Wednesday, September 11, 2024

18ನೇ ಲೋಕಸಭೆ ದೇಶದ ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸವಿದೆ : ನಮೋ

ಜನಪ್ರತಿನಿಧಿ (ನವದೆಹಲಿ) :  18ನೇ ಲೋಕಸಭೆಯ ಸ್ಪೀಕರ್ ಆಗಿ ಮರು ಆಯ್ಕೆಯಾದ ಓಂ ಬಿರ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಲೋಕಸಭೆಯ ಸ್ಪೀಕರ್‌ ಆಗಿ ಓಂ ಬಿರ್ಲಾ ಆಯ್ಕೆಯಾದ ಬಳಿಕ ಮಾತನಾಡಿದ ಪ್ರಧಾನಿ, ಭಾರತ ಸ್ವಾತಂತ್ರ್ಯದ ಅಮೃತ ಕಾಲದ ಸಮಯದಲ್ಲಿ ನೀವು ಎರಡನೇ ಬಾರಿಗೆ ಈ ಹುದ್ದೆಯಲ್ಲಿ ಕುಳಿತುಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ನಿಮ್ಮ ಅನುಭವದೊಂದಿಗೆ, ಮುಂದಿನ 5 ವರ್ಷಗಳವರೆಗೆ ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ನಿಮ್ಮ ಮುಖದ ಈ ಸಿಹಿ ನಗು  ಇಂದು ಇಡೀ ಸದನವನ್ನು ಸಂತೋಷವಾಗಿರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಎರಡನೇ ಬಾರಿಗೆ ಸ್ಪೀಕರ್ ಆಗಿರುವುದು ಸ್ವತಃ ದಾಖಲೆ. ಎರಡನೇ ಅವಧಿಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಈ ಹಿಂದೆ ಬಲರಾಮ್ ಜಾಖರ್ ಅವರಿಗೆ ದೊರಕಿತ್ತು. ಈ ಬಳಿಕ ನಿಮಗೆ ಈ ಅವಕಾಶ ದೊರಕಿದೆ, ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದರು.

ಸ್ವಾತಂತ್ರ್ಯ ಸಿಕ್ಕಿದ ನಂತರ 70 ವರ್ಷಗಳ ಅವಧಿಯಲ್ಲಿ ಆಗದ ಕೆಲಸಗಳು ನಿಮ್ಮ ಅಧ್ಯಕ್ಷತೆಯಲ್ಲಿ ಈ ಸದನದಿಂದ ಸಾಧ್ಯವಾಗಿವೆ. ಪ್ರಜಾಪ್ರಭುತ್ವದ ಸುದೀರ್ಘ ಪಯಣದಲ್ಲಿ ಹಲವಾರು ಮೈಲಿಗಲ್ಲುಗಳು ಬರುತ್ತವೆ. ಹಿಂದಿನ 17 ನೇ ಲೋಕಸಭೆಯ ಸಾಧನೆಗಳ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಹಿಂದಿನ ಲೋಕಸಭೆಯಲ್ಲಿ ಶೇಕಡಾ 97ರಷ್ಟು ಫಲಪ್ರದ ಚರ್ಚೆ, ಸಂವಾದಗಳು ನಡೆದಿದ್ದವು, ಈ ಬಾರಿ ಕೂಡ ನಿಮ್ಮ ಅಧ್ಯಕ್ಷತೆಯಲ್ಲಿ ದೇಶದ ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಸದಸ್ಯರ ನಡವಳಿಕೆ ಮತ್ತು ಅವರ ಹೊಣೆಗಾರಿಕೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದರು.

https://x.com/PTI_News/status/1805846255165194450

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!