Saturday, October 12, 2024

ವಿಧಾನಪರಿಷತ್ ಉಪ ಚುನಾವಣೆ ಸೇೂಲು ಗೆಲುವಿನ ಲೆಕ್ಕಾಚಾರ ?

ಈ ಬಾರಿಯ ದಕ್ಷಿಣ ಕನ್ನಡ ಉಡುಪಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಆಯ್ಕೆ ಮಾಡುವ ವಿಧಾನಪರಿಷತ್ ಸ್ಥಾನ ಸಂಸದ ಕೇೂಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿದ್ದು ಈ ಸ್ಥಾನಕ್ಕೆ ಚುನಾವಣೆ ನಡೆಸುವರೇ ಚುನಾವಣಾ ಆಯೇೂಗ ದಿನಾಂಕ ನಿರ್ಧಾರ ಮಾಡಿಯಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್  ಮತ್ತು  ಬಿಜೆಪಿ  ತಮ್ಮ ಅಭ್ಯರ್ಥಿಗಳ ಹೆಸರನ್ನು ಘೇೂಷಣೆ ಮಾಡುವುದೊಂದೇ ಬಾಕಿಯಿದೆ. ಈಗ ಹೆಸರು ಘೇೂಷಣೆ ಮಾಡುವುದರಲ್ಲಿ ಎರಡು ಪಕ್ಷಗಳು ತುದಿಗಾಲಿನಲ್ಲಿ ನಿಂತು ಆಲೇೂಚನೆ ಮಾಡುತ್ತಿದ್ದಾವೆ. ಯಾರು ಗೆಲುವಿನ ಅಭ್ಯರ್ಥಿ ಎನ್ನುವುದು ಮತದಾರರ ಲೆಕ್ಕಾಚಾರ. ನಮ್ಮ  ಬುಟ್ಟಿಯಲ್ಲಿ ಇಷ್ಟಿದೆ, ನಮ್ಮ ಬುಟ್ಟಿಯಲ್ಲೂ ಇಷ್ಟಿದೆ.  ಯಾರ ಬುಟ್ಟಿಗೂ ಸೇರದ ಮತಗಳು ಇಷ್ಟಿದೆ. ಎನ್ನುವ ಊಹಾಪೇೂಹ ಲೆಕ್ಕಾಚಾರದಲ್ಲಿ ಗೆಲುವಿನ ಕನಸು ಕಾಣುವ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿ ಅಭ್ಯರ್ಥಿತನಕ್ಕಾಗಿ ಸಾಕಷ್ಟು ಪೈಪೇೂಟಿ ಸೃಷ್ಟಿಯಾಗಿರುವುದಂ‍ತು ನಿಜ.

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿ  ಸಾಕಷ್ಟು ದೊಡ್ಡದಿದೆ. ಇದು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ನಾಯಕರಲ್ಲಿ ಒಂದು ರೀತಿ ಪೈಪೇೂಟಿ ಸೃಷ್ಟಿಯಾದ ತರದಲ್ಲಿ ಇದೆ. ಮಂಗಳೂರು ಕಡೆಯಿಂದ ಬಿಜೆಪಿಯ ಮಾಜಿ ಸಂಸದ ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿತನದ ಬಹು ನಿರೀಕ್ಷೆಯಲ್ಲಿ ಇದ್ದಾರೆ ನ್ನುವ ಸುದ್ದಿಯೂ ಇದೆ. ಇದು ಸಹಜ ಕೂಡಾ. ಅದೇ ರೀತಿಯಲ್ಲಿ ಉಡುಪಿ ಕಡೆಯಿಂದ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿತನದ ಕನಸು ಕಟ್ಟಿಕೊಂಡಿರುವುದಂತೂ ಮೇಲ್ನೋಟಕ್ಕೆ ತಿಳಿಯುತ್ತದೆ. ರಾಜಕೀಯದಲ್ಲಿ ಇದು ಸಹಜ ಕೂಡಾ. ಮಗು ಕೂಗದೇ ತಾಯಿ ಹಾಲು ಕೊಡುವುದಿಲ್ಲ ಅನ್ನುವ ಮಾತು ನಮ್ಮ  ಸದ್ಯದ ರಾಜಕೀಯಕ್ಕೆ ಹೇಳಿಸಿ ಮಾಡಿಸಿದಂತಿದೆ.

ಪ್ರಮುಖವಾಗಿ ನಾವು ಕೇಳಬಹುದಾದ ಅಥವಾ ಹೇಳಬಹುದಾದ ಹೆಸರು ಪ್ರಮೇೂದ ಮಧ್ವರಾಜ್. ಖಂಡಿತವಾಗಿಯೂ ಕಳೆದ ಬಾರಿ ಲೇೂಕಸಭಾ ಅಭ್ಯರ್ಥಿತನದ ನಿರೀಕ್ಷೆಯಲ್ಲಿ ಇದ್ದವರು. ಹಾಗಾಗಿ ಈ ಬಾರಿಯೂ ಅವಕಾಶಕ್ಕಾಗಿ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಪ್ರಭಾರಿಯಾಗಿ ಪಕ್ಷದ ಗೆಲುವಿಗಾಗಿ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದವರು ಇದುವರೆಗೂ ಯಾವುದೆ ಸ್ಥಾನಮಾನ ಸಿಗಲಿಲ್ಲ. ಇವರ ಬೇಡಿಕೆಗೂ ಮನ್ನಣೆ ಸಿಗಲೇ ಬೇಕು. ಅದೇ ರೀತಿಯಲ್ಲಿ ಕುಯಿಲಾಡಿ ಸುರೇಶ್ ನಾಯಕರು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಪಕ್ಷ  ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರು ಹೌದು. ಇವರ ಬೇಡಿಕೆಯೂ ಸಕಾರಣವೆಂದೇ ಹೇಳಬಹುದು. ಅಂತೂ  ಈ ಗಂಡಸರ ನಡುವಿನ ಪೈಪೇೂಟಿಯಲ್ಲಿ ನಮ್ಮ ಮಹಿಳಾ ಮಣಿಗಳು ಸುದ್ದಿ ಮಾಡದೇ ಇವರ ಪಾಲಿಗೆ ಸೀಟು ಒಲಿದು ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಉಡುಪಿ ಕಡೆಯವರ ಬೇಡಿಕೆಗೂ ಕಾರಣವಿದೆ. ಇದಾಗಲೆ ಈ ಸ್ಥಾನಕ್ಕೆ ಆಯ್ಕೆ ಯಾಗಿ ರಾಜಿನಾಮೆ ನೀಡಿದವರು ಉಡುಪಿ ಜಿಲ್ಲೆಯವರೇ ಆದ ಕಾರಣ ಅದು ನಮಗೆ ಇರಲಿ ಅನ್ನುವುದು ಉಡುಪಿ ಬಿಜೆಪಿಗರ ಸಾಮೂಹಿಕ ಬೇಡಿಕೆ ಮತ್ತು ಒತ್ತಾಸೆಕೂಡ.

ಇನ್ನು, ಉಳಿದಿರುವುದು ಆಡಳಿತ ರೂಡ ಕಾಂಗ್ರೆಸ್ ಇಲ್ಲಿ ಮಂಗಳೂರಿಗಿಂತ ಉಡುಪಿ ಕಡೆಗೆ ಹೆಚ್ಚು ಒಲವು ತೇೂರುವ ಸಾಧ್ಯತೆಗಳು ಜಾಸ್ತಿ. ಕಾರಣವೆಂದರೆ ಇದಾಗಲೆ ಇಬ್ಬರೂ ಎಂ.ಎಲ್.ಸಿ.ಗಳು ಮಂಗಳೂರಿನ ಕಡೆಯವರಾದ ಕಾರಣ ಉಡುಪಿ ಜಿಲ್ಲೆಗೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಇಲ್ಲಿ ಬೈಂದೂರು ಕಡೆಗೆ ಅಥವಾ ಉಡುಪಿ ಕಡೆಗೆ ಒಲಿಯಬಹುದಾ ಅನ್ನುವುದು ಮುಖ್ಯ. ಉಡುಪಿ ಕಡೆಯಿಂದ ನೇೂಡುವುದಾದರೆ ಬಹುಮುಖ ಪ್ರತಿಭೆಯ ಹರಿಪ್ರಸಾದ್ ರೈ ಅವರ ಹೆಸರು ಮುಂಚೂಣಿಯಲ್ಲಿದೆ ಅನ್ನುವ ಮಾಹಿತಿ ಇದೆ. ಇದಾಗಲೇ ಅವರು ಕಳೆದ ಬಾರಿ ಅವರು ಎಂ.ಎಲ್.ಸಿ.ಚುನಾವಣಾ ಸಂದರ್ಭದಲ್ಲಿಯೇ ಪಕ್ಷಕ್ಕೆ ಸಂಪ್ರದಾಯದಂತೆ ಸಂದಾಯ ಮಾಡಬೇಕಾದ ಕಾಣಿಕೆಯನ್ನು ಹುಂಡಿಗೆ ಹಾಕಿ ಬಂದಿದ್ದಾರೆ. ಹಾಗೆನ್ನುವಾಗ ರೈಯವರ ಬೇಡಿಕೆಯನ್ನು ಸಲಿಸಾಗಿ ಬದಿಗೆ ಸರಿಸಲು ಸಾಧ್ಯವಿಲ್ಲ.

ಹಾಗಾದರೆ ಎರಡು ಪಕ್ಷಗಳಲ್ಲಿನ ಗೆಲುವಿನ ಲೆಕ್ಕಾಚಾರ ಹೇಗಿದೆ.? ಇಲ್ಲಿನ ಮತದಾರರು ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾಯಿತ ಸದಸ್ಯರು ಆದ ಕಾರಣ ಈ ಎರಡು ಪಕ್ಷಗಳಿಗೂ ಸಾದಾರಣ ಮಟ್ಟಿಗೆ ತಮ್ಮ ಗೆಲುವು ಸೇೂಲಿನ ಲೆಕ್ಕಾಚಾರ ಇದಾಗಲೇ ತಿಳಿದಿರಬೇಕು. ಆದರೂ ಕೂಡಾ ಅದೇ ಲೆಕ್ಕಾಚಾರದಲ್ಲಿ ಮತಗಳು ಚಲಾವಣೆ ಆಗುತ್ತದೆ ಅನ್ನುವುದು ಕೂಡಾ ಕಷ್ಟ. ಯಾಕೆಂದರೆ ಇದು ಚುನಾವಣೆ ಅಲ್ವಾ? ಬಿಜೆಪಿ ಹೇಳಬಹುದು ನಮ್ಮ ಪಕ್ಷ ಬೆಂಬಲಿತ ಆಯ್ಕೆಗೊಂಡ ಸದಸ್ಯರು ಜಾಸ್ತಿ ಇದ್ದಾರೆ ಅನ್ನುವ ಅಂಕಿ ಆಂಶ ಮೇಲ್ನೋಟಕ್ಕೆ ತೇೂರಿಸಬಹುದು. ಅದೇ ಕಾಂಗ್ರೆಸ್ ನವರು ಹೇಳಬಹುದು ಸ್ಥಳೀಯ ಸಂಸ್ಥೆಗಳ ಚುನಾಯಿತ  ಸದಸ್ಯರು ಯಾವುದೆ  ಪಕ್ಷದ ಚಿಹ್ನೆಯಿಂದಾಗಲಿ ಪಕ್ಷದ ಹೆಸರಿನಿಂದಾಗಲಿ ಚುನಾಯಿತರಾದವರಲ್ಲ. ಅವರ ಸ್ವಂತ ನಿರ್ಧಾರ ಪ್ರಕಟಿಸುವ ಹಕ್ಕು ಅವರಿಗಿದೆ. ಮಾತ್ರವಲ್ಲ ಈಗ ರಾಜ್ಯದಲ್ಲಿ ನಮ್ಮದೆ ಸರ್ಕಾರ ಇರುವ ಕಾರಣ ನಮಗೆ ಅನುಕೂಲವಾದ ವಾತಾವರಣ ಇದೆ ಅನ್ನುವ ಲೆಕ್ಕಾಚಾರದಲ್ಲಿರುವುದಂತೂ ಸತ್ಯ. ಪಕ್ಷದ ಹೆಸರು ಚಿಹ್ನೆಯಿಂದಲೇ ಚುನಾಯಿತರಾದ ವಿಧಾನ ಸಭಾ ಸದಸ್ಯರೇ ಕ್ರಾಸ್‌ ಓಟಿಂಗ್ ಮಾಡುವ ಸ್ಥಿತಿಯಲ್ಲಿ ಇರುವ ಕಾರಣ ಇದೆಂತಹ ಮಹಾ ಲೆಕ್ಕಾಚಾರ ಅನ್ನುವ ಸದ್ಯದ ಪರಿಸ್ಥಿತಿ ಈ ನಮ್ಮ ಅವಳಿ ಜಿಲ್ಲೆಯಲ್ಲಿ ಇದೆ. ಅನ್ನುವ ಲೆಕ್ಕಾಚಾರಕೂಡಾ ಓಡಾಡಿತ್ತಿದೆ. ಹಾಗಾಗಿ ಸೇೂಲು ಗೆಲುವಿನ ಲೆಕ್ಕಾಚಾರ ಸುಲಭವಾದ ಲೆಕ್ಕಾಚಾರ ಅಂತೂ ಖಂಡಿತವಾಗಿಯೂ ಅಲ್ಲ. ಕಾದು ನೇೂಡೇೂಣ ಕನ್ನಡಿಯೊಳಗಿನ ಗಂಟು ಯಾರಿಗೆ ಒಲಿಯಬಹುದು ಅನ್ನುವುದನ್ನು ಅಲ್ವೇ?

ವಿಶ್ಲೇಷಣೆ : ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!