spot_img
Friday, January 30, 2026
spot_img

ಸುರಭಿ ಬೈಂದೂರು ವತಿಯಿಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆ

ಬೈಂದೂರು: ಸುರಭಿ ರಿ, ಬೈಂದೂರು ಇದರ ರಜತ ವರ್ಷದ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ಕಥಾ ಸ್ಪರ್ಧೆ-2025 ಆಯೋಜಿಸಿದೆ. ವಿಜೇತರಿಗೆ ಪ್ರಥಮ ಬಹುಮಾನ ರೂ.10,000, ದ್ವಿತೀಯ-ರೂ.8,000, ತೃತೀಯ-ರೂ.5,000 ಬಹುಮಾನ ನೀಡಲಾಗುವುದು.

ಕಥೆ ಸ್ವತಂತ್ರ ರಚನೆಯಾಗಿರಬೇಕು, ಈ ಹಿಂದೆ ಎಲ್ಲೂ ಪ್ರಕಟ/ ಪ್ರಸಾರವಾಗಿರಬಾರದು. ಕೃತಿ ಹಕ್ಕುಸ್ವಾಮ್ಯಕ್ಕೆ ಲೇಖಕರೇ ಜವಬ್ದಾರರು. ಕಥೆಗಳು ಕನಿಷ್ಠ 800ರಿಂದ 1000 ಪದಗಳ ಮಿತಿಯಲ್ಲಿರಬೇಕು, ಸ್ಪರ್ಧಿಯ ಹೆಸರು, ಲೇಖಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರವನ್ನು ಕಥೆಯೊಂದಿಗೆ ಕಳುಹಿಸಬೇಕು, ಸ್ಪರ್ಧೆಗೆ ಕಳುಹಿಸಿದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ, ಕಥೆಯನ್ನು ಎ4 ಗಾತ್ರದ ಪೇಪರ್‍ನಲ್ಲಿ ಟೈಪ್ ಮಾಡಿ ಕಳುಹಿಸಬೇಕು, ಕಥೆಗಳನ್ನು ಕಳುಹಿಸಲು ಸೆಪ್ಟೆಂಬರ್ 20 -2025 ಕೊನೆಯ ದಿನವಾಗಿರುತ್ತದೆ. ವಿಜೇತರಿಗೆ ದೂರವಾಣಿ ಮೂಲಕ ತಿಳಿಸಲಾಗುವುದು, ಅಕ್ಟೋಬರ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು, ಸಂಘಟಕರ ತೀರ್ಮಾನವೇ ಅಂತಿಮ.

ಕಥೆಗಳನ್ನು ಸುಧಾಕರ ಪಿ., ನಿರ್ದೇಶಕರು, ಸುರಭಿ ರಿ., ಬೈಂದೂರು. ಬೈಂದೂರು ತಾಲೂಕು, ಉಡುಪಿ ಜಿಲ್ಲೆ-576214. ದೂರವಾಣಿ ಸಂಖ್ಯೆ-9945944269, 9343743340, 9900476719.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!