spot_img
Saturday, February 14, 2026
spot_img

ಮಂದಾರ್ತಿ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: 112 ಕೋಟಿ ಠೇವಣಿ | ರೂ.1.20 ಕೋಟಿ ಲಾಭ | ಶೇ.18% ಡಿವಿಡೆಂಡ್ ಘೋಷಣೆ

ಕುಂದಾಪುರ: ಯಶಸ್ವಿ 100ನೇ ವರ್ಷದ ಸಂಭ್ರಮದಲ್ಲಿರುವ ಮಂದಾರ್ತಿ ಸೇವಾ ಸಹಕಾರ ಸಂಘವು ಒಟ್ಟು 1003 ಸದಸ್ಯರನ್ನು ಹೊಂದಿ, ರೂ.3,06,01,212 ಪಾಲುಬಂಡವಾಳವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ.112,36,48,238.60 ಠೇವಣಾತಿ ಹೊಂದಿದ್ದು, ವರ್ಷದ ಕೊನೆಯಲ್ಲಿ ರೂ.17,08,41,220.87 ಠೇವಣಿಯಲ್ಲಿ ಹೆಚ್ಚಳ ಸಾಧಿಸಿದೆ. ವರದಿ ವರ್ಷದ ಅಂತ್ಯಕ್ಕೆ ರೂ.1,20,02,710.40 ಲಾಭ ಗಳಿಸಿದೆ ಎಂದು ಮಂದಾರ್ತಿ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಗಂಗಾಧರ ಶೆಟ್ಟಿ ತಿಳಿಸಿದರು.

ಅವರು ಆಗಸ್ಟ್ 26 ಮಂಗಳವಾರ ಮಂದಾರ್ತಿ ಚಾಮುಂಡೇಶ್ವರಿ ಸಭಾಭವನ ಪ್ರಧಾನ ಕಛೇರಿ ಮಂದಾರ್ತಿ ಇಲ್ಲಿ ನಡೆದ ಸಂಘದ 100ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಶೇ.18% ಡಿವಿಡೆಂಡ್ ಘೋಷಣೆ ಮಾಡಿದರು

.
ಸಂಘವು ದಿನಾಂಕ 31-03-2024ಕ್ಕೆ ಸದಸ್ಯರ ಹೊರ ಬಾಕಿ ಸಾಲ ರೂ.94,90,90,035 ಇದ್ದು, ವರ್ಷದಲ್ಲಿ ರೂ.134,24,53,200 ವಿತರಣೆ ಮಾಡಲಾಗಿದೆ. ವರ್ಷದಲ್ಲಿ 116,57,62,559 ಜಮಾ ಆಗಿದ್ದು, ವರ್ಷಾಂತ್ಯಕ್ಕೆ ರೂ.112,57,80,670 ಹೊರಬಾಕಿ ಇರುತ್ತದೆ ಎಂದರು.

ಸಂಘವು ವಿವಿಧ ಸಂಸ್ಥೆಗಳಲ್ಲಿ ರೂ.33,83,38,959.45 ಹಣವನ್ನು ತೊಡಗಿಸಿದೆ. ವಿವಿಧ ಸಂಸ್ಥೆಗಳಲ್ಲಿ ರೂ.1,15,67,250 ಪಾಲು ಬಂಡವಾಳವನ್ನು ತೊಡಗಿಸಿದೆ. ವಿವಿಧ ಬ್ಯಾಂಕುಗಳಲ್ಲಿ ರೂ.3,31,73,922.21 ಮೊಬಲಗು ತೊಡಗಿಸಿದೆ ಎಂದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರೂ.12,88,984.02 ಮಾಲು ಖರೀದಿಸಿ ರೂ.13,95,920.30 ಮಾರಾಟವಾಗಿದ್ದು, ರೂ.2,48,175.60 ವ್ಯಾಪಾರ ಲಾಭವಾಗಿದೆ. ವರ್ಷಾಂತ್ಯಕ್ಕೆ ರೂ.3,19,425.32 ಅಂತಿಮ ಮಾಲು ದಾಸ್ತಾನು ಇರುತ್ತದೆ ಎಂದರು.

ಸಂಘವು ವರದಿ ವರ್ಷದ ಅಂತ್ಯಕ್ಕೆ ರೂ.15404.18 ದುಡಿಯುವ ಬಂಡವಾಳವನ್ನು ಹೊಂದಿದ್ದು ರೂ.1,20,02,710.40 ನಿವ್ವಳ ಲಾಭ ಗಳಿಸಿದೆ. ವರದಿ ವರ್ಷದಲ್ಲಿ ರೈತ ಸದಸ್ಯರಿಗೆ ಬಡ್ಡಿ ಸಹಾಯ ಧನದಲ್ಲಿ ರೂ.1,18,44,031.40 ದೊರಕಿಸಿ ಕೊಟ್ಟಿದ್ದು, ಸರಕಾರದಿಂದ ರೂ.1,25,38,370.09 ಬರಲು ಬಾಕಿ ಇರುತ್ತದೆ. ಸಂಘವು ಕಾರ್ಯಕ್ಷೇತ್ರದಲ್ಲಿ ಸದಸ್ಯರ ಜೀವನೋಪಾಯಕ್ಕೆ ಉಪ ಕಸುಬನ್ನು ಅಳವಡಿಸುವ ನಿಟ್ಟಿನಲ್ಲಿ ಹೈನೋದ್ಯಮ ಮತ್ತು ಗ್ರಾಮಾಂತರ ಪ್ರದೇಶದ ಸ್ವ-ಉದ್ಯೋಗ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ವಾಹನ ಸಾಲ ಮತ್ತು ಗೃಹ ನಿರ್ಮಾಣ ಸಾಲವನ್ನು ನೀಡಿದೆ. ವರದಿ ವರ್ಷದಲ್ಲಿ 337 ಸ್ವಸಹಾಯ ಸಂಘವು ಉಳಿತಾಯ ಖಾತೆಯನ್ನು ಹೊಂದಿದ್ದು ರೂ.5,82,25,000 ಸಾಲ ನೀಡಲಾಗಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಶ ಶೆಟ್ಟಿ ಕಾಡೂರು, ನಿರ್ದೇಶಕರಾದ ಕೆ.ಶಂಭುಶಂಕರ ರಾವ್, ಗಣೇಶ ಶೆಟ್ಟಿ, ಪ್ರಥ್ವಿರಾಜ್ ಆರ್ ಶೆಟ್ಟಿ, ಜಲಂದರ ಶೆಟ್ಟಿ, ದಿನೇಶ ಮರಕಾಲ, ಚಂದ್ರಶೇಖರ, ಶ್ರೀಮತಿ ಪ್ರೇಮ, ಶ್ರೀಮತಿ ಗುಲಾಬಿ, ಶ್ರೀಮತಿ ರಾಧ, ಬಸವ ನಾಯ್ಕ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಪ್ರತಿನಿಧಿ ಬಿ.ಅಶೋಕ್ ಕುಮಾರ್ ಶೆಟ್ಟಿ, ವೃತ್ತಿಪರ ನಿರ್ದೇಶಕ ಗುರುಪ್ರಸಾದ್, ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಭೆಯಲ್ಲಿ ಆಯ್ದ ರೈತ ಸದಸ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಶಕ್ತ ಸದಸ್ಯರಿಗೆ ಪರಿಹಾರ ವಿತರಣೆ ಮಾಡಲಾಯಿತು. ವೈದ್ಯಕೀಯದಲ್ಲಿ ಮಂದಾರ್ತಿ ಸರಕಾರಿ ಆಸ್ಪತ್ರೆಯ ಆಡಳೀತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ.ಅನಿಲ್ ಕುಮಾರ್ ಶೆಟ್ಟಿ,ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಟಿ,ಹಿರಿಯಣ್ಣ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.

ಸುಪ್ರೀತ ಡಿ ಶೆಟ್ಟಿ ಪ್ರಾರ್ಥನೆ ಮಾಡಿದರು. ಉಪಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು ಸ್ವಾಗತಿಸಿ, ನಿರ್ದೇಶಕ  ಗುರುಪ್ರಸಾದ್ ವಂದಿಸಿದರು. ಸುದರ್ಶನ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!