Sunday, September 8, 2024

ನೋಟಿಫಿಕೇಶನ್‌, ಡಿನೋಟಿಫಿಕೇಶನ್‌ ಮೇಲೆ ಸರ್ಕಾರಿ ಆದೇಶ ಪ್ರಕಟಿಸಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಜನಪ್ರತಿನಿಧಿ (ಬೆಂಗಳೂರು) : ಭೂಮಿಯನ್ನು  ಸ್ವಾಧೀನದಿಂದ ಡಿನೋಟಿಫೈ ಮಾಡುವ ಎಲ್ಲಾ ಸರ್ಕಾರಿ ಆದೇಶಗಳು ಹಾಗೂ ಅಂತಹ ಡಿನೋಟಿಫಿಕೇಶನ್‌ಗಳನ್ನು ರದ್ದುಪಡಿಸಿದ ನಂತರ ಸರ್ಕಾರಿ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿ ಆಸ್ತಿ ದಾಖಲೆಗಳ ಭಾಗವಾಗಿ ಮಾಡಬೇಕೆಂದು ಶೀಘ್ರವೇ ಸುತ್ತೋಲೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಏಕ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ರಾಮಚಂದ್ರ ಡಿ ಹುದ್ದಾರ್ ಅವರ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ಕೊಟ್ಟಿದೆ.

ತೀರ್ಪಿನ ಪ್ರತಿಯನ್ನು ಕೂಡಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಿಗೆ ನ್ಯಾಯಾಲಯ ಸೂಚಿಸಿದೆ.

ವಿವಾದಿತ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಸೆಪ್ಟಂಬರ್ 29, 2010ರ ಅಧಿಸೂಚನೆಯ ಮೂಲಕ ಹೊರಗಿಡಲು ಆದೇಶಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಯಿತು. ನಂತರ, ಸರ್ಕಾರವು ಅಕ್ಟೋಬರ್ 19, 2010 ರ ಆದೇಶದ ಮೂಲಕ ಡಿನೋಟಿಫಿಕೇಶನ್ ನ್ನು ರದ್ದುಗೊಳಿಸಿತು.

ಸರ್ಕಾರಕ್ಕೆ ತಿಳಿದಿರುವ ಕಾರಣಗಳಿಗಾಗಿ ಈ ರದ್ದುಗೊಳಿಸುವ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗಿಲ್ಲ ಆದರೆ ಅಂತಹ ಕ್ರಮಗಳು ಕೆಲವು ಊಹಾಪೋಹಗಳಿಗೆ ವಿವಾದಕ್ಕೆ ಕಾರಣವಾಯಿತು. ಆದ್ದರಿಂದ, ಜಮೀನುಗಳ ಅಧಿಸೂಚನೆ ಹಾಗೂ ಡಿನೋಟಿಫಿಕೇಶನ್ ಎರಡನ್ನೂ ಗೆಜೆಟ್‌ನಲ್ಲಿ ಪ್ರಕಟಿಸಲು ನ್ಯಾಯಾಲಯ ನಿರ್ದೇಶಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!