spot_img
Wednesday, July 8, 2026
spot_img

ಯುಬಿಎಂಸಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಭೆ

ಕುಂದಾಪುರ; ದಿನಾಂಕ 3 -07-2026 ಶುಕ್ರವಾರ ಮಧ್ಯಾಹ್ನ2.30ಕ್ಕೆ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಮತ್ತು ಸಿ ಎಸ್ ಐ ಕೃಪಾ ನರ್ಸರಿ ಶಾಲೆ ಕುಂದಾಪುರ ಇದರ 2026- 27 ನೇ ಸಾಲಿನ ಶೈಕ್ಷಣಿಕ ವರ್ಷದ “ಒಟ್ಟಾಗಿ ಬೆಳೆಯೋಣ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಿಕ್ಷಕರಕ್ಷಕ ಸಭೆ ನಡೆಯಿತು. ಈ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಸಿ ಎಸ್ ಐ ಕೃಪಾ ಚರ್ಚ್ನ ಧರ್ಮ ಗುರುಗಳಾದ ರೆವೆರೆಂಡ್ ಜಯಕರ್ ರವರು “ಇಂದಿನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ, ಕೆಟ್ಟ ಚಟ ಗಳಿಂದ ಮಕ್ಕಳು ದೂರವಿರುವಂತೆ ಶಿಕ್ಷಕರು ರಕ್ಷಕರು ಆದಷ್ಟು ಜಾಗೃತೆ ವಹಿಸಬೇಕು” ಎಂದರು. ಅಂತೆಯೇ ಸಿಎಸ್‌ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ “ಮಕ್ಕಳಿಗೂ ಸ್ವಯಂ ಗೌರವವಿದೆ. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ” ಎಂದರು.  ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅನಿತಾ ಅಲಿಸ್ ಡಿಸೋಜ ರವರು “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ಪೋಷಕ ಇಬ್ಬರೂ ಕೂಡ ಒಟ್ಟಾಗಿ ಶ್ರಮಿಸಬೇಕಾಗುತ್ತದೆ” ಎಂದರು.
ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ರವರು ಶಾಲೆಯ ಬಗ್ಗೆ ಪೋಷಕರಿಂದ ಸಲಹೆಗಳನ್ನು ತೆಗೆದುಕೊಂಡು ಅದಕ್ಕೆ ಪರಿಹಾರಗಳನ್ನು ಸೂಚಿಸಿದರು. ಸಹ ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು. ಶಿಕ್ಷಕಿ ಪವಿತ್ರ ಕೊತ್ವಾಲ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ವೀಣಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!