Wednesday, September 11, 2024

ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಗಾಯಕ ಡಾ.ಸತೀಶ್ ಪೂಜಾರಿ ನಿಧನ

ಕುಂದಾಪುರ: ಶ್ರೀ ಮಾತಾ ಅಸ್ಪತ್ರೆಯ ಮಾಲಕ, ಗಾಯಕ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜುಲೈ 11 ಗುರುವಾರ ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪ್ರಯೋಜನವಾಗಲಿಲ್ಲ.

ಉತ್ತಮ ಗಾಯಕರಾಗಿದ್ದ ಅವರು ಆ ಮೂಲಕ ಪ್ರಸಿದ್ಧರಾಗಿದ್ದರು. ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದ ಡಾ. ಸತೀಶ್ ಪೂಜಾರಿ. ಫಿಟ್ನೆಸ್ ಕುರಿತು ಒಲವು ಹೊಂದಿದ್ದರು. ವೈದ್ಯರಾಗಿಯೂ ಕೂಡಾ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.

ಖ್ಯಾತ ಸಂಗೀತ ಪ್ರತಿಭೆಗಳನ್ನು ಕರೆಸಿ ಕಾರ್ಯಕ್ರಮ ನೀಡುತ್ತಿದ್ದ ಅವರು ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ ಅವರು ಸಾಂಸ್ಕೃತಿಕ ವಿಕಾಸಕ್ಕೆ ಸದಾ ಸ್ಪಂದಿಸುತ್ತಿದ್ದರು. ತಾನೊಬ್ಬ ಗಾಯಕನಾಗಿ, ವೃತ್ತಿಯಲ್ಲಿ ವೈದ್ಯರಾಗಿ ಜನಮನ್ನಣೆ ಪಡೆದಿದ್ದ ಇವರು ಬಿಡುವಿಲ್ಲದ ವೇಳೆಯಲ್ಲೂ ಕೂಡಾ ಸಂಗೀತಾಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಓದು, ಯಕ್ಷಗಾನ, ನಾಟಕ, ಸಿನಿಮಾದ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಪ್ರಕೃತಿ ಪ್ರೇಮಿಯಾಗಿದ್ದ ಅವರು ನಿಸರ್ಗದ ಅಮೂಲ್ಯ ಕ್ಷಣಗಳನ್ನು ಚಿತ್ರೀಕರಿಸಿ ರೀಲ್ಸ್‌ನಲ್ಲಿ ಹಂಚಿಕೊಳ್ಳುವ ಹವ್ಯಾಸ ಹೊಂದಿದ್ದರು.

ಮೃತರು ಪತ್ನಿ, ಓರ್ವ ಪುತ್ರರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!