spot_img
Wednesday, April 1, 2026
spot_img

ಉಡುಪಿ : ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹೇಯ ಕೃತ್ಯ !

ಜನಪ್ರತಿನಿಧಿ (ಉಡುಪಿ) : ಕೇವಲ ಮೀನು ಕದ್ದ ಕಾರಣಕ್ಕೆ ಮಹಿಳೆಯನ್ನ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವಂತಹ ಅಮಾನವೀಯ ಘಟನೆ ಕೃಷ್ಣನಗರಿ ಉಡುಪಿ ತಾಲೂಕಿ ಮಲ್ಪೆ ಮೀನುಗಾರಿಕ ಬಂದರಿನಲ್ಲಿ ನಡೆದಿದೆ. ಸದ್ಯ ದುಷ್ಕೃತ್ಯ ಎಸಗಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಮೀನು ಕದ್ದ ಆರೋಪದ ಹಿನ್ನಲೆ ಮಹಿಳೆ ಕಪಾಳಕ್ಕೆ ಬಾರಿಸಿ ಅಮಾನವೀಯವಾಗಿ ವರ್ತಿಸಲಾಗಿದೆ.

ಘಟನೆ ವೇಳೆ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಸದ್ಯ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಕದ್ದ ಆರೋಪದ ಮೇಲೆ ಲಕ್ಷ್ಮೀ ಬಾಯಿ ಎಂಬುವವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ. ಸದ್ಯ ಪೊಲೀಸರು ಸುಂದರ್‌, ಶಿಲ್ಪ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಿಡಿಯೋ ಪರಿಶೀಲಿಸಿ ಆರೋಪಿಗಳ ಶೀಘ್ರ ಬಂಧನ : ಅರುಣ್‌ ಕುಮಾರ್  

ಘಟನೆ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕುಮಾರ್​​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ವಿಜಯನಗರ ಜಿಲ್ಲೆಯಿಂದ ಬಂದಿರುವ ಮಹಿಳೆಯ ಮೇಲೆ ಸ್ಥಳೀಯ ಮಹಿಳೆಯರಿಂದ ಹಲ್ಲೆ ನಡೆದಿದೆ. ಮೀನು ಕದ್ದ ಆರೋಪದ ಮೇಲೆ ಲಕ್ಷ್ಮೀ ಬಾಯಿ ಎಂಬುವವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದರು.

ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ್‌, ಶಿಲ್ಪ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಪರಿಶೀಲಿಸಿ ಇನ್ನಷ್ಟು ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಯಾರು ಹಲ್ಲೆ ತಡೆಯುವ ಪ್ರಯತ್ನ ಮಾಡಲಿಲ್ಲ: ಡಿಸಿ

ಇನ್ನು ಘಟನೆ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತೀವ್ರವಾಗಿ ಖಂಡಿಸಿದ್ದು, ಸಣ್ಣ ತಪ್ಪು ಮಾಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿರುವುದು ತಪ್ಪು. ಹಲ್ಲೆ ನಡೆಸುವವರು ಒಂದು ಕಡೆಯಾದರೆ, ಉಳಿದವರು ನಗುತ್ತ ನಿಂತಿದ್ದರು. ಯಾರು ಕೂಡ ಹಲ್ಲೆ ತಡೆಯುವ ಪ್ರಯತ್ನ ಮಾಡಲಿಲ್ಲ. ಜನರ ಮನಸ್ಥಿತಿ ಈ ರೀತಿಯಾದರೆ ಕಷ್ಟ ಎಂದಿದ್ದಾರೆ.

ಯಾರಿಗೋ ಒಬ್ಬರಿಗೆ ಹಿಂಸೆಯಾಗುವಾಗ ನಾವು ನಗುವುದು ತಪ್ಪು. ನಾವು ಎತ್ತ ಸಾಗುತ್ತಿದ್ದೇವೆ ಅನ್ನೋ ಪ್ರಶ್ನೆ ಕಾಡುತ್ತೆ. ಈಗಾಗಲೇ ಉಡುಪಿ ಎಸ್​ಪಿಯವರಿಗೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಇನ್ನೊಂದು ಬಾರಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು  ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!