spot_img
Thursday, December 5, 2024
spot_img

ನಂದಿನಿ ಹಾಲಿನ ದರ ಹೆಚ್ಚಳ : ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರಗಳನ್ನು ಹೆಚ್ಚಳ ಮಾಡಿದೆ. ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಒಂದು ಲೀಟರ್‌ ಹಾಲಿನ ದರ ನಾಳೆ (ಬುಧವಾರ)ಯಿಂದ 44 ರೂ. ಆಗಲಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರ ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್‌ ಹಾಲಿಗೆ 2 ರೂ.ಏರಿಕೆ ಮಾಡಲಾಗಿದೆ. ಅರ್ಧ ಲೀಟರ್‌ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್‌ (1 ಲೀಟರ್)‌ ಪ್ಯಾಕೆಟ್‌ ಹಾಲು ಇನ್ಮುಂದೆ 1,050 ಎಂಎಲ್‌ ಹಾಗೂ ಅರ್ಧ ಲೀಟರ್‌ ಪ್ಯಾಕೆಟ್‌ ಹಾಲು 550 ಎಂಎಲ್‌ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಎಂಎಫ್‌ ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಲಿಯಾಗಿದೆ. 98 ಲಕ್ಷದ 17 ಸಾವಿರ ಲೀಟರ್ ಹಾಲು ನಮ್ಮಲ್ಲಿ ಶೇಖರಣೆ ಆಗುತ್ತಿದೆ. ಒಂದು ಕೋಟಿ ಲೀಟರ್ ಹಾಲಿನ ಶೇಖರಣೆ ಮಾಡಲು ಸಿದ್ಧರಾಗಿದ್ದೇವೆ. 27 ಲಕ್ಷ ಹಾಲು ಉತ್ಪಾದಕ ರೈತರಿಂದ ನಮಗಿದು ಸಾಧ್ಯವಾಗಿದೆ. 30 ಲಕ್ಷ ಲೀಟರ್ ಹಾಲು, ಹಾಲಿನ ಪೌಡರ್‌ಗೆ ಮೀಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೇರೆ ರಾಜ್ಯಗಳಿಗೆ ಹಾಲಿನದರ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪ್ಯಾಕೆಟ್ ಹಾಲಿನ ಬೆಲೆ ಕಡಿಮೆ ಇದೆ ಎಂದು ಹೇಳಿದ್ದಾರೆ.  ನಾಳೆಯಿಂದಲೇ ಪರಿಷೃತ ಹಾಲಿನ ದರಗಳು ಜಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!