿ, ಹಾಗೂ ವಾರ್ಷಿಕ ವರದಿ ವಾಚಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ದೇವದಾಸ, ನಿರ್ದೇಶಕರಾದ ಗುರುರಾಜ ಪೂಜಾರಿ, ಪುನೀತ್ ಶೆಟ್ಟಿ, ರವೀಂದ್ರ ಶೆಟ್ಟಿ, ಜೋಸಫ್ ಕೆ.ಎಮ್., ವಿನೋದ್ ಜಾರ್ಜ್, ಮಹಾಬಲ ಪೂಜಾರಿ, ಮನೋಜ್ ಪಿ.ಜೆ., ಎನ್.ಸುರೇಂದ್ರ ನಾಯ್ಕ, ಮುತ್ತ, ಶ್ರೀಮತಿ ರೋಸಮ್ಮ, ಶ್ರೀಮತಿ ನಾಗರತ್ನ ಎನ್.ಶೆಟ್ಟಿ, ಸ.ಸಂಘಗಳ ಮೇಲ್ವಿಚಾರಕರಾದ ಶಿವರಾಮ ಪೂಜಾರಿ ಉಪಸ್ಥಿತರಿದ್ದರು.

ನರ್ಮದಾ ಮತ್ತು ಪುಷ್ಪ ಪ್ರಾರ್ಥನೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ದೇವದಾಸ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಪ್ರಸಾದ್ ಅವರು ಅಯ-ವ್ಯಯ ಪಟ್ಟಿ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ವಿನೋದ್ ಜಾರ್ಜ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!