spot_img
Monday, April 6, 2026
spot_img

ಬ್ರಹ್ಮಾವರ: ಅಹೋರಾತ್ರಿ ಸತ್ಯಾಗ್ರಹ 15ನೇ ದಿನಕ್ಕೆ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ, ಮಾ.8: ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಬಹುಕೋಟಿ ಹಗರಣದ ವಿರುದ್ಧ ಉಡುಪಿ ಜಿಲ್ಲಾ ರೈತ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ 15ನೇ ದಿನಕ್ಕೆ ಮುಟ್ಟಿದೆ.

೧೫ನೇ ದಿನದ ಧರಣಿ ಸತ್ಯಾಗ್ರಹವನ್ನು ಉಡುಪಿ ಜಿಲ್ಲಾ ರೈತ ಸಂಘದ ಪೆರ್ಡೂರು ವಲಯ ಮತ್ತು ಹಳ್ನಾಡು ದೇವಾನಂದ ಶೆಟ್ಟಿ ನೇತೃತ್ವದ ತಂಡದ ವತಿಯಿಂದ 150ಕ್ಕೂ ಹೆಚ್ಚು ಮಂದಿ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಪೆರ್ಡೂರು ವಲಯದ ಅಧ್ಯಕ್ಷ ಸುಧಾಕರ ಶೆಟ್ಟಿ ಬಜೆ, ಮೈರಮಾಡಿ ಸುಧಾಕರ ಶೆಟ್ಟಿ, ದೇವಾನಂದ ಶೆಟ್ಟಿ ಹಳ್ನಾಡು ನೇತೃತ್ವ ವಹಿಸಿದ್ದರು.
ರೈತ ಮುಖಂಡರಾದ ಶಾಂತರಾಮ ಸೂಡ, ರಾಜ್ ಕುಮಾರ್ ಶೆಟ್ಟಿ ಬೆಳಂಜೆ, ಪೆರ್ಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮಾಜಿ ಜಿ.ಪಂ.ಸದಸ್ಯರಾದ ಗೋಪಿ ಕೆ ನಾಯ್ಕ, ಚಾಂತಾರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಸರಸ್ವತಿ ನಾಯ್ಕ, ಮುಖಂಡರಾದ ಅಶೋಕ ಶೆಟ್ಟಿ ಬೆಳ್ಳಂಪಳ್ಳಿ, ಮಾಜಿ ಶಾಸಕ ಬಸವರಾಜ, ಕಿರಣ ಕುಮಾರ್ ಶೆಟ್ಟಿ ಹಾವಂಜೆ, ಅಬ್ದುಲ್ ಮುನಾಫ್ ಕಂಡ್ಲೂರು ಮುಂತಾದವರು ಉಪಸ್ಥಿತರಿದ್ದರು.

ಸತ್ಯಾಗ್ರಹಕ್ಕೆ ಆಗಮಿಸಿದ ಎಲ್ಲರನ್ನು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಆತ್ಮೀಯವಾಗಿ ಬರ ಮಾಡಿಕೊಂಡರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!