Saturday, September 14, 2024

ಮೂಡುಗಿಳಿಯಾರು ಶಾಲೆ: ಎಲ್.ಕೆಜಿ-ಯುಕೆಜಿ, ತರಗತಿ ಪ್ರಾರಂಭ

ಕೋಟ: ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆ ಪ್ರಾಥಮಿಕ ವಿಭಾಗ, ನೂತನವಾಗಿ ಆರಂಭಗೊಂಡಿರುವ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ* ಮಾತನಾಡಿ ಗುಣಮಟ್ಟದ ಕಲಿಕೆಯನ್ನು ತಮ್ಮ ಮಕ್ಕಳಲ್ಲಿ ರೂಪಿಸುವುದಕ್ಕೆ ಇದು ಅವಕಾಶ ಕಲ್ಪಿಸುತ್ತದೆ.ಆರಂಭದ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಸರ್ಕಾರಿ ಶಾಲೆಗಳಲ್ಲಿ ಸಮಾನ ಶಿಕ್ಷಣಕ್ಕಾಗಿ ಉತ್ತಮವಾದ ಭದ್ರ ಅಡಿಪಾಯ ಹಾಕಿದರೆ ಇದು ಮುಂದಿನ ಹಂತವಾದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಅತ್ಯುತ್ತಮವಾದ ಕಲಿಕೆಯ ವಾತಾವರಣವನ್ನು ಕಲ್ಪಿಸುತ್ತದೆ. ಈ ಉದ್ದೇಶದಿಂದ ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಹಿಸಿದರು.

ಈ ಸಂದರ್ಭದಲ್ಲಿ ಯೋಗೇಂದ್ರ ಪೂಜಾರಿ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ, ಶಿವರಾಮ್ ಭಟ್ ಮುಖ್ಯೋಪಾಧ್ಯಾಯರು ಪ್ರೌಢಶಾಲೆ, ಶೋಭಾ ಸದಸ್ಯರು ಗ್ರಾಮ ಪಂಚಾಯತ್ ಕೋಟ, ಶೇಖರ್ ಜಿ ಸದಸ್ಯರು ಗ್ರಾಮ ಪಂಚಾಯತ್ ಕೋಟ, ಸುಚಿತ್ರ, ಸದಸ್ಯರು ಗ್ರಾಮ ಪಂಚಾಯತ್ ಕೋಟ, ಸವಿತಾ ಸಿ. ಆರ್.ಪಿ. ಕಾರ್ಕಡ ಕ್ಲಸ್ಟರ್, ಭರತ್ ಕುಮಾರ್ ಶೆಟ್ಟಿ ಮಾಜಿ ತಾಲೂಕು ಪಂಚಾಯತ್ ಸದಸ್ಯರು, ರಾಜಾರಾಮ ಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸುರೇಶ್ ಪೂಜಾರಿ ಅಧ್ಯಕ್ಷರು ಹಳೆವಿದ್ಯಾಥಿ ಸಂಘ ಪ್ರೌಢಶಾಲೆ, ರಾಘವೇಂದ್ರ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಪ್ರಾಥಮಿಕ ಶಾಲೆ, ಹಾಗೂ ಶಿಕ್ಷಕ ವೃಂದದವರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಊರಿನ ಪ್ರಮುಖರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!