spot_img
Saturday, February 14, 2026
spot_img

ಕನ್ಯಾನ: ಸಾರ್ವಜನಿಕ ರಸ್ತೆ ತಡೆ: ತೆರವು ಸಂದರ್ಭದಲ್ಲಿ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

ಕುಂದಾಪುರ: ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದನ್ನು ತೆರವುಗೊಳಿಸುವ ಸಂದರ್ಭ ರಸ್ತೆ ಅತಿಕ್ರಮಿಸಿಕೊಂಡ ಗುಂಪು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಕವಡೇಕರ್ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನ ಗ್ರಾಮದ ಸರ್ವೇ ನಂಬ್ರ 105/ಪಿ2 ರಲ್ಲಿ ಗಾಣಿಗರಕೇರಿಗೆ ಹೋಗುವ ರಸ್ತೆಯಲ್ಲಿ ಸಿಂಗಾರಿ ಗಾಣಿಗ ಕಡೆಯವರು ತಡೆ ಉಂಟು ಮಾಡಿದ್ದು ಈ ರಸ್ತೆ ತಕರಾರಿನ ವಿಚಾರದಲ್ಲಿ ಸಿಂಗಾರಿ ಗಾಣಿಗ ಕಡೆಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ಈ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಅಲ್ಲದೇ ೨೧ ದಿನಗಳವರೆಗೆ ಯಥಾಸ್ಥಿತಿ ಕಪಾಡುವಂತೆಯೂ ಅಲ್ಲದೇ ಈ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಾರದೆ ಇರುವ ಪಕ್ಷದಲ್ಲಿ ಗ್ರಾಮಸ್ಥರ ದೂರಿನಂತೆ ರಸ್ತೆಗೆ ಅಡ್ಡಪಡಿಸಿರುವುದನ್ನು ತೆರವುಗೊಳಿಸುವರೇ ನ್ಯಾಯಾಲಯದ ಆದೇಶ ಇರುತ್ತದೆ.

ಅದರಂತೆ ಗ್ರಾಮ ಪಂಚಾಯತ್ ಆಗಸ್ಟ್ 25 ರಂದು ಬೆಳಿಗ್ಗೆ 11 ಗಂಟೆಗೆ ರಸ್ತೆ ತೆರವು ಕಾರ್ಯ ಕಾಮಗಾರಿ ನಡೆಸಲು ನಿರ್ಣಯ ತೆಗೆದುಕೊಂಡು ಅದೇ ಪ್ರಕಾರ ಭದ್ರತೆಗೆ ಪೊಲೀಸ್ ರಕ್ಷಣೆಯನ್ನು ಕೋರಿ ಮನವಿಯನ್ನು ನೀಡಿ ಆ ಪ್ರಕಾರ ಅಂದು 11 ಗಂಟೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಇತರರೊಂದಿಗೆ ಪೊಲೀಸ್ ಭದ್ರತೆಯಲ್ಲಿ ಜೆಸಿಬಿಯಲ್ಲಿ ರಸ್ತೆ ತೆರವು ಕಾರ್ಯ ನಿರ್ವಹಿಸುತ್ತಿದ್ದಾಗ ಆಪಾದಿತರಾದ ಸಿಂಗಾರಿ ಗಾಣಿಗ, ಸುರೇಶ ಗಾಣಿಗ, ಸುಮಿತ್ರಾ, ಗೌತಮಿ, ರಾಘವೇಂದ್ರ, ಚೈತ್ರ ರವರುಗಳು ಗುಂಪು ಕಟ್ಟಿಕೊಂಡು ಈ ಸ್ಥಳಕ್ಕೆ ಬಂದು ಈ ಜಾಗ ನಮ್ಮದು ಇಲ್ಲಿ ಕೆಲಸ ಮಾಡಬೇಡಿ, ಕೆಲಸ ಮಾಡಲು ಬಿಡುವುದಿಲ್ಲ ಎಂಬುವುದಾಗಿ ಹೇಳಿ ಕೆಲವು ಮಹಿಳೆಯರು ರಸ್ತೆಗೆ ಅಡ್ಡ ಮಲಗಿದ್ದು ಹಾಗೂ ಕೆಲವರು ಜೆಸಿಬಿಗೆ ಅಡ್ಡ ನಿಂತು ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ದೂರು ನೀಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2025 ಕಲಂ: 189(2), 191(2),191(3),132 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!