Sunday, September 8, 2024

ನೀಟ್‌ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಾಯೋಜಿತ ಅಕ್ರಮ : ವಿಕಾಸ್‌ ಹೆಗ್ಡೆ ಆರೋಪ

ಜನಪ್ರತಿನಿಧಿ (ಕುಂದಾಪುರ) : ನೀಟ್ ಪರೀಕ್ಷಾ ಅಕ್ರಮ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಾಯೋಜಿತ ಅಕ್ರಮ. ಇದು ಕೇವಲ ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರವಲ್ಲಾ ಇದರ ಹಿಂದೆ ವಿದ್ಯೆಯಲ್ಲಿ ಶ್ರೀಮಂತರಾಗಿರುವ ಬಡವರ, ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ವೈದ್ಯರಾಗುವ ಕನಸನ್ನು ನುಚ್ಚುನೂರು ಮಾಡುವ ವ್ಯವಸ್ಥಿತ ಹುನ್ನಾರವಿದೆ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿ ಎಂದಿಗೂ ಆರ್ಥಿಕವಾಗಿ ಹಿಂದುಳಿದವರ ಪರವಲ್ಲ ಎನ್ನುವುದನ್ನು ಹಂತ ಹಂತವಾಗಿ ಸಾಬೀತು ಮಾಡುತ್ತಿದೆ. ವೈದ್ಯಕೀಯ ವಿದ್ಯಾಭ್ಯಾಸ ಎನ್ನುವುದು ಕೇವಲ ಆರ್ಥಿಕ ಶ್ರೀಮಂತರ ಮನೆ ಮಕ್ಕಳ ಸ್ವತ್ತಾಗಿರಬೇಕು ಎನ್ನುವುದು ಬಿಜೆಪಿ ನಿಲುವು. ಅದಕ್ಕಾಗಿಯೇ ಕೋಟಿಗಟ್ಟಲೆ ಹಣಕ್ಕೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಇದೂ ಸಹ ಏಲೆಕ್ಟ್ರೊಲ್ ಬಾಂಡ್ ಹಗರಣದ ಇನ್ನೊಂದು ಭಾಗ. ಇದರ ಮೂಲಕವೂ ಬಿಜೆಪಿ ತನ್ನ ಖಾತೆಗೆ ಕೋಟಿಗಟ್ಟಲೆ ಹಣ ಜಮಾ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ಶಿಕ್ಷಣದಲ್ಲಿ ಅರ್ಥಿಕ ಶ್ರೀಮಂತಿಕೆಗೆ ಪ್ರಧಾನ್ಯತೆ ತೋರದೆ ಶೈಕ್ಷಣಿಕ ಶ್ರೀಮಂತಿಕೆಗೆ ಪ್ರಾಧಾನ್ಯತೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!