spot_img
Friday, April 3, 2026
spot_img

ಊರಿನ ಭವಿಷ್ಯ ಯುವಶಕ್ತಿಯನ್ನೇ ಅವಲಂಬಿಸಿದೆ : ಆನಂದ ಸಿ. ಕುಂದರ್

ಯುವಶಕ್ತಿ ಮಿತ್ರಮಂಡಲ ವಕ್ವಾಡಿ ಇದರ 28ನೇ ವಾರ್ಷಿಕೋತ್ಸವ | ಬಯಲು ರಂಗ ಮಂಟಪ, ಹೈ ಮಾಸ್ಟ್ ದೀಪ, ಮಕ್ಕಳ ಪಾರ್ಕ್ ಉದ್ಘಾಟನಾ ಸಮಾರಂಭ

ಜನಪ್ರತಿನಿಧಿ (ವಕ್ವಾಡಿ) : ಯುವಶಕ್ತಿ ಸದ್ಬಳಕೆ ಆಗುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಊರಿನ ಭವಿಷ್ಯ ಯುವಕರನ್ನೇ, ಯುವಶಕ್ತಿಯನ್ನೇ ಅವಲಂಬಿಸಿದೆ. ಯುವಕರು ಬದಲಾವಣೆ ಮತ್ತು ಪ್ರಗತಿಯ ಹರಿಕಾರರು. ಊರಿಗಾಗಿ ತನ್ನ ದುಡಿಮೆಯ ಬಹುಪಾಲನ್ನು ನೀಡಿದ ದಿವಂಗತ ವಿ.ಕೆ ಮೋಹನ್ ಸ್ಮರಣಾರ್ಥ ಜನ ಉಪಯೋಗಿ ಯೋಜನೆಗಳನ್ನು ಅರ್ಪಿಸಿರುವುದರ ಹಿಂದೆ ಯುವಶಕ್ತಿ ಮಿತ್ರಮಂಡಲದ ಸಮರ್ಥ ನಿರ್ವಹಣೆ ಶ್ಲಾಘನೀಯ ಎಂದು ಗೀತಾನಂದ ಫೌಂಡೇಶನ್ ಕೋಟದ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಆನಂದ ಸಿ. ಕುಂದರ್

ಅವರು ನಿನ್ನೆ(ಶನಿವಾರ, 08, ಮಾರ್ಚ್) ಯುವಶಕ್ತಿ ಮಿತ್ರ ಮಂಡಲ, ಹೆಗ್ಗಾರಬೈಲು ವಕ್ವಾಡಿ ಇದರ 28ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದಿ. ವಿ.ಕೆ ಮೋಹನ್ ಬಯಲು ರಂಗ ಮಂಟಪ ಉದ್ಘಾಟಿಸಿ, ದಿ. ವಿ.ಕೆ. ಮೋಹನ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ಪ್ರಗತಿಪರ ಮತ್ತು ಮಹತ್ವಾಕಾಂಕ್ಷೆಯ ಸಮಾಜಕ್ಕೆ ಯುವಶಕ್ತಿ ಮಿತ್ರಮಂಡಲ ಇನ್ನಷ್ಟು  ತೆರೆದುಕೊಳ್ಳುವಂತಾಗಲಿ ಎಂದು ಅವರು ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಊರಿನ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಗೆ ಸಶಕ್ತ ಯುವ ಸಂಘಟನೆ ಮುಖ್ಯ. ಯುವಶಕ್ತಿ ಮಿತ್ರಮಂಡಲ ವಕ್ವಾಡಿಯ ಬೆನ್ನೆಲುಬು ಎಂದರು.

ಮಲ್ಯಾಡಿ ಶಿವರಾಮ್ ಶೆಟ್ಟಿ

ಉದ್ಯಮಿಗಳಾದ ಎಂ.ರಾಜು ಪೂಜಾರಿ ಹಾಗೂ ವಿಠಲ ಪೂಜಾರಿ  ಹೈ ಮಾಸ್ಟ್ ದೀಪ ಉದ್ಘಾಟಿಸಿದರು. ಕಾಳಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಲ್ಲದೇ ಮಕ್ಕಳ ಪಾರ್ಕ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ಭವಾನಿ ಎಸ್. ಆಚಾರ್ಯ ಅವರಿಗೆ ‘ಊರ ಗೌರವ ಪ್ರದಾನ’ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್ ವಕ್ವಾಡಿ, ಡಾ. ರಾಮಮೂರ್ತಿ ಕೆ.ಎನ್ ಹಾಗೂ ಡಾ. ಸಂತೋಷ್ ಕುಲಾಲ್ ವಕ್ವಾಡಿ ಅವರಿಗೆ ‘ಯುವಸ್ಪೂರ್ತಿ ಪುರಸ್ಕಾರ -2025’ ನೀಡಿ ಗೌರವಿಸಲಾಯಿತು.

ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಭವಾನಿ ಎಸ್. ಆಚಾರ್ಯ ಅವರಿಗೆ ‘ಊರ ಗೌರವ ಪ್ರದಾನ’.
ಶ್ರೀಮತಿ ಮಾಲತಿ ಶೆಟ್ಟಿಗಾರ್ ವಕ್ವಾಡಿ ಅವರಿಗೆ ‘ಯುವಸ್ಪೂರ್ತಿ ಪುರಸ್ಕಾರ -2025’ ಪ್ರದಾನ.
ಡಾ. ರಾಮಮೂರ್ತಿ ಕೆ.ಎನ್ ಅವರಿಗೆ ‘ಯುವಸ್ಪೂರ್ತಿ ಪುರಸ್ಕಾರ -2025’ ಪ್ರದಾನ.
ಡಾ. ಸಂತೋಷ್ ಕುಲಾಲ್ ವಕ್ವಾಡಿ ಅವರಿಗೆ ‘ಯುವಸ್ಪೂರ್ತಿ ಪುರಸ್ಕಾರ -2025’ ಪ್ರದಾನ.

ಸಭೆಯಲ್ಲಿ ಪತ್ರಕರ್ತ ಸುಧಾಕರ್ ನಂಬಿಯಾರ್, ಕುಂದಾಪುರ ತಾಲೂಕು ಕೆ.ಡಿ.ಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಪ್ರೇಮಾ ಮೋಹನ್, ವಿ.ಕೆ ಗೋಪಾಲ್, ಮಡಾಮಕ್ಕಿ ಶಶಿಧರ ಶೆಟ್ಟಿ, ಗಣೇಶ್‌ ಮಲ್ಪೆ, ಸುಧೀರ್ ಕುಮಾರ್ ಶೆಟ್ಟಿ, ಸುಧೀರ್ ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಪ್ರೇಮ್ ಸಾಗರ್, ಚಿರಂಜೀವಿ, ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.

ಯುವಶಕ್ತಿ ಮಿತ್ರಮಂಡಲ ವಕ್ವಾಡಿಯ ಗೌರವಾಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ ಸ್ವಾಗತಿಸಿದರು, ಸಂಸ್ಥೆಯ ಅಧ್ಯಕ್ಷ ವಿಜಯ್ ಪೂಜಾರಿ ವಂದಿಸಿ, ಪತ್ರಕರ್ತ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನಾ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು‌. ಸಾಂಸ್ಕೃತಿಕ ಕಾರ್ಯಕ್ರವನ್ನು ರಾಕೇಶ್ ಶೆಟ್ಟಿ ವಕ್ವಾಡಿ, ಸುಜನ್ ದೇವಾಡಿಗ ನಿರ್ವಹಿಸಿದರು.

ದಿವಂಗತ ವಿ.ಕೆ. ಮೋಹನ್ ಅವರ ಪ್ರತಿಮೆ
ಎಂ.ರಾಜು ಪೂಜಾರಿ
ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!