spot_img
Wednesday, April 1, 2026
spot_img

ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಜನಪ್ರತಿನಿಧಿ (ಉಡುಪಿ/ಕುಂದಾಪುರ) : ಪಶ್ಚಿಮ ಘಟ್ಟದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆದರೆ ಪಶ್ಚಿಮ ಘಟ್ಟದ ಉಳಿವಿನ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಸ್ತೂರಿ ರಂಗನ್ ವರದಿಯ ಜಾರಿ ಗ್ರಾಮೀಣ ಪ್ರದೇಶ ವಾಸಿಗಳ ಬದುಕನ್ನು ದುಸ್ಥಿರ ಮಾಡುವುದು ಖಚಿತ. ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅಧಿಕಾರಿಗಳು ಸ್ವೇಚ್ಚಾಚ್ಚಾರದ ಕ್ರಮಕೈಗೊಂಡು ಕಸ್ತೂರಿ ರಂಗನ್ ವರದಿಗೆ ಅನ್ವಯವಾಗದ ಗ್ರಾಮಗಳನ್ನು ಈ ಪಟ್ಟಿಯಲ್ಲಿ ಸೇರಿಸಿರುವುದು ದುರಂತ ಎಂದು ರೈತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಿಕಾಸ್‌ ಹೆಗ್ಡೆ ಹೇಳಿದ್ದಾರೆ.

ಅಧಿಕಾರಿಗಳು ಕಚೇರಿಯಿಂದ ಕಾಲನ್ನು ಹೊರಗೆ ಇಡದೆ ಕಚೇರಿಯಲ್ಲಿ ಕುಳಿತು ಗೂಗಲ್ ಸರ್ವೇ ಮೂಲಕ ಕೃಷಿ ಭೂಮಿ, ತೋಟ, ಮನೆ, ಕೊಟ್ಟಿಗೆ ಇತ್ಯಾದಿಗಳನ್ನು ಪಟ್ಟಿಯಲ್ಲಿ ಸೇರಿಸುವುದರಿಂದ ಗ್ರಾಮೀಣ ಭಾಗದ ಜನರು ಅತ್ಯಂತ ಆತಂಕಕ್ಕೆ ಒಳಗಾಗುವಂತಾಗಿದೆ. ಆದಷ್ಟು ಬೇಗ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಹಿಂದಕ್ಕೆ ಪಡೆದು, ಅತೀ ಶೀಘ್ರ ಕೇರಳದಂತೆ ಭೌತಿಕ ಸರ್ವೇ ನಡೆಸಬೇಕು ಹಾಗೂ ಬಫರ್ ಪ್ರದೇಶಗಳನ್ನು ಸಂಪೂರ್ಣ ಕೈಬಿಡಬೇಕು ಹಾಗೂ ಆದಷ್ಟು ಬೇಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವರದಿಯಿಂದ ಜನರಲ್ಲಿ ಇರುವ ಆತಂಕವನ್ನು ದೂರ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!