Friday, October 18, 2024

ಐಬಿಪಿಎಸ್ : 6128 ಕ್ಲರ್ಕ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ

ಜನಪ್ರತಿನಿಧಿ : ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸೋನಲ್‌ ಸೆಲೆಕ್ಷನ್ (ಐಬಿಪಿಎಸ್) 2025-26 ನೇ ಸಾಲಿಗೆ ನೇಮಕ ಮಾಡಲಿರುವ ವಿವಿಧ ಬ್ಯಾಂಕ್‌ಗಳ ಕ್ಲರ್ಕ್‌ ಹುದ್ದೆಗಳ ಸಂಬಂಧ, ಸಾಮಾನ್ಯ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಒಟ್ಟು 6128 ಕ್ಲರ್ಕ್‌ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಬ್ಯಾಂಕ್‌ಗಳು ದೇಶದಾದ್ಯಂತ ಇರುವ ವಿವಿಧ ಪ್ರತಿಷ್ಠಿತ ಬ್ಯಾಂಕ್‌ಗಳು.
ಹುದ್ದೆಗಳ ಹೆಸರು ಕ್ಲರ್ಕ್‌
ಹುದ್ದೆಗಳ ಸಂಖ್ಯೆ 6128
ಕರ್ನಾಟಕದ ಹುದ್ದೆಗಳ ಸಂಖ್ಯೆ 457
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-07-2024

 

ಅರ್ಜಿ ಸಲ್ಲಿಸುವುದು ಹೇಗೆ :
  • ಐಬಿಪಿಎಸ್ ಅಧಿಕೃತ ವೆಬ್‌ಸೈಟ್‌ https://www.ibps.in/index.php/clerical-cadre-xiv/ ಗೆ ಭೇಟಿ ನೀಡಿ.
  •  ತೆರೆದ ಪೋರ್ಟಲ್‌ ಮುಖಪುಟದಲ್ಲಿ ‘Apply Online for Common Recruitment Process Under CRP-Clerks-XIV’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
  • ತೆರೆದ ವೆಬ್‌ಪೇಜ್‌ನಲ್ಲಿ ‘Click Here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಕೇಳಲಾದ ವೈಯಕ್ತಿಕ ವಿವರಗಳನ್ನು ನೀಡಿ, ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಬೇಕು.
  • ಲಾಗಿನ್‌ ಆಗುವ ಮೂಲಕ ಶೈಕ್ಷಣಿಕ ವಿವರಗಳು, ಕೇಳಲಾದ ದಾಖಲೆಗಳ ಸ್ಕ್ಯಾನ್‌ ಕಾಪಿ ಅಪ್‌ಲೋಡ್‌ ಮಾಡುವುದು, ಇತರೆ ಸವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಶುಲ್ಕ : ರೂ.850.

ವಿದ್ಯಾರ್ಹತೆ
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡಿರುವ ಯಾವುದೇ ಕಾಲೇಜು, ಶಿಕ್ಷಣ ಸಂಸ್ಥೆಗಳಿಂದ / ವಿವಿಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ಯೋಮಿತಿ
ಕನಿಷ್ಠ 20 ವರ್ಷ ಪೂರೈಸಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಅನ್ವಯವಾಗಲಿವೆ.

ಇನ್ನು, ಐಬಿಪಿಎಸ್‌ ಕ್ಲರ್ಕ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾ, ಯುಸಿಒ ಬ್ಯಾಂಕ್, ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನಾರಾ ಬ್ಯಾಂಕ್, ಇಂಡಿಯನ್‌ ಓವರ್ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಗಳು ಭಾಗವಹಿಸಲಿದ್ದು, ಈ ಎಲ್ಲಾ ಬ್ಯಾಂಕ್‌ಗಳಲ್ಲಿ ಕ್ಲರ್ಕ್‌ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!