spot_img
Thursday, December 5, 2024
spot_img

ಕೋಟ ವಿವೇಕ ವಿದ್ಯಾಸಂಸ್ಥೆ ಶಾಲಾ ಮುಖಂಡನ ಸ್ಥಾನಕ್ಕೆ ಚುನಾವಣೆ

ಕೋಟ :ವಿವೇಕ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗಕ್ಕೆ ಶಾಲಾ ಮುಖಂಡ ಮತ್ತು ಉಪ ಮುಖಂಡ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇವಿ‌ಎಂ ಆಪ್ ಬಳಸಿ ಚುನಾವಣೆ ನಡೆಸಲಾಯಿತು.

ಮೊದಲಿಗೆ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ವಿವರಿಸಿ, ನಾಮಪತ್ರ ಸಲ್ಲಿಸುವಿಕೆ, ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂತೆಗೆಯುವಿಕೆ ಯ ಕಾರ್ಯ ನಡೆಯಿತು. ತದನಂತರ ಚುನಾವಣಾ ಅಭ್ಯರ್ಥಿಗಳಿಗೆ ತರಗತಿವಾರು ಪ್ರಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಕಾಲೇಜು ವಿಭಾಗದಿಂದ ನಾಲ್ಕು ಅಭ್ಯರ್ಥಿಗಳು ಶಾಲಾ ಮುಖಂಡನ ಸ್ಥಾನಕ್ಕೆ, ಇಬ್ಬರು ಅಭ್ಯರ್ಥಿಗಳು ಉಪಮುಖಂಡನ ಆಯ್ಕೆಗೆ ಸ್ಪರ್ದಿಸಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಯಲ್ಲೇ ಮತಗಟ್ಟೆಯನ್ನು ನಿರ್ಮಾಣ ಮಾಡಿ ನಿರ್ಭೀತಿಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು. ಆಮೇಲೆ ಮತಯಂತ್ರವನ್ನು ಪೋಲಿಸ್ ಭದ್ರತೆಯೊಂದಿಗೆ ಎಣಿಕೆ ಕೊಠಡಿಗೆ ತಂದು ಅಭ್ಯರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆಯ ಕಾರ್ಯ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡರು ವಿಜೇತ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಶಾಲಾ ಮುಖಂಡನ ಸ್ಥಾನಕ್ಕೆ ಕೇಶವ ಉಪಾಧ್ಯ ಹಾಗೂ ಉಪಮುಖಂಡನ ಸ್ಥಾನಕ್ಕೆ ನಿತಿನ್ ಕಿಣಿ ಚುನಾಯಿತರಾದರು.

ಪ್ರಾಂಶುಪಾಲರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಮತ್ತು ಅದರ ಮಹತ್ವ ಮತ್ತು ಅವಶ್ಯಕತೆ ಬಗ್ಗೆ ವಿವರಿಸಿ ವಿದ್ಯಾರ್ಥಿ ಜೀವನದಲ್ಲೇ ಚುನಾವಣೆ ಮತದಾನದ ಮತ್ತು ಅದರ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಲು ಶಾಲಾ ಹಂತದಲ್ಲಿ ಚುನಾವಣೆ ಏರ್ಪಡಿಸಲಾಯಿತು ಎಂದು ತಿಳಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ವೆಂಕಟೇಶ ಉಡುಪ ಉಪಸ್ಥಿತರಿದ್ದರು.

ಚುನಾವಣಾ ಸಂಯೋಜಕರಾದ ಗಣೇಶ್ ಕುಮಾರ್ ಶೆಟ್ಟಿ ಅಚ್ಲಾಡಿ ಹಾಗು ರತಿ ಬಾಯಿ ಸಹಕರಿಸಿದರು. ಎಲ್ಲಾ ಸಿಬ್ಬಂದಿವರ್ಗದವರು ಚುನಾವಣಾ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿ ರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!