spot_img
Tuesday, March 31, 2026
spot_img

ವಿರೋಧದ ಧ್ವನಿಯನ್ನು ಅಡಗಿಸಿ ಸದನವನ್ನು ನಡೆಸಬಹುದು ಎಂಬ ಕಲ್ಪನೆ ಪ್ರಜಾಸತ್ತಾತ್ಮಕವಲ್ಲ : ರಾಗಾ

ಜನಪ್ರತಿನಿಧಿ (ನವ ದೆಹಲಿ) :  ಜನಪರ ಧ್ವನಿ ಎತ್ತಲು ಸದನದಲ್ಲಿ ಪ್ರತಿಪಕ್ಷಗಳಿಗೆ ಅವಕಾಶ ದೊರಕುತ್ತದೆ ಎಂಬ ಆಶಯವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು(ಬುಧವಾರ) ಹೇಳಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಸದನವನ್ನು ಉದ್ದೇಶಿಸಿ ಅವರು ಮಾತನಾಡಿದರು.

18ನೇ ಲೋಕಸಭೆಯ ಸ್ಪೀಕರ್ ಆಗಿ ಮರು ಆಯ್ಕೆಯಾದ ಓಂ ಬಿರ್ಲಾ ಅವರಿಗೆ ಅಭಿನಂದನೆ ಸಲ್ಲಿಸಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಗಾ, ‘ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಪ್ರತಿಪಕ್ಷಗಳು ಬಯಸುತ್ತವೆ ವಿಶ್ವಾಸದಿಂದ ನಡೆಯುವುದು ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದರು.

ನಾನು ನಿಮ್ಮನ್ನು ನಿಮ್ಮ ಯಶಸ್ವಿ ಚುನಾವಣೆಗಾಗಿ ಅಭಿನಂದಿಸಲು ಬಯಸುತ್ತೇನೆ.ಇಡೀ ಇಂಡಿಯಾ ಮೈತ್ರಿಕೂಟದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಈ ಸದನವು ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ಆಡಳಿತ ಸರ್ಕಾರಕ್ಕೆ ಖಂಡಿತವಾಗಿ ರಾಜಕೀಯ ಶಕ್ತಿಯಿದೆ, ಆದರೆ ವಿರೋಧ ಪಕ್ಷಗಳು ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ” ಎನ್ನುವುದನ್ನು ಅವರು ಒತ್ತಿ ಹೇಳಿದರು.

ʼ ನಿಮ್ಮ ಕೆಲಸಗಳಲ್ಲಿ ಪ್ರತಿಪಕ್ಷಗಳು ನಿಮಗೆ ಸಹಾಯ ಮಾಡಲು ಬಯಸುತ್ತವೆ. ಸದನದಲ್ಲಿ ಮಾತನಾಡಲು, ಜನರ ಧ್ವನಿಯನ್ನು ಎತ್ತುವುದಕ್ಕೆ ನೀವು ಅವಕಾಶ ಮಾಡಿ ಕೊಡುತ್ತೀರಿ ಎಂಬ ವಿಶ್ವಾಸವಿದೆ. ಕಳೆದ ಬಾರಿಗಿಂತ ಈ ಬಾರಿ ಪ್ರತಿಪಕ್ಷಗಳು ಭಾರತೀಯರ ಧ್ವನಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲಿದೆ. ಸದನದಲ್ಲಿ ವಿರೋಧದ ಧ್ವನಿಯನ್ನು ಪ್ರತಿನಿಧಿಸಲು ಅವಕಾಶ ನೀಡುವುದು ಬಹಳ ಮುಖ್ಯ’ ಎಂದು ಅವರು ಮತ್ತೆ ಒತ್ತಿ ಹೇಳಿದರು.

ಸದನವನ್ನು ಎಷ್ಟು ಸಮರ್ಥವಾಗಿ ನಡೆಸಲಾಗುತ್ತಿದೆ ಎಂಬುದು ಪ್ರಶ್ನೆಯಲ್ಲ, ಸದನದಲ್ಲಿ ಭಾರತದ ಧ್ವನಿಯನ್ನು ಎಷ್ಟರ ಮಟ್ಟಿಗೆ ಕೇಳಲು ಅನುಮತಿಸಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ ಎಂದು ಹೇಳಿದ ಅವರು, ವಿರೋಧದ ಧ್ವನಿಯನ್ನು ಅಡಗಿಸುವ ಮೂಲಕ ನೀವು ಸದನವನ್ನು ಸಮರ್ಥವಾಗಿ ನಡೆಸಬಹುದು ಎಂಬ ಕಲ್ಪನೆಯು ಪ್ರಜಾಸತ್ತಾತ್ಮಕವಲ್ಲದ ಕಲ್ಪನೆಯಾಗಿದೆ. ಪ್ರತಿಪಕ್ಷಗಳು ಈ ದೇಶದ ಸಂವಿಧಾನವನ್ನು ರಕ್ಷಿಸಬೇಕೆಂದು ಭಾರತದ ಜನರು ನಿರೀಕ್ಷಿಸುತ್ತಾರೆ ಎನ್ನುವುದನ್ನು ಈ ಬಾರಿಯ ಲೋಕಸಭಾ ಚುನಾವಣೆ ದರ್ಶಿಸಿದೆ. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವ ಮೂಲಕ ನೀವು ಭಾರತದ ಸಂವಿಧಾನವನ್ನು ರಕ್ಷಿಸುವ ನಿಮ್ಮ ಕರ್ತವ್ಯವನ್ನು ಮಾಡುತ್ತೀರಿ ಎಂದು ನಮಗೆ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಇದಕ್ಕೂ ಮುನ್ನಾ, ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಸ್ಪೀಕರ್ ಕುರ್ಚಿ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಕರೆದುಕೊಂಡು ಬಂದು ಗೌರವಿಸಿದರು. ಈ ಸಂದರ್ಭದಲ್ಲಿ ನೂತನ ಸ್ಪೀಕರ್‌ ಅವರನ್ನು ಸ್ಪೀಕರ್‌ ಕುರ್ಚಿಯ ಬಳಿ ಕರೆದುಕೊಂಡು ಹೋಗುವ ಮುನ್ನ ಪ್ರಧಾನಿ ಮೋದಿ ಅವರು  ಗೌರವದಿಂದ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಬರಮಾಡಿಕೊಂಡು ಕೈ ಕುಲುಕಿದ್ದು ಎಲ್ಲರ ಗಮನ ಸೆಳೆಯಿತು.

https://x.com/RahulGandhi/status/1805844726765306261?t=f-Vff7Xyu08U0KwOz-Y3Dw&s=19

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!