spot_img
Wednesday, January 22, 2025
spot_img

ಕುಂದಾಪುರ: ಬಿ. ಬಿ. ಹೆಗ್ಡೆ ಕಾಲೇಜು: ಗ್ರಾಜುಯೇಷನ್ ಡೇ

ಕುಂದಾಪುರ: ವಿದ್ಯಾರ್ಥಿಗಳು ಅವಕಾಶಗಳನ್ನು ಪ್ರೀತಿಸುವಂತಾಗಬೇಕು ಮತ್ತು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವಕಾಶದೊಂದಿಗೆ ಅಭಿವೃದ್ಧಿ ಹೊಂದಿದಾಗ ಹೆತ್ತವರ, ಗುರುಗಳ ಮತ್ತು ಸಮಾಜದ ಕಾಳಜಿ ವಹಿಸಬೇಕು. ಆ ಮೂಲಕ ಪಡೆದ ಪದವಿಗೆ ಗೌರವ ದೊರೆಯುವಂತಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಪ್ರೊ| ಹೇಮಂತ್ ಕುಮಾರ್ ಹೇಳಿದರು.

ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಐಕ್ಯೂ‌ಎಸಿ ಸಂಯೋಜಿಸಿದ ’ಗ್ರಾಜುಯೇಷನ್ ಡೇ’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕಾದರೆ ಶಿಕ್ಷಣವೇ ಮುಖ್ಯ. ಪದವಿ ಪೂರೈಸಿದ ನಂತರ ಉದ್ಯೋಗದೊಂದಿಗೆ ಸಾಮಾಜಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳುವಂತಾಗಬೇಕು ಎಂದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತ್ತಾಯ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಪ್ರಾಸ್ತಾವಿಸಿ, ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ನಿರ್ವಹಣಾ ವಿಭಾಗದ ಮುಖ್ಯಸ್ಥೆ ನಂದಾ ರೈ ಅತಿಥಿಗಳನ್ನು ಪರಿಚಯಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಮತ್ತು ಕನ್ನಡ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಪದವೀಧರರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ವಿನೋಲ್ ಮತ್ತು ನಯನಾ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಐಕ್ಯೂ‌ಎಸಿ ಸಂಯೋಜಕಿ ದೀಪಿಕಾ ಜಿ. ವಂದಿಸಿದರು. ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಅವಿತಾ ಎಮ್. ಕೊರೆಯಾ ನಿರೂಪಿಸಿದರು.

ಈ ಸಂದರ್ಭ ೨೦೨೨-೨೩ನೇ ಸಾಲಿನ ವಿಶ್ವವಿದ್ಯಾನಿಲಯದಿಂದ ಬಿ.ಕಾಂ.ನಲ್ಲಿ ರ್‍ಯಾಂಕ್ ಪಡೆದ ಪ್ರತೀಕ್ಷಾ ಶೆಟ್ಟಿಯವನ್ನು ಸನ್ಮಾನಿಸಲಾಯಿತು. ವಾಣಿಜ್ಯ ಪ್ರಾಧ್ಯಾಪಕ ಅಕ್ಷಯ್ ಕುಮಾರ್ ವಿದ್ಯಾರ್ಥಿನಿಯನ್ನು ಪರಿಚಯಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!