spot_img
Monday, March 16, 2026
spot_img

ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬ

ಸಿದ್ಧಾಪುರ: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬ ಜೂನ್ ೧೩ ಶುಕ್ರವಾರ ನಡೆಯಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಈ ಹಬ್ಬವು ‘ನಾವು ಭರವಸೆಯ ಯಾತ್ರಿಕರಾಗೋಣ’ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಸಂತ ಅಂತೋನಿಯವರು ಬಹಳ ಪ್ರಭಾವ ಶಾಲಿ ಸಂತರು, ಅವರಿಂದ ನಡೆಯುವ ಪವಾಡಗಳಿಗೆ ಇತಿಮಿತಿಯಿಲ್ಲ, ಬಹಳಷ್ಟ್ಟು ಭಕ್ತರನ್ನು ಹೊಂದಿದ್ದಾರೆ, ಸಂತ ಅಂತೋನಿಯವರು ಯೇಸುಕ್ರಿಸ್ತರ ಮೇಲೆ ಬಹಳ ಭರವಸೆ ಇಟ್ಟು ಪ್ರಾರ್ಥಿಸುತ್ತಾರೆ, ಸಂತ ಅಂತೋನಿಯವರಲ್ಲಿ, ಅನನ್ಯ ವಿಧೇಯತೆ, ಸಹಿಷ್ಣತೆ, ನಮ್ರತೆ, ಬಡತನದ ಜೀವನ ಕ್ರಮ ಈ ಉದ್ದಾತ ಗುಣಗಳನ್ನು ಹೊಂದಿದ್ದರು ಎಂದು ಹೇಳಿದ ಅವರು, ಸಂತ ಅಂತೋನಿಯವರ ಹೆಸರಿನಲ್ಲಿ ಸಿದ್ದವಾಗುವ ಅನಾಥಾಲಯ ಈ ವರ್ಷದ ಅಂತ್ಯದೊಳಗೆ, 60 ಜನ ಆನಾಥರಿಗೆ ಆಶ್ರಯ ಊಟ ತಿಂಡಿ ಎಲ್ಲವನ್ನು ಉಚಿತವಾಗಿ ನೀಡುವ 60 ಜನರಿಗಾಗುವಷ್ಟು ಸಾಮರ್ಥ್ಯ ಉಳ್ಳ ಈ ಆಶ್ರಮ ಸಂಪೂರ್ಣಗೊಳಿಸಲು ಚಿಂತಿಸಿದ್ದೇವೆ, ಆಮೇಲೆ ಇಲ್ಲಿ ಸಣ್ಣ ದೇವಾಲಯ ಇದೆ, ಅದು ಭಕ್ತಾಧಿಗಳ ಅನುಕೂಲಕ್ಕೆ ಹಾಗೂ ಪ್ರಾರ್ಥನ ಚಟುವಟಿಕೆಗಳಿಗೆ ಅಡಚಣೆ ಇದೆ, ಅದಕ್ಕಾಗಿ ನೂತನ ಚರ್ಚನ್ನು ನಿರ್ಮಿಸುವ ಯೋಜನೆ ಇದೆ, ಇದಕ್ಕೆಲ್ಲ ಆರ್ಥಿಕ ಸಹಾಯ ಅಗತ್ಯವಿದೆ, ಹಾಗಾಗಿ ಎಲ್ಲರ ದಾನ ಅಗತ್ಯವಿದೆ, ಎಲ್ಲರೂ ಸಹಕರಿಸಬೇಕು” ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಅವರು ‘ಅಹ್ಮಾದವಾದ್ ನಲ್ಲಿ ಸಂಭವಿಸಿದ ವಿಮಾನ ದುರಂತಲ್ಲಿ ಮಡಿದವರಿಗೆ ಶಾಂತಿ ಮತ್ತು ಅವರ ಕುಟುಂಬದವರಿಗೆ ಸಾಂತಾನ್ವವನ್ನು ಕೋರಿದರು.

ಧರ್ಮಗುರು ವಂ|ವಿರೇಶ್ ವಿಕ್ಟರ್ ಮೊರಾಸ್ ಮಾತನಾಡಿ, ನಮ್ಮ ದಿನ ನಿತ್ಯದ ಜೀವನದಲ್ಲಿ ಅವಘಡ ದುರಂತಗಳು ಆಗುತ್ತಿರುತ್ತವೆ, ನಮ್ಮಲ್ಲಿಯೂ ಕಷ ನಷ್ಟ ರೋಗ, ಸಾವು ನೋವುಗಳು, ದೇಶ ದೇಶಗಳ ನಡುವೆ ಸಂಘರ್ಷ ಯುದ್ದ ಸಂಭವಿಸುತ್ತವೆ, ಆವಾಗ ನಾವು ದೇವರು ಇದ್ದಾರೋ ಎಂಬ ಅಪಭರವಸೆ ನಮಗಾಗುತ್ತದೆ, ಆದರೆ ಇದೆಲ್ಲವೂ ನಮಗೆ ಅಧ್ಯಾತ್ಮಿಕತೆಗೆ ಒಳಗಾಗಲು ಪ್ರೇರೆಪಿಸುತ್ತವೆ. ನಾವು ಈ ಪ್ರಪಂಚದ ಜೀವನದಲ್ಲಿ ಎಷ್ಟ್ಟು ಉನ್ನತ ಮಟ್ಟಕ್ಕೆ ಏರಿದರೂ, ಒಂದಲ್ಲ ಒಂದು ದಿವಸ ಈ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು, ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಸಂದೇಶ ನೀಡಿದರು.

ನೂತನವಾಗಿ ಆಯ್ಕೆಯಾದ ಕುಂದಾಪುರ ವಲಯದ ಪ್ರಧಾನರು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಹಬ್ಬದ ಶುಭಾಷಯಗಳನ್ನು ಕೋರಿದರು. ಉಡುಪಿ ಧರ್ಮಪ್ರಾಂತ್ಯದ ಅ|ವಂ| ವಿಕಾರ್ ಜನರಲ್ ಅ|ವಂ|ಮೊನ್ಸಿಂಜ಼ೊರ್ ಫರ್ಡಿನಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ನೂತನ ಛಾನ್ಸಲರ್ ಅ|ವಂ|ಸ್ಟೀವನ್ ಡಿಸೋಜಾ, ಕುಂದಾಪುರ ವಲಯದ ಎಲ್ಲ ಧರ್ಮಕೇಂದ್ರದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಬಲಿದಾನದಲ್ಲಿ ಭಾಗಿಯಾದರು.

ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಭಗಿನಿಯರು ಭಾಗಿಯಾಗಿದ್ದು ಭಕ್ತಾಧಿಗಳು ಮಳೆಯನ್ನು ಲೆಕ್ಕಿಸಿದೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೋಟೆಶ್ವರ, ಚರ್ಚಿನ ಗಾಯನ ಮಂಡಳಿ ಭಕ್ತಿ ಗಾಯನಗಳನ್ನು ಹಾಡಿದರು. ಕೋಟ ಚರ್ಚಿನವರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು.

ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದಿಸಿದರು. ಸಂಜೆ ಧರ್ಮಗುರು ವಂ|ವಿರೇಶ್ ವಿಕ್ಟರ್ ಮೊರಾಸ್ ಇವರು ಕನ್ನಡದಲ್ಲಿ ಬಲಿದಾನ ಮತ್ತು ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!