Tuesday, October 8, 2024

ಆಸಾಡಿ ಒಡ್ರ್ ಸಾಧಕ ಪುರಸ್ಕಾರಕ್ಕೆ ಬಹುಮುಖ ಪ್ರತಿಭೆ ಸುಜಾತ.ಎಂ.ಬಾಯರಿ ಆಯ್ಕೆ

ಕೋಟ: ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ಮೂರನೇ ವರ್ಷದ ಆಸಾಡಿ ಒಡ್ರ್ ಸಾಧಕ ಪುರಸ್ಕಾರಕ್ಕೆ ಕುಂದಗನ್ನಡ ಬಹುಮುಖ ಪ್ರತಿಭೆ ಸುಜಾತ.ಎಂ.ಬಾಯರಿ ಆಯ್ಕೆಯಾಗಿದ್ದಾರೆ.

ಇದೇ ಬರುವ ಅಗಸ್ಟ್ 11ರಂದು ಭಾನುವಾರ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಿದೆ.

ವಿಶೇಷ ಅಭಿನಂದನೆಯ ಭಾಗವಾಗಿ ಪಂಚವರ್ಣ ಮಹಿಳಾ ಮಂಡದ ಸ್ಥಾಪಾಕಾಧ್ಯಕ್ಷೆ ಕಲಾವತಿ ಅಶೋಕ್ ಗೌರವಿಸಲಿದ್ದು.ಇದೇ ವೇಳೆ ಕುಂದಗನ್ನಡದ ರಾಯಭಾರಿ ಚಿತ್ರನಟ ರಘು ಪಾಂಡೇಶ್ವರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು,ಗ್ರಾಮೀಣ ತಿನಿಸುಗಳು,ಪರಿಕರ ಅನಾವರಣ,ಸ್ನೇಹಕೂಟ ಮಣೂರು ಹಾಗೂ ಮಹಿಳಾ ವೇದಿಕೆ ಸಾಲಿಗ್ರಾಮ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!