spot_img
Tuesday, March 31, 2026
spot_img

ಪಂಚಗ್ಯಾರಂಟಿ ಯೋಜನೆ: ಕುಂದಾಪುರ ತಾಲೂಕಿಗೆ ಜುಲೈಯಲ್ಲಿ 15.94 ಕೋಟಿ ಬಿಡುಗಡೆ-ಹೆಚ್.ಹರಿಪ್ರಸಾದ್ ಶೆಟ್ಟಿ

ಕುಂದಾಪುರ: ಪಂಚಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದು ಜುಲೈ ಅಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಯಲ್ಲಿ ರೂ. 7,04,26,000, ಗೃಹ ಜ್ಯೋತಿ ರೂ.4,37,45,109, ಶಕ್ತಿ ಯೋಜನೆಯಲ್ಲಿ 2,55,27,659, ಅನ್ನಭಾಗ್ಯ ಯೋಜನೆಯಲ್ಲಿ 1,97,83,845 ಒಟ್ಟು ರೂ.15,94,82,613 ದೊರೆತಿದೆ. ಒಟ್ಟು ತಾಲೂಕಿಗೆ ಮೊತ್ತ 396,70,81,852 ಬಿಡುಗಡೆಯಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‍ನಿಂದ ಅವಕಾಶ ನೀಡುವ ಬಗ್ಗೆ ಸಚಿವರು ತಿಳಿಸಿದ್ದು, ಹೊಸ ಕಾರ್ಡಿಗೆ ಅವಕಾಶ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡೋಣ ಎಂದು ಹೇಳಿದರು.

ಹೊಸಮನೆ ನಿರ್ಮಾಣದ ಸಂದರ್ಭದಲ್ಲಿ ತಾತ್ಕಾಲಿಕ ವಿದ್ಯುತ್ ಪರವಾನಿಗೆ ನೀಡುವ ವಿಚಾರದಲ್ಲಿ ಮೆಸ್ಕಾಂ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ, ಸಲಹೆ ಪಡೆಯುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಇಕೆವೈಸಿ ಮತ್ತು ಆಧಾರ್ ಸೀಡಿಂಗ್ ಗೊಂದಲ ನಿವಾರಿಸುವಂತೆ ತಿಳಿಸಿದರು.

ಗಂಗೊಳ್ಳಿಯಿಂದ ಬೈಂದೂರಿಗೆ ನೇರ ಕೆ.ಎಸ್.ಆರ್.ಟಿ.ಸಿ ಬಸ್ ಸಂಪರ್ಕ ಕಲ್ಪಿಸಬೇಕು. ಈಗಾಗಲೇ ಗಂಗೊಳ್ಳಿಯ ಎರಡು ವಿದ್ಯಾಸಂಸ್ಥೆಯವರು ಮನವಿ ಸಲ್ಲಿಸಿದ್ದಾರೆ. ಗಂಗೊಳ್ಳಿಯಿಂದ ಬೈಂದೂರು ಭಾಗಕ್ಕೆ ಹೋಗಲು ನೇರ ಬಸ್ ಸಂಪರ್ಕ ಅಗತ್ಯವಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಜಹೀರ್ ಆಹಮ್ಮದ್ ಹೇಳಿದರು.

ನಾಡ, ಬಡಾಕೆರೆ ಭಾಗದ ಬಸ್ ಗೆ ತಾತ್ಕಾಲಿಕ ಪರವಾನಿಗೆ ನೀಡುವ ವಿಚಾರದಲ್ಲಿ ಜಿಲ್ಲಾಧಿಕಾರಿ ವರ್ಗಾವಣೆಯಿಂದ ಸ್ಪಲ್ಪ ಹಿನ್ನೆಡೆಯಾಯಿತು. ಇನ್ನೂ ಹದಿನೈದು ದಿನಗಳಲ್ಲಿ ತಾತ್ಕಾಲಿಕ ಪರವಾನಿಗೆ ಸಿಗಲಿದೆ ಎಂದು ಹೇಳಿದ ಹರಿಪ್ರಸಾದ್ ಶೆಟ್ಟಿ ಅವರು, ಮೈಸೂರು-ಕೊಲ್ಲೂರು ಹುಣಸೂರು ಡಿಪೋ ಬಸ್ ಮಂಗಳೂರು ತನಕವಷ್ಟೇ ಬರುತ್ತದೆ. ಕೊಲ್ಲೂರಿಗೆ ಮುಂದುವರಿಸುವ ಅಥವಾ ಕುಂದಾಪುರದಿಂದ ಕೊಲ್ಲೂರಿಗೆ ಬೇರೆ ಬಸ್ ಓಡಿಸುವ ಬಗ್ಗೆ ಆಲೋಚಿಸಿ ಎಂದು ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ತಿಳಿಸಿದರು.

ಸದಸ್ಯ ಚಂದ್ರ ಕಾಂಚನ್ ಮಾತನಾಡಿ ತಿಂಗಳ ವಿದ್ಯುತ್ ಬಿಲ್ ತಿಂಗಳ ದಿನಾಂಕದ ಒಳಗೆ ನೀಡಬೇಕು. ಇಲ್ಲದಿದ್ದರೆ ಗೊಂದಲವಾಗುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಇಕೆವೈಸಿ ಮತ್ತು ಆಧಾರ್ ಸೀಡಿಂಗ್ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸರ್ಕಾರ ಮಟ್ಟದಲ್ಲಿ ಐಟಿ ಮತ್ತು ಜಿಎಸ್‍ಟಿ ಗೊಂದಲವಿರುವ ಕುಟುಂಬಗಳ ಸರಿಪಡಿಸುವ ಕಾರ್ಯ ಮುಗಿದಿದ್ದು, ಗೃಹಲಕ್ಷ್ಮೀ ಯೋಜನೆಯ ಆರ್ಹತೆ ಇದ್ದು, ಹಣ ಬಾರದೆ ಇರುವ ಫಲಾನುಭವಿಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಇಲಾಖೆಗೆ ಮಾಹಿತಿ ನೀಡಬೇಕು ಎಂದರು. ವಯಸ್ಸಾದವರ ಬೆರಳಚ್ಚು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕುಟುಂಬಗಳಲ್ಲಿ ವಯಸ್ಸಾದ ಒಬ್ಬೊಬ್ಬರೆ ಇರುತ್ತಾರೆ. ಇವರಿಗೆ ಸಮಸ್ಯೆಯಾಗದಂತೆ ನಿಯಮ ರೂಪಿಸಬೇಕು ಎಂದರು.

ಎಪಿಎಲ್ ಕುಟುಂಬಗಳಿಗೂ ರಿಯಾಯತಿ ದರದಲ್ಲಿ ಅಕ್ಕಿ ನೀಡಬೇಕು, ಹೊಸ ಪಡಿತರ ಚೀಟಿ, ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಸದಸ್ಯರು ಹೇಳಿದರು.

ಸಭೆಯಲ್ಲಿ ವಸುಂಧರ ಹೆಗ್ಡೆ, ಚಂದ್ರ ಕಾಂಚನ್, ಅಬಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಗಣೇಶ, ಸವಿತಾ ಪೂಜಾರಿ, ಮಂಜು ಕೊಠಾರಿ, ಜಹೀರ್ ಆಹಮದ್ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾಮಚಂದ್ರ ಮಯ್ಯ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!