Wednesday, September 11, 2024

ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಶಯದೇವಿಸುತೆ ಮರವಂತೆ ನೇಮಕ

ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನೂತನ ಮಹಿಳಾ ಘಟಕದ ಅಧ್ಯಕ್ಷರಾಗಿ ಶಯದೇವಿಸುತೆ ಮರವಂತೆ (ಜ್ಯೋತಿ ಜೀವನ್ ಸ್ವರೂಪ್) ನೇಮಕಗೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯೆಯಾಗಿರುವ ಇವರು ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ವಿವಿಧ ಪತ್ರಿಕೋದ್ಯಮ ಹಾಗೂ, ಹಲವಾರು ಮಾಧ್ಯಮ ವಾಹಿನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಅಕ್ಕಮಹಾದೇವಿ ಪ್ರಶಸ್ತಿ, ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ, ಮಹಿಳಾ ಸಾಧಕಿ ಪ್ರಶಸ್ತಿ, ರಂಗಸ್ಥಳ ರತ್ನ ಪ್ರಶಸ್ತಿ, ಕುಂದಶ್ರೀ ಪ್ರಶಸ್ತಿ, ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಸ್ಟೇಟ್ ಲೆವೆಲ್ ಅವಾರ್ಡ್, ಡಾ. ಜಿ.ಡಿ. ಜೋಶಿ ಗೌರವ ಪ್ರಶಸ್ತಿ, ಕರುನಾಡ ಕಲಾ ಕೇಸರಿ; ಸಾಹಿತ್ಯ ರತ್ನ ಸಿರಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!