spot_img
Wednesday, December 4, 2024
spot_img

ಜು. 12ರಿಂದ ಆರ್‌ಎಸ್‌ಎಸ್‌ ವಾರ್ಷಿಕ ಸಭೆ | ಸಂಘದ ಶತಮಾನೋತ್ಸವದ ರೂಪುರೇಷೆಗಳ ಬಗ್ಗೆ ಚರ್ಚೆ

ಜನಪ್ರತಿನಿಧಿ (ರಾಂಚಿ) : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮೂರು ದಿನಗಳ ವಾರ್ಷಿಕ ಸಭೆ ಶುಕ್ರವಾರ(ಜು. 12) ರಾಂಚಿಯಲ್ಲಿ ಆರಂಭವಾಗಲಿದೆ. ಸಂಘಟನಾತ್ಮಕ ವಿಸ್ತರಣೆ ಹಾಗೂ ಶತಮಾನೋತ್ಸವ ಆಚರಣೆಯನ್ನು ಒಳಗೊಂಡು ಹಲವು ಮುಖ್ಯ ವಿಷಯಗಳನ್ನು ಚರ್ಚೆ ಮಾಡಲಾಗುತ್ತದೆ ಎಂದು ಪದಾಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆರ್‌ಎಸ್‌ಎಸ್‌ನ ವಾರ್ಷಿಕ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಒಳಗೊಂಡು ಎಲ್ಲ ಪ್ರಾಂತ್ಯ ಪ್ರಚಾರಕರು (ಪ್ರಾಂತ್ಯ ಉಸ್ತುವಾರಿಗಳು) ಭಾಗಿಯಾಗಲಿದ್ದಾರೆಂದು ಅವರು ತಿಳಿಸಿದ್ದಾರೆ.

ಇಂದು (ಬುಧವಾರ) ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್, 2025ರ ವಿಜಯದಶಮಿಯಂದು ಸಂಘ 100 ವರ್ಷ ಪೂರೈಸಲಿದೆ. ಸಂಘಟನೆಯನ್ನು ದೇಶದಾದ್ಯಂತ ಮಂಡಲ ಮಟ್ಟಕ್ಕೆ (10ರಿಂದ15 ಹಳ್ಳಿಗಳ ಗುಂಪು) ವಿಸ್ತರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘವು ಪ್ರಸ್ತುತ 73,000 ಶಾಖೆಗಳನ್ನು ಹೊಂದಿದ್ದು, ಇದನ್ನು ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದವರು ತಿಳಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲಿರುವ ವಿವಿಧ ಸಾಂಸ್ಥಿಕ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ಮೂರು ದಿನಗಳ ಸಭೆಯಲ್ಲಿ ಪ್ರಾಂತ್ಯದ ಉಸ್ತುವಾರಿಗಳು ಚರ್ಚೆ ಮಾಡಲಿದ್ದಾರೆ. ಸಂಘದ ಶತಮಾನೋತ್ಸವದ ರೂಪುರೇಷೆಯ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!