Wednesday, September 11, 2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ: ವಿಶೇಷ ಡಿಪಿಪಿ ತರಗತಿ ಉದ್ಘಾಟನೆ

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಸ್ಪಧಾತ್ಮಕ ಪರೀಕ್ಷೆಗಳಾದ ನೀಟ್, ಜೆ‌ಇ‌ಇ, ಸಿ‌ಇಟಿ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ವಿಶೇಷ ಡಿಪಿಪಿ ತರಗತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಟ್, ಜೆ‌ಇ‌ಇ, ಸಿ‌ಇಟಿ ಕೋರ್ಸಗಳ ಅನುಭವಿ ಹಿರಿಯ ಉಪನ್ಯಾಸಕರಾದ ಮಿ. ಬಾಲಾಜಿ ಗುಪ್ತ ಇವರ ಮಾಗದರ್ಶನದಲ್ಲಿ ಡಿಪಿಪಿ ತಂಡದ ಅನುಭವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು.

ಈ ಕುರಿತು ಮಾತನಾಡಿದ ಮಿ. ಬಾಲಾಜಿ ಗುಪ್ತ ಅವರು ವಿದ್ಯಾರ್ಥಿಗಳ ಭವಿಷ್ಯತ್ತಿನ ಬೆಳಕಿಗೆ ಡಿಪಿಪಿ ತರಗತಿಯ ಅಗತ್ಯತೆಯನ್ನು ಹಾಗೂ ನೀಟ್, ಜೆ‌ಇ‌ಇ, ಸಿ‌ಇಟಿ ಪರೀಕ್ಷೆಯ ಸಿದ್ಧತೆಯ ಕುರಿತು ಪೂರ್ವತಯಾರಿಯ ವಿಧಾನಗಳನ್ನು ಬೋಧಿಸಿದರು ಹಾಗೂ ಡಿಪಿಪಿ ಕ್ಲಾಸ್‌ನ ಸಂಯೋಜಕರಾದ ಶ್ರೀಹರಿಶರ್ಮ, ಅಶೋಕ್ ಸಿ. ಹೆಚ್, ಸ್ಮಿತಲ್ ಪದ್ಮಜಾ ಮತ್ತು ಶುಭಾಶೆಟ್ಟಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಂ. ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್‌ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ಮಾತನಾಡಿ ಡಿಪಿಪಿ ತರಗತಿಯ ಮೌಲ್ಯಗಳನ್ನು ಅರಿತು ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿಕೊಟ್ಟರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್‌ಶೆಟ್ಟಿ ಯವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!