spot_img
Thursday, April 2, 2026
spot_img

ಬಿ.ಬಿ. ಹೆಗ್ಡೆ ಕಾಲೇಜು: ರೋಟರಾಕ್ಟ್ ಕ್ಲಬ್‌ನಿಂದ ಆನಗಳ್ಳಿ ಶಾಲೆಯಲ್ಲಿ ವಿಸ್ತರಣಾ ಚಟುವಟಿಕೆ

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ಇಲ್ಲಿನ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ರೋಟರಾಕ್ಟ್ ಕ್ಲಬ್ ಸ್ವಯಂಸೇವಕರು ಆರೋಗ್ಯಕರ ಆಹಾರ ಅಭ್ಯಾಸಗಳ ಮಹತ್ವ, ತಂತ್ರಜ್ಞಾನದ ಸರಿಯಾದ ಬಳಕೆ, ಸ್ವಚ್ಛತೆ ಮತ್ತು ಹೈಜೀನ್ ಹಾಗೂ ರಸ್ತೆ ಸುರಕ್ಷತೆ ಕುರಿತಂತೆ ಬೋಧನೋಪಕರಣಗಳ ಸಹಾಯದಿಂದ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ನೈತಿಕತೆ ಮತ್ತು ಮೌಲ್ಯಗಳ ಕುರಿತು ಪ್ರೇರಣೆ ನೀಡಲಾಯಿತು.

ಹಲವು ಸಾಂಪ್ರದಾಯಿಕ ಆಟಗಳನ್ನು ನಡೆಸಲಾಯಿತು. ಸ್ವಯಂಸೇವಕರು ಮಕ್ಕಳಿಗೆ ನೋಟು ಪುಸ್ತಕ, ಪೆನ್ನು, ಹಣ್ಣುಗಳನ್ನು ವಿತರಿಸಿದರು. ಇದೇ ಸಂದರ್ಭ ಶಾಲೆಗೆ ಗೋಡೆಯ ಗಡಿಯಾರವನ್ನು ನೀಡಲಾಯಿತು. ಈ ಸೇವಾ ಕಾರ್ಯಕ್ರಮದ ಮೂಲಕ ಸ್ವಯಂಸೇವಕರು ಸೇವೆ ಸಲ್ಲಿಸುವ ಸಂಸ್ಕೃತಿ, ಆರೈಕೆ ಮತ್ತು ಹಂಚಿಕೊಳ್ಳುವ ಮಹತ್ವವನ್ನು ತಿಳಿಯುವ ಅವಕಾಶವನ್ನು ಪಡೆದರು.

ಈ ಸಂದರ್ಭದಲ್ಲಿ ಕಾಲೇಜಿನ ರೋಟರಾಕ್ಟ್ ಕ್ಲಬ್ನ ಸಂಯೋಜಕರುಗಳಾದ ಸತೀಶ್ ಶೆಟ್ಟಿ ಹೆಸ್ಕತ್ತೂರು ಮತ್ತು ಅವಿತಾ ಕೊರೆಯಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!