spot_img
Monday, March 16, 2026
spot_img

ಹಾಲಾಡಿ: ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ ಶ್ರೀರಾಮ ಶೆಟ್ಟಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ

ಹಾಲಾಡಿ: ಹೆಗ್ಗುಂಜೆ ರಾಜೀವ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಲಾಡಿ ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಶ್ರೀ ರಾಮ್ ಶೆಟ್ಟಿ ಎಸ್.ಎಸ್.ಎಲ್.ಸಿ ಪರೀಕ್ಷೆ-2ರಲ್ಲಿ 625/625 ಪೂರ್ಣಾಂಕ  ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಇವನಿಗೆ 619 ಅಂಕ ಬಂದಿತ್ತು. ಈಗ ಶಾಲೆಯ ಒಟ್ಟು ಫಲಿತಾಂಶ 99%ಕ್ಕೆ ಏರಿದೆ ಎಂದು ಮುಖ್ಯಶಿಕ್ಷಕಿ ರೋಶನ್ ಬೇಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜ್ಞಾನ ಮತ್ತು ಇಂಗ್ಲೀಷ್ ವಿಷಯವನ್ನು ಮರು ಪರೀಕ್ಷೆ ಬರೆದಿದ್ದು ಪೂರ್ಣ ಅಂಕ ಪಡೆದಿದ್ದಾರೆ. ಎರಡು ವಿಷಯದಲ್ಲಿ ಕಡಿಮೆ ಅಂಕ ಬಂದಾಗ ಮರು ಮೌಲ್ಯಮಾಪನಕ್ಕೆ ಹಾಕಿದ್ದಾರೆ. ಅಲ್ಲಿ ಒಂದು ಅಂಕ ಬಂದಾಗ ಮರು ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಜೂನ್ 13ರಂದು ಮರುಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪೂರ್ಣಾಂಕ ದೊರೆತಿದೆ.
ಶ್ರೀರಾಮ ಶೆಟ್ಟಿ ಪ್ರಸ್ತುತ ಯಡಾಡಿ-ಮತ್ಯಾಡಿಯ ಸುಜ್ಞಾನ ಕಾಲೇಜಿನಲ್ಲಿ ಪಿಯುಸಿ (ಪಿಸಿ‌ಎಂಸಿ‌ಎಸ್) ಓದುತ್ತಿದ್ದಾರೆ. ಇವರು ಶಂಕರನಾರಾಯಣ ಸಮೀಪದ ಕೊಂಡಳ್ಳಿ ಬಡಾಹಕ್ಲುಮನೆ ಸುಧಾಕರ ಶೆಟ್ಟಿ ಮತ್ತು ಜಯಂತಿ ದಂಪತಿಯ ಪುತ್ರ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!