spot_img
Wednesday, January 22, 2025
spot_img

ಕಂಡ್ಲೂರು ನರಸಿಂಹ ಜೋಗಿ ಹಾಗೂ ಗಿರಿಜಾ ನರಸಿಂಹ ಜೋಗಿ ಸ್ಮರಣಾರ್ಥ ನೋಟ್ ಪುಸ್ತಕ, ಕ್ರೀಡಾ ಸಮವಸ್ತ್ರ ವಿತರಣೆ

ಕುಂದಾಪುರ: “ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸುವ, ವಿದ್ಯಾರ್ಥಿಗಳ ಸಾಧನೆ ಹಿಂದಿರುವ ಶಿಕ್ಷಕರನ್ನು ಗೌರವಿಸುವುದರೊಂದಿಗೆ, ಅಬ್ದುಲ್ ಕಲಾಂ ಮತ್ತು ವಿವೇಕಾನಂದರು ನಮ್ಮ ಬದುಕಿನ ಆದರ್ಶವಾಗಬೇಕು. ನಮ್ಮಿಂದ ನಮ್ಮ ತಂದೆ ತಾಯಿ ಗುರುತಿಸಿಕೊಳ್ಳುವಂತಾದರೆ ಅದು ನಮ್ಮ ಬದುಕಿನ ಬಹುದೊಡ್ಡ ಸಾರ್ಥಕತೆ” ಎಂದು ಶ್ರೀ ಭವಾನಿ ಕಂಗನ್ ಸ್ಟೋರ್ಸ್ ಬೆಂಗಳೂರು ಇದರ ಮಾಲಕರಾದ ಶ್ರೀನಿವಾಸ ಜೋಗಿ ಹೇಳಿದರು.

ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿಯ ವಿದ್ಯಾರ್ಥಿಗಳಿಗೆ ತಮ್ಮ ತಂದೆ ತಾಯಿಯ ಸವಿನೆನಪಿನಲ್ಲಿ ಪ್ರತಿ ವರ್ಷ ನೀಡುವ ಉಚಿತ ನೋಟ್ ಪುಸ್ತಕ, ಕ್ರೀಡಾ ಸಮವಸ್ತ್ರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕಂಡ್ಲೂರು ಆಡಳಿತ ಧರ್ಮದರ್ಶಿ ಚಂದ್ರಶೇಖರ ಜೋಗಿ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ, “ಅಪ್ಸರಾ ನಾವೆಲ್ಟಿಸ್” ಬೆಂಗಳೂರು ಇದರ ಮಾಲಕರಾದ ನವೀನ್ ಷಾ, “ಮಯೂರ ಗ್ರೂಪ್ ಆಫ್ ಕಂಪನೀಸ್” ಇದರ ಸುರೇಶ್ ಜೈನ್, “ಪ್ರಸಾದ್ ನಾವೆಲ್ಟಿಸ್” ಬೆಂಗಳೂರು ಇದರ ಮಾಲಕರಾದ ಪ್ರದೀಪ್ ಪ್ರಸಾದ್, “ಓಂ ಶಾಂತಿ ನಾವೆಲ್ಟಿಸ್” ಬೆಂಗಳೂರು ಇದರ ಮಾಲಕರಾದ ನರೇಂದ್ರ ಕುಮಾರ್, “ಸಿಂಧೂರ ಫ್ಯಾನ್ಸಿ” ಬೆಂಗಳೂರು ಇದರ ಮಾಲಕರಾದ ವೆಂಕಟೇಶ ಹೆಬ್ಬಾರ್, ಚಿನ್ನದ ವ್ಯಾಪಾರಿಗಳಾದ ಚಂದು ಮಹಾರಾಜ್ ಬೆಂಗಳೂರು, ಉದ್ಯಮಿಗಳಾದ ಮುರುಳಿ ಜೋಶಿ ಬೆಂಗಳೂರು, “ಕನ್ನಿಕಾ ಕಂಗನ್ “ಬೆಂಗಳೂರು ಇದರ ಮಾಲಕರಾದ ಕೃಷ್ಣಜೋಗಿ, ಶೋಭಾ ಚಂದ್ರಶೇಖರ್ ಜೋಗಿ, ಅನಿತಾ ಶ್ರೀನಿವಾಸ್ ಜೋಗಿ, ಪ್ರಭಾರ ಮುಖ್ಯೋಪಾಧ್ಯಾಯರಾದ ಗೋಪಾಲ್ ವಿಷ್ಣು ಭಟ್ ಭಾಗವಹಿಸಿದ್ದರು.

ಕಲಿಕೆಗೆ ಪ್ರೇರಕರಾಗಿ ಸಹಾಯ ಸಹಕಾರ ನೀಡಿದ ಚಂದ್ರಶೇಖರ್ ಜೋಗಿ, ಶ್ರೀನಿವಾಸ ಜೋಗಿ, ಹಾಗೂ ರಾಜಶೇಖರ್ ಜೋಗಿ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ, ಚಂದ್ರಶೇಖರ್ ಜೋಗಿ ದಂಪತಿಗಳನ್ನು ಸಂಸ್ಥೆ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಬಹುದೊಡ್ಡ ಮೊತ್ತದ ನಗದು ಬಹುಮಾನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಿದ, ಉದ್ಯಮಿಗಳಾದ, ನವೀನ್ ಷಾ, ಪ್ರದೀಪ್ ಪ್ರಸಾದ್, ಸುರೇಶ್ ಜೈನ್, ನರೇಂದ್ರ ಕುಮಾರ್ ಜೈನ್ ಇವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ,ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹ ಶಿಕ್ಷಕರಾದ ರಜನಿ. ಎಸ್. ಹೆಗಡೆ ಸ್ವಾಗತಿಸಿ, ಲಕ್ಷ್ಮಿ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು, ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ರತ್ನಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!