Wednesday, September 11, 2024

ಶಾಸಕ ಕೊಡ್ಗಿ ನೇತೃತ್ವದಲ್ಲಿ ಜೆಜೆಎಂ ಪ್ರಗತಿ ಪರಿಶೀಲನಾ ಸಭೆ | ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯತ್‌ ಸದಸ್ಯರುಗಳ ಆಗ್ರಹ

ಜನಪ್ರತಿನಿಧಿ (ಕುಂದಾಪುರ) : ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಜೆಜೆಎಂ ಪ್ರಗತಿ ಪರಿಶೀಲನಾ ಸಭೆ ಕ್ಷೇತ್ರದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ಇಂದು (ಶುಕ್ರವಾರ) ನಡೆಯಿತು.

ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಕ್ಷೇತ್ರದ ಜಲಜೀವನ್‌ ಮಷಿನ್‌ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಅಸಮರ್ಪಕ ನೀರು ಪೂರೈಕೆಯನ್ನು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆ, ಸಂಬಂಧಪಟ್ಟ ಇಂಜಿನೀಯರ್‌ ಗಳಿಗೆ ಸೂಚನೆ ನೀಡಿದರು.

ಜಲಜೀವನ್‌ ಮಷಿನ್‌ ಯೋಜನೆಯಡಿ ಪೈಪ್‌ ಲೈನ್‌, ಟ್ಯಾಂಕ್‌ ನಿರ್ಮಾಣಕ್ಕೆ ತಾಂತ್ರಿಕ ಅಡಚಣೆಗಳು, ಅನುಮತಿ ಸಮಸ್ಯೆ ಆಗುತ್ತಿದ್ದು ಇದನ್ನು ಪರಿಹರಿಸಿಕೊಳ್ಳಬೇಕು. ಕೆಲವು ಕಡೆ ಟ್ಯಾಂಕ್‌ ನಿರ್ಮಾಣಕ್ಕೆ ನಿಗದಿತ ಸ್ಥಳದ ಸಮಸ್ಯೆ ಇದೆ. ಸ್ಥಳ ಇದ್ದರೂ ಕೆಲವು ಕಡೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆಗಬೇಕಿದೆ. ಇಂತಹ ಸಮಸ್ಯೆಗಳ ಗೊಂದಲಕ್ಕೆ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡುವ ಮೂಲಕ ಸಮಸ್ಯೆ ಪರಿಹಾರ ಒದಗಿಸಬೇಕು. ಸುಭದ್ರ ಕನ್ಸ್ಟ್ರಕ್ಶನ್ಸ್‌ ಹಾಗೂ ಜಲಜೀವನ್‌ ಮಷಿನ್‌ ಯೋಜನೆಯ ಇಂಜಿನೀಯರ್‌ ಗಳು ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿರುವ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು.

ಶಾಸಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್‌ ಇಂಜೀನಿಯರ್‌, ಹಾಗೂ ಮೇಲಾಧಿಕಾರಿಗಳು ಟ್ಯಾಂಕರ್‌ ಸಮಸ್ಯೆ, ಪೈಪ್‌ ಲೈನ್‌ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಶೀಘ್ರವಾಗಿ ಪರಿಹರಿಸುತ್ತೇವೆ. ಕೆಲವು ಕಡೆ ಜೆಜೆಎಂ ನಲ್ಲಿ ಪೈಪ್‌ ಲೈನ್‌ ಆಗಿದ್ದರೂ ಕೂಡಾ ನೀರಿನ ಮೂಲದ ಸಮಸ್ಯೆಗಳು, ಟ್ಯಾಂಕರ್‌ ಪರಿಪೂರ್ಣಗೊಳ್ಳದಿರುವುದರ ಬಗ್ಗೆ ಗಮನಕ್ಕಿದೆ. ಕೆಲವು ತಾಂತ್ರಿಕ ಅಡಚಣೆಗಳಿಂದ ಕೆಲಸ ನಿಧಾನಗತಿಯಲ್ಲಿ ಪ್ರಗತಿಯಲ್ಲಿದೆ ಶೀಘ್ರವಾಗಿ ಯೋಜನಾ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ, ಜಲಜೀವನ್‌ ಮಷಿನ್‌ ಯೋಜನೆಯಡಿಯಲ್ಲಿ ಅವೈಜ್ಙಾನಿಕ ಡಿಪಿಆರ್‌ ಹಾಗೂ ಅಪೂರ್ಣ ಕೆಲಸಗಳ ಬಗ್ಗೆ ಶೇಡಿಮನೆ, ಮಡಾಮಕ್ಕಿ, ಚಾತ್ರಮಕ್ಕಿ, ಬಸ್ರೂರು, ಬೀಜಾಡಿ, ಹೊದ್ರಾಳಿ, ಗೋಪಾಡಿ, ಕುಂಭಾಶಿ. ಕಾಳಾವರ, ಹೆಂಗವಳ್ಳಿ, ಕೆದೂರು, ಕೊರ್ಗಿ ಸೇರಿ ಹಲವು ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್‌ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆದಾರರನ್ನು ಕೂಡಲೇ ಸರಿಪಡಿಸಿ ಕೊಡುವಂತೆ ಆಗ್ರಹಿಸಿದರು.

ಕ್ಷೇತ್ರದ ಹಲವಾರು ಗ್ರಾಮ ಪಂಚಾಯತ್‌ ನ ವ್ಯಾಪ್ತಿಯಲ್ಲಿ ಇರುವ ಟ್ಯಾಂಕರ್‌ ಸೋರಿಕೆ, ಮೀಟರ್‌ ಸಮಸ್ಯೆ, ಕಾಮಗಾರಿ ಅಪೂರ್ಣ, ನೀರಿನ ಅಸಮರ್ಪಕ ಹರಿವು, ಭೂಸ್ವಾಧೀನ ಸಮಸ್ಯೆ, ವಾರಾಹಿ ನೀರಿನ ಸಮಸ್ಯೆ, ಬೇಡಿಕೆ ಇರುವಲ್ಲಿ ಹೆಚ್ಚುವರಿ ಸಂಪರ್ಕ ಕಲ್ಪಿಸದೇ ಇರುವುದರ ಬಗ್ಗೆ ಸಂಬಂಧಪಟ್ಟ ಇಂಜೀನಿಯರ್‌ಗಳು ಹಾಗೂ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲೇ ಜೆಜೆಎಂ ಯೋಜನೆಯಡಿಯಲ್ಲಿ ಇರುವ ಸಮಸ್ಯೆಗಳನ್ನು ಬಗೆ ಹರಿಸುವಂತೆ ಸೂಚಿಸಿದರು.

ಜೆಜೆಎಂ ಸಭೆಯಲ್ಲಿ ಶಾಸಕರ ಮುಂದೆ ಕಾಳಾವರ ಪಂಚಾಯತ್‌ ಸದಸ್ಯರ ಆಕ್ರೋಶ :

ವಕ್ವಾಡಿಯ ನವನಗರ ಹಾಗೂ ಬೆಚ್ಚಾಡಿಗೆ ಹೋಗುವ ನೀರಿನ ಟ್ಯಾಂಕ್ ಮತ್ತು ಬಾವಿ ಅವೈಜ್ಞಾನಿಕ ಕಾಮಗಾರಿ ಆಗಿದೆ. ತೆರೆದ ಬಾವಿಗೆ ಹಾಕಿದ ಅಪಾಯಕಾರಿ ಕಬ್ಬಿಣದ ಮೆಸ್, ಪ ಫಿಲ್ಟರ್ ಮತ್ತು ಟ್ಯಾಂಕ್ ಲೀಕೇಜ್ ಬಗ್ಗೆ ಶಾಸಕರ ಮುಂದೆಯೇ ಇಂಜೀಯರ್‌ಗಳನ್ನು ಗ್ರಾಮ ಪಂಚಾಯತ್‌ನ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಕಾಳಾವಾರ ಗ್ರಾಮ ಪಂಚಾಯತ್‌ ಸದಸ್ಯರುಗಳಾದ ರಾಮಚಂದ್ರ ನಾವಡ ಹಾಗೂ ರಮೇಶ್‌ ಶೆಟ್ಟಿ ವಕ್ವಾಡಿ ಶಾಸಕರ ಮುಂದೆ ಇಂಜೀನಿಯರ್‌ಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.  ಐವತ್ತು ಸಾವಿನ ಲೀಟರ್ ಟ್ಯಾಂಕ್ ಕೇವಲ ಮೂವತ್ತು ಸಾವಿರ ಲೀಟರ್‌ಗೆ ಅಷ್ಟೇ ತುಂಬುತ್ತಿದ್ದು, ಒಳಗಡೆ ಅಳವಡಿಸಿದ ಓವರ್ ಫ್ಲೋ ಪೈಪ್ ಲೆಂತ್ ಚಿಕ್ಕದಾಗಿದ್ದು  ಮೂವತ್ತು ಸಾವಿರಕ್ಕೆ ಕಟ್ ಆಫ್ ಆಗಿದೆ. ವಕ್ವಾಡಿಯ ಅಶೋಕನಗರ, ವಕ್ವಾಡಿಯ ಏಸ್ ಬಾಂಡ್ ಹತ್ತಿರ ಹಾಗೂ ವಕ್ವಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗದ ಕೆಲವು ಮನೆಗಳಿಗೆ ಗ್ರಾಮಸಭೆಯಲ್ಲಿ ಪೈಪ್ ಲೈಲ್ ಒದಗಿಸಲು ಮನವಿ ಬಂದಿದ್ದು ಕಾಮಗಾರಿ ಬಾಕಿ ಇದೆ. ವಕ್ವಾಡಿಯ ಅಶೋಕನಗರ, ವಕ್ವಾಡಿಯ ಏಸ್ ಬಾಂಡ್ ಹತ್ತಿರ ಹಾಗೂ ವಕ್ವಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗದ ಕೆಲವು ಮನೆಗಳಿಗೆ ಗ್ರಾಮಸಭೆಯಲ್ಲಿ ಪೈಪ್ ಲೈಲ್ ಒದಗಿಸಲು ಮನವಿ ಬಂದಿದ್ದು ಕಾಮಗಾರಿ ಬಾಕಿ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಇನ್ನು, ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್‌ ಅಧಿಕಾರಿ ಹಾಗೂ ಅಧ್ಯಕ್ಷರು ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ಹೊರಹಾಕಿದರು. ಫಿಲ್ಟರ್‌ ಅಳವಡಿಸದೇ ಇರುವುದು ಹಾಗೂ ಟ್ಯಾಂಕ್‌ ಲೀಕೇಜ್‌, ಗೇಟ್‌ವಾಲ್‌, ಪೈಪ್‌ ಅಳವಡಸಿದರೂ ನೀರು ಪೂರೈಕೆಯಾಗದೇ ಇರುವುದರ ಬಗ್ಗೆ ಇಂಜೀನಿಯರ್‌ ವಿರುದ್ಧ ಆರೋಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!