spot_img
Wednesday, April 1, 2026
spot_img

ತಾಲೂಕು ಎಪಿಎಂಸಿಗೆ ಅಧಿಕಾರಿಗಳು ದಾಳಿ ಮಾಡಿ ಚೀನಾ ಬೆಳ್ಳುಳ್ಳಿ ಇದ್ದಲ್ಲಿ ಕ್ರಮ ಕೈಗೊಳ್ಳಲಿ : ವಿಕಾಸ್‌ ಹೆಗ್ಡೆ ಒತ್ತಾಯ

ಜನಪ್ರತಿನಿಧಿ (ಉಡುಪಿ/ಕುಂದಾಪುರ) : ಉಡುಪಿಯ ಎಪಿಎಂಸಿಯಲ್ಲಿ ಮಾರಾಟವಾಗುತ್ತಿದ್ದ ಚೀನಾ ಬೆಳ್ಳುಳ್ಳಿ ದಾಸ್ತಾನಿನ ಮೇಲೆ ಕ್ರಮಕೈಗೊಂಡಂತೆ ಎಲ್ಲಾ ತಾಲೂಕು ಎಪಿಎಂಸಿ ಹಾಗೂ ಇತರೇ ಮಳಿಗೆಗಳಲ್ಲೂ ಅಧಿಕಾರಿಗಳು ದಾಳಿ ಮಾಡಿ ಚೀನಾ ಬೆಳ್ಳುಳ್ಳಿ ಇದ್ದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.

ಇದೊಂದು ಅತ್ಯಂತ ಅಪಾಯಕಾರಿ ಆಹಾರ ಪದಾರ್ಥವಾಗಿದ್ದು ಇದರಲ್ಲಿ ಬಳಸುವ ರಾಸಾಯನಿಕ ಕ್ಯಾನ್ಸರ್, ಲಿವರ್ ಹಾಗೂ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ವಿಷಕಾರಿ ಅಂಶ ಒಳಗೊಂಡಿರುವುದು ಪರೀಕ್ಷೆಗಳಿಂದ ತಿಳಿದುಬಂದಿದ್ದು ಆದರೂ ಸಹ ಎಪಿಎಂಸಿಯಂತಹ ಸರ್ಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಇದು ಮಾರಾಟವಾಗುತ್ತಿರುವುದು ಅತ್ಯಂತ ಅಪಾಯಕಾರಿ ಎಂದಿದ್ದಾರೆ.

ಇದು ಕೇವಲ ಉಡುಪಿ ಎಪಿಎಂಸಿ ಪ್ರಾಂಗಣ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಕಡೆ ಇರುವ ಸಾಧ್ಯತೆ ಇರುವುದರಿಂದ ಸಂಬಂಧಿತ ಅಧಿಕಾರಿಗಳು ಕೂಡಲೇ ಎಲ್ಲಾ ಕಡೆ ಚೀನಾ ಬೆಳ್ಳುಳ್ಳಿ ಇರುವ ಬಗ್ಗೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!