spot_img
Monday, March 16, 2026
spot_img

ಭಾರತ ಜ್ಞಾನ ವಿಜ್ಞಾನ ಸಮಿತಿ ಕುಂದಾಪುರ ವತಿಯಿಂದ ಆಕಾಶ ವೀಕ್ಷಣೆ

ಕುಂದಾಪುರ: ಕಾನ್ವೆಂಟ್ ಶಾಲೆ ಎಂದೇ ಪರಿಚಿತವಾಗಿರುವ ಕುಂದಾಪುರದ ಸಂತ ಜೊಸೆಫರ ಶಾಲೆಯಲ್ಲಿ ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಶಿಕ್ಷಣದ ಬೆಳಕನ್ನು ಹುಡುಕಿಕೊಂಡು ಬಂದ ವಿದ್ಯಾರ್ಥಿನಿಯರಿದ್ದಾರೆ. ಆ ಎಲ್ಲ ಮಕ್ಕಳು, ಸುತ್ತಮುತ್ತಲಿನ ಅನೇಕ ನಾಗರೀಕರು, ಮತ್ತು ಕಾನ್ವೆಂಟಿನ ಸಿಸ್ಟರ್ ಗಳು ನಮ್ಮೊಂದಿಗೆ ಅಮವಾಸ್ಯೆ ರಾತ್ರಿಯ ಆಕಾಶವನ್ನು ಕಣ್ತುಂಬಿಕೊಳ್ಳಲು ಒಟ್ಟಿಗೆ ಸೇರಿದ್ದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಕುಂದಾಪುರ ಘಟಕ ಹಮ್ಮಿಕೊಂಡ ನಕ್ಷತ್ರ’ ಆಕಾಶ ವೀಕ್ಷಣೆಯ ಈ ಕಾಯಕ್ರಮ ಆರಂಭವಾದದ್ದು ರವಿ ಕಟ್ಕೆರೆ ಮತ್ತು ಸಂಧ್ಯಾ ನಾಯಕರವರ ಹಾಡಿನೊಂದಿಗೆ. ಇವರಿಬ್ಬರ ದನಿಗೆ ಮಕ್ಕಳು ದನಿಗೂಡಿಸುತ್ತಾ ಸಚಿನ್ ಅಂಕೋಲಾರವರ ಬಾರೆ ಗೆಳತಿ ಬಾರೆ ಹಾಡಿನ ಸಾಲುಗಳನ್ನು ಹಾಡಿದ್ದು ಕಾಯಕ್ರಮಕ್ಕೆ ಉತ್ತಮ ಪ್ರವೇಶವನ್ನು ಒದಗಿಸಿತು.

ಬಿ.ಜಿ.ವಿ.ಎಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಆಶಾ ಕರ್ವಾಲೋ ಮತ್ತು ಶಾಲೆಯ ಸಂಚಾಲಕರ ಸಿಸ್ಟರ್ ಸುಪ್ರಿಯಾ ರವರ ಶುಭಹಾರೈಕೆಗಳ ನಂತರ ಶಿಕ್ಷಕ ಉದಯ ಗಾಂವಕಾರ ಆಕಾಶ ವೀಕ್ಷಣೆಗೆ ಮಕ್ಕಳನ್ನು ಸಜ್ಜುಗೊಳಿಸುವ ತರಗತಿ ನಡೆಸಿದರು. ಆನಾಂನಂತರ ಅವರು ಮಕ್ಕಳನ್ನು ಹೊರಗೆ ಕರೆದು ಆಕಾಶದ ಬೆರಗನ್ನು ವ್ಯವಸ್ಥಿತವಾಗಿ ಕಣ್ತುಂಬಿಕೊಳ್ಳುವ ದಾರಿಗಳನ್ನು ತಿಳಿಸಿದರು.

ಶನಿ, ಶುಕ್ರ, ಗುರು, ಮಂಗಳ ಗ್ರಹಗಳು ಅನೇಕ ನಕ್ಷತ್ರ ಪುಂಜಗಳನ್ನು ಗುರುತಿಸಿದರಲ್ಲದೆ ತಾವೇ ತಂತ್ರಾಂಶ ಬಳಸಿ ನಕ್ಷತ್ರಗಳ ಹೆಸರು ಗುರುತಿಸಿದರು. ಬ್ರಹ್ಮಾಂಡದ ಅಗಾಧತೆ, ರಾಶಿಪುಂಜಗಳೆಂದರೇನು? ಏಕೆ ಹಾಗೆ ಕರೆಯುತ್ತಾರೆ? ಜನ್ಮ ನಕ್ಷತ್ರ, ಜನ್ಮ ರಾಶಿ, ನಕ್ಷತ್ರಗಳ ಬಣ್ಣ, ಗೋಚರ ಬೆಳಕು ಇತ್ಯಾದಿ ಇತ್ಯಾದಿ ಚರ್ಚೆಗಳ ನಂತರ ಇಂದಿನ ರಾತ್ರಿಯಾಕಾಶ ಮಕ್ಕಳಿಗೆ ಭಿನ್ನವಾಗಿ ಕಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!