Tuesday, October 22, 2024

ವಂಡ್ಸೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪುರ: ಆದರ್ಶ ಆಸ್ಪತ್ರೆ, ಸೂಪರ್ ಸ್ಪೆಶಾಲಿಟಿ ಸೆಂಟರ್ ಉಡುಪಿ, ಗ್ರಾಮ ಪಂಚಾಯತ್ ವಂಡ್ಸೆ, ರೋಟರಿ ಕ್ಲಬ್ ಕುಂದಾಪುರ, ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ ನಿ., ತಲ್ಲೂರು-ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ, ನಮ್ಮ ಪರಸ್ಪರ ಆಸರೆ ಸೊಸೈಟಿ, ನಮ್ಮ ಭೂಮಿ ಸಿಡಬ್ಲ್ಯೂಸಿ ಸಂಸ್ಥೆ ಕನ್ಯಾನ ಇವರ ಜಂಟಿ ಆಶ್ರಯದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಮಾ.ಹಿ.ಪ್ರಾ.ಶಾಲೆ ವಂಡ್ಸೆ, ವಿಜಯ ಮಕ್ಕಳ ಕೂಟ ಆತ್ರಾಡಿ, ಮಾತೃಭೂಮಿ ಯುವ ಸಂಘಟನೆ ಆತ್ರಾಡಿ, ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ, ಯಕ್ಷಿ‌ಅನ್ನಪೂರ್ಣೇಶ್ವರಿ ಯುವ ಸಂಘಟನೆ ವಂಡ್ಸೆ, ಮೇಲ್‌ಪೇಟೆ ಫ್ರೆಂಡ್ಸ್ ವಂಡ್ಸೆ, ಬೃಂದಾವನ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟ ವಂಡ್ಸೆ ಇವರುಗಳ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಕ್ಟೋಬರ್ ೬ ರಂದು ಸ.ಮಾ.ಹಿ.ಪ್ರಾ.ಶಾಲೆ ವಂಡ್ಸೆ ಆವರಣದಲ್ಲಿ ನಡೆಯಿತು.
ಶಿಬಿರವನ್ನು ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘದ ಅಧ್ಯಕ್ಷರಾದ ವಾಸುದೇವ ಯಡಿಯಾಳ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಆದರ್ಶ ಆಸ್ಪತ್ರೆಯ ಡಾ.ಸುದೀಪ್ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ಇದರ ಅಧ್ಯಕ್ಷರಾದ ಲಿಯಾಕತ್, ಶ್ರೀ ಯಕ್ಷಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭಾಸ್ಕರ, ಸ.ಮಾ.ಹಿ.ಪ್ರಾ.ಶಾಲೆಯ ದೈ.ಶಿ.ಶಿಕ್ಷಕ ರಾಜು ಎನ್., ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಪಾರ್ವತಿ ಪಾಟಗಾರ್, ಆತ್ರಾಡಿ ವಿಜಯ ಮಕ್ಕಳಕೂಟ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ, ಮಾತೃಭೂಮಿ ಯುವ ಸಂಘಟನೆ ಆತ್ರಾಡಿಯ ಅಧ್ಯಕ್ಷರಾದ ಶಶಿಧರ ಆಚಾರ್ಯ, ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ ಇದರ ಅಧ್ಯಕ್ಷರಾದ ಮಹೇಶ ಗಾಣಿಗ, ಕಾರ್ಯಕ್ರಮ ಆಯೋಜಕರು, ಸಹಭಾಗಿತ್ವ ನೀಡಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನರಸಿಂಹ ಗಾಣಿಗ ಹರೆಗೋಡು ಸ್ವಾಗತಿಸಿ, ನಮ್ಮ ಭೂಮಿ ಸಿಡಬ್ಲ್ಯೂಸಿ ಸಂಸ್ಥೆ ಕನ್ಯಾನ ಇದರ ಶ್ರೀನಿವಾಸ ಗಾಣಿಗ ಪ್ರಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಕ್ಲಬ್ ಕುಂದಾಪುರ ಕಾರ್ಯದರ್ಶಿ ಕಾರ್ಯದರ್ಶಿ ಸಚ್ಚಿದಾನಂದ ಎಂ.ಎಲ್ ವಂದಿಸಿದರು. ವಿಜಯ ಮಕ್ಕಳಕೂಟ ಆಂಗ್ಲ ಮಾಧ್ಯಮ ಶಾಲೆ ಆತ್ರಾಡಿಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!