spot_img
Monday, March 16, 2026
spot_img

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಆಯ್ಕೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಜ.31: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ನಿ., ವಂಡ್ಸೆ ಇದರ ನೂತನ ಅಧ್ಯಕ್ಷರಾಗಿ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜ.31ರಂದು ನಡೆಯಿತು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಟಿ‌ಎಪಿಸಿ‌ಎಂಎಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನೋಟರಿ ವಕೀಲರಾದ ಪ್ರಸನ್ನಕುಮಾರ ಶೆಟ್ಟಿ, ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜರಾಮ ಶೆಟ್ಟಿ ಇಡೂರು, ಜಗನ್ನಾಥ ಶೆಟ್ಟಿ ಹೊಸೂರು, ರಾಮಚಂದ್ರ ಮಂಜ ಮಾರಣಕಟ್ಟೆ, ಅರುಣ್ ಕುಮಾರ್ ಶೆಟ್ಟಿ ಹೊಸೂರು ನಿಡೂಟಿ, ಪ್ರಭಾಕರ ಕೆರಾಡಿ, ಗುಂಡು ಪೂಜಾರಿ ಹರವರಿ, ಶೇಖರ ಶೆಟ್ಟಿ ನೂಜು ಬೆಳ್ಳಾಲ, ಜಲಜಾಕ್ಷಿ ಶೆಡ್ತಿ ಹೊಸೂರು ನಿಡೂಟಿ, ಅಂಬಿಕಾ ಶೆಟ್ಟಿ ವಂಡ್ಸೆ, ರಾಜ ನಾಯ್ಕ ಇಡೂರು, ಸಂತೋಷ ನಾಯ್ಕ ಕೆರಾಡಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿ ಸುಮಿತ್ರಾ ಕುಮಾರಿ ಎನ್.ಎಸ್ ಕರ್ತವ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮತಿ ಶೆಟ್ಟಿ ಸಹಕರಿಸಿದರು. ಸೀತಾರಾಮ ಪೂಜಾರಿ ವಂದಿಸಿದರು.
ಸಂಘದ ನೂತನ ಆಡಳಿತ ಮಂಡಳಿಗೆ ಜ.18ರಂದು ಚುನಾವಣೆ ನಡೆದು ಎಲ್ಲಾ 13 ಸ್ಥಾನಗಳು ಹಾಲಿ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ನೇತೃತ್ವದ ವಂಡ್ಸೆ ರೈತ ಸಹಕಾರಿ ಬಳಗ ಮೇಲುಗೈ ಸಾಧಿಸಿತ್ತು. ಅಧ್ಯಕ್ಷರಾಗಿ ಎನ್. ಮಂಜಯ್ಯ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!