spot_img
Saturday, December 7, 2024
spot_img

2024ರ ಟಿ20 ವಿಶ್ವಕಪ್ : ಫಾರ್ಮ್ ಕಳೆದುಕೊಂಡ ಕೊಹ್ಲಿ ಪರ ಬ್ಯಾಟ್‌ ಬೀಸಿದ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಹಿಟ್‌ಮ್ಯಾನ್‌

‌ಜನಪ್ರತಿನಿಧಿ : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಾ ಬಂದ ಟೀಂ ಇಂಡಿಯಾ ಫೈನಲ್ ಅಖಾಡಕ್ಕೆ ತಲುಪಿದೆ.

ನಿನ್ನೆ(ಗುರುವಾರ) ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟೂರ್ನಿಯಿಂದ ಹೊರಗೆ ತಳ್ಳುವುದರ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ರೋಹಿತ್ ಸೇನೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಟೈಟಲ್ ಗಾಗಿ ಪೈಪೋಟಿ ನಡೆಸಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು.

2024ರ ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್​ ಆರಂಭಿಸಲು ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈ ಪ್ಲ್ಯಾನ್ ಅನ್ನು ಸಂಪೂರ್ಣವಾಗಿ ಹೊರಗಿಟ್ಟಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಅನುಭಿಸುತ್ತಿದ್ದು, ನಿರೀಕ್ಷಿಸಿದಂತೆ ಟೂರ್ನಿಯಲ್ಲಿ ಪ್ರದರ್ಶನ ನೀಡದೆ ಇರುವುದು ಕ್ರಿಕೇಟ್‌ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಹಲವು ಟೀಕೆಗಳು ಕೇಳಿ ಬಂದಿದೆ. ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 37 ರನ್ ಗಳಿಸಿದ್ದು ಹೊರತು ಪಡಿಸಿದರೆ ವಿರಾಟ್ ಉಳಿದ ಎಲ್ಲಾ ಪಂದ್ಯಗಳಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ.

2024 ವಿಶ್ವಕಪ್​ ನಲ್ಲಿ ವಿರಾಟ್ ಕೊಹ್ಲಿ ಖಾತೆಯಲ್ಲಿ 2 ಡಕೌಟ್ ಕೂಡ ಸೇರಿದೆ. ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಸದ್ಯ ಬ್ಯಾರ್ಡ್ ಫಾರ್ಮ್ ನಲ್ಲಿರುವ ಕೊಹ್ಲಿ ಬಗ್ಗೆ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾಗೆ ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್, ಕೊಹ್ಲಿ ಪರ ಬ್ಯಾಟ್‌ ಬೀಸಿದ್ದಾರೆ.

ಹೌದು, ಖಂಡಿತ ನನ್ನ ಸಪೋರ್ಟ್ ವಿರಾಟ್ ಕೊಹ್ಲಿ ಪರ ಇದೆ. ಯಾಕೆಂದರೆ ವಿರಾಟ್ ಕ್ಲಾಸ್ ಆ್ಯಂಡ್ ಬಿಗ್ ಮ್ಯಾಚ್ ಪ್ಲೇಯರ್. ಪ್ರತಿ ಆಟಗಾರನ ವೃತ್ತಿಜೀವನದಲ್ಲಿ ಇಂತಹ ಸ್ಥಿತಿ ಎದುರಿಸಬೇಕಾಗುತ್ತದೆ. ಕೊಹ್ಲಿಗೆ ಫಾರ್ಮ್ ಎನ್ನುವುದು ದೊಡ್ಡ ವಿಷಯ ಅಲ್ಲ. ಫೈನಲ್ ಪಂದ್ಯಕ್ಕಾಗಿ ಕೊಹ್ಲಿ ರನ್ ಗಳನ್ನು ಸೇವ್ ಮಾಡ್ತಿದ್ದಾರೆ. ಖಂಡಿತ ಫೈನಲ್ ನಲ್ಲಿ ನಮಗೆ ಅವರೇ ಗೆಲುವು ತಂದುಕೊಂಡ್ತಾರೆ ಎಂದು ಕ್ಯಾಪ್ಟನ್‌ ಹಿಟ್‌ ಮ್ಯಾನ್‌ ಕೊಹ್ಲಿ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ನೀಡಿದ ಬೆಂಬಲ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!