spot_img
Friday, January 17, 2025
spot_img

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ನೊಂದಣಿ ಕಾಲಾವಕಾಶ ವಿಸ್ತರಿಸಲು ಉಡುಪಿ ಜಿಲ್ಲಾ ರೈತ ಸಂಘ ಆಗ್ರಹ

ಕುಂದಾಪುರ: 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಉಡುಪಿ ಜಿಲ್ಲೆಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆಗೆ ಒಳಪಡಿಸಲು ಸರಕಾರವು ಅವಕಾಶ ಕಲ್ಪಿಸಿದ್ದು ಅದರಂತೆ ಪ್ರತಿ ವರ್ಷ ಜೂನ್ 1ರಿಂದ 30ರ ವರೆಗೆ ವಿಮೆಗೆ ನೊಂದಾವಣಿ ಮಾಡಲು ಕಾಲಾವಕಾಶ ನೀಡಬೇಕಾಗಿರುತ್ತದೆ. ಆದರೆ ಕಳೆದ ಆರ್ಥಿಕ ವರ್ಷದಲೂ ಕೂಡ ವಿಮೆಗೆ ನೊಂದಾವಣಿ ಮಾಡಲು ತೀರಾ ಕಡಿಮೆ ಕಾಲಾವಕಾಶ ಕಲ್ಪಿಸಿ ಅರ್ಹ ರೈತರು ಯೋಜನೆಯಿಂದ ವಂಚಿತರಾಗಿದ್ದು ಅದೇ ರೀತಿ ಈ ವರ್ಷ ಜೂನ್ 26ರಿಂದ ಜುಲೈ 1ರವರೆಗೆ ಮಾತ್ರ ರೈತರು ತಮ್ಮ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ನೊಂದಾವಣಿ ಮಾಡಲು ಕಾಲಾವಕಾಶ ಕಲ್ಪಿಸಲಾಗಿರುತ್ತದೆ ಎಂದು ಬ್ಯಾಂಕ್ ಶಾಖೆಗಳು ರೈತರಿಗೆ ತಿಳಿಸಿರುತ್ತಾರೆ ಎಂಬ ಮಾಹಿತಿ ಲಭಿಸಿದ್ದು ಕಾಲಾವಕಾಶ ತೀರಾ ಕಡಿಮೆ ಇರುವುದರಿಂದ ಎಲ್ಲಾ ಅರ್ಹ ರೈತರು ತಮ್ಮ ಬೆಳೆಗೆ ವಿಮೆ ನೊಂದಾವಣಿ ಮಾಡಿಸುವುದು ಕಷ್ಟವಾಗಿದ್ದು ಸರಕಾರದ ಯೋಜನೆಯಿಂದ ವಂಚಿತರಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ 2024-25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ನೊಂದಾವಣಿ ಮಾಡಲು ಕಾಲಾವಕಾಶವನ್ನು ವಿಸ್ತರಿಸಬೇಕೆಂದು ತೋಟಗಾರಿಕಾ ಉಪನಿರ್ದೇಶಕರಿಗೆ ಉಡುಪಿ ಜಿಲ್ಲಾ ರೈತ ಸಂಘ ಮನವಿ ಸಲ್ಲಿಸಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!