spot_img
Saturday, December 7, 2024
spot_img

3000 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ ಸರ್ಕಾರ ಅನುಮತಿ ಸ್ವಾಗತಾರ್ಹ-ಮೊಯಿದಿನ್ ಕುಟ್ಟಿ

ಕುಂದಾಪುರ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಸ್ಥಳಾಂತರಗೊಂಡ ಕಛೇರಿ ಉದ್ಘಾಟನೆ

ಕುಂದಾಪುರ: ಈಗಾಗಲೇ ಎಸ್ ಡಿ ಎಂ ಸಿ ಮೂಲಕ ಸರಕಾರಕ್ಕೆ ಮನವಿ ನೀಡಿದ 3000 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್ ಕೆ ಜಿ ಯು ಕೆ ಜಿ ಪ್ರಾರಂಭಿಸಲು ಅನುಮತಿ ನೀಡಿರುವ ಸರಕಾರದ ಕ್ರಮ ಸ್ವಾಗತಾರ್ಹವಾದುದು. ಇದರಿಂದಾಗಿ ಬಾಗಿಲು ಹಾಕುವ ಪರಿಸ್ಥಿತಿಗೆ ಬಂದಿರುವ ಸರಕಾರಿ ಶಾಲೆಗಳಿಗೆ ವರದಾನವಾಗಿದೆ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯಾಧ್ಯಕ್ಷ ಮೊಯಿದಿನ್ ಕುಟ್ಟಿ ಹೇಳಿದರು,

ಅವರು ಕುಂದಾಪುರದ ವೇದಿಕೆಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಂಡಾರ್ಕರ್ ಕಾಂಪೌಂಡ್ ನಿಂದ ಖಾರ್ವಿಕೇರಿ ರಸ್ತೆಯಲ್ಲಿರುವ ಗೋಪಾಲ ನಿವಾಸದ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಛೇರಿ ಉದ್ಘಾಟಿಸಿ ಮಾತನಾಡಿದರು,

ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡುವುದನ್ನು ಬಿಟ್ಟು ಹೊರಗಡೆ ತಿರುಗುತ್ತಿರುವ ಬಗ್ಗೆ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯು ಆಯುಕ್ತರ ಗಮನಕ್ಕೆ ತಂದಿರುವ ಕಾರಣ ಈಗಾಗಲೇ ಡಿಡಿಪಿ‌ಐ ಅವರ ಲಿಖಿತ ಅನುಮತಿ ಇಲ್ಲದೆ ಭಾಗವಹಿಸಬಾರದು ಎಂಬ ಆದೇಶ ಬಹಳ ಪ್ರಾಮುಖ್ಯತೆ ಹೊಂದಿದೆ ಎಂದ ಅವರು ನಾಲ್ಕು ವರ್ಷಗಳಿಂದೀಚೆ ಅಂಗನವಾಡಿಯಿಂದ ಹೊರಗೆ ಬಂದ ನಾಲ್ಕರಿಂದ ಆರು ವರ್ಷದೊಳಗಿನ ಸುಮಾರು ಮೂರು ಲಕ್ಷ ಮಕ್ಕಳಲ್ಲಿ 50,000 ಮಕ್ಕಳು ಮಾತ್ರ ಸರಕಾರಿ ಶಾಲೆಗೆ ದಾಖಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳು ಕೂಡ ಸರಕಾರಿ ಶಾಲೆಗೆ ದಾಖಲಾಗುವಂತೆ ಮಾಡಲು ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ಸಲಾಂ ಚಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಗೆ ವಿವರಿಸಿದರು.

ಕುಂದಾಪುರ ಪುರಸಭಾ ಘಟಕದ ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದ ಶ್ರೀಮತಿ ವರದ ಸುಧಾಕರ ಆಚಾರ್ಯ ಅಂಕದಕಟ್ಟೆ ಅವರನ್ನು ಅಭಿನಂದಿಸಲಾಯಿತು,

ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಆರಾಧ್ಯ ಗಿಡಕ್ಕೆ ನೀರು ಎರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ಕಾರ್ಯಕ್ರಮದ ವೇದಿಕೆಯಲ್ಲಿ ಕುಂದಾಪುರ ಪುರಸಭಾ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್ ,ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಚ್ಚೇಂದ್ರ , ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ , ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್. ವಿ , ನಾಗರಾಜ್ ಕಾರ್ಯದರ್ಶಿ ಪ್ರಮೋದ ಕೆ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು,

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಸಾಧಿಕ್ ಮಾವಿನಕಟ್ಟೆ, ಕೃಷ್ಣಾನಂದ ಶಾನಭಾಗ್ , ರವಿ ಮರವಂತೆ ಸಂಪನ್ಮೂಲ ವ್ಯಕ್ತಿಗಳಾದ ಅಶ್ಫಾಕ್ ಮೂಡು ಗೋಪಾಡಿ,ಶೋಭಾ ಶಾಂತರಾಜ್ , ದೀಪಾ ಕುಂದಾಪುರ , ಲಕ್ಷ್ಮೀ ಮಾರಣಕಟ್ಟೆ, ಹೇಮಾ ಬಿಜಾಡಿ , ಸುಶೀಲ ಮೊವಾಡಿ ಶ್ರೀನಿವಾಸ ಗುಂಡ್ಮಿ ಹಾಗೂ ವಿವಿಧ ಸರಕಾರಿ ಶಾಲೆಗಳ ಎಸ್ ಡಿ ಎಂ ಸಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

ಎಸ್ ವಿ ನಾಗರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಪ್ರಮೋದ ಕೆ ಶೆಟ್ಟಿ ವಂದಿಸಿದರು,

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!