Sunday, September 8, 2024

ವಿಶ್ವಮಾನ್ಯವಾದ ಯೋಗದ ಬಗ್ಗೆ ನಮಗೆ ಹೆಮ್ಮೆ, ಅಭಿಮಾನವಿರಬೇಕು : ಕೋಟ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ (ಉಡುಪಿ) : 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಡುಪಿ ಜಿಲ್ಲೆಯ ಆಯುಷ್ ಇಲಾಖೆ ವತಿಯಿಂದ ಒಳಾಂಗಣ ಕ್ರೀಡಾಂಗಣ (ಲಾನ್ ಟೆನಿಸ್) ಅಜ್ಜರಕಾಡು ಉಡುಪಿ ಇಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಧಾನಮಂತ್ರಿಯವರ  ಅಪೂರ್ವವಾದ ಪ್ರಯತ್ನದಿಂದ 2014ರ ಜೂನ್ 21 ರಿಂದ ವಿಶ್ವದಾದ್ಯಂತ “ಅಂತರಾಷ್ಟ್ರೀಯ ಯೋಗ ದಿನಾಚರಣೆ” ಯಾಗಿ ಆಚರಿಸುತ್ತಿದ್ದೇವೆ. ಪ್ರಸ್ತುತ ದೇಶಗಳಲ್ಲಿ 193 ದೇಶಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಭಾರತ ಹಾಗೂ ನಾವೆಲ್ಲ ಹೆಮ್ಮೆಪಡಬೇಕು, ವಿಶ್ವಮಾನ್ಯವಾದ ಯೋಗದ ಬಗ್ಗೆ ನಮಗೆ ಹೆಮ್ಮೆ ಮತ್ತು ಅಭಿಮಾನವಿರಬೇಕು ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್‌ ಸಿಇಒ ಪ್ರತೀಕ್‌ ಬಾಯಲ್‌, “ಜೀವನದಲ್ಲಿ ಆರೋಗ್ಯವಾಗಿರಲು ದೈಹಿಕ ಮಾನಸಿಕ ಆರೋಗ್ಯಕ್ಕೆ ಉತ್ತಮವಾದ ಹವ್ಯಾಸವಾಗಿ ಯೋಗವನ್ನು ರೂಢಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಮಾತನಾಡಿ, “ಪ್ರತಿಯೊಬ್ಬರ  ಜೀವನ ಶೈಲಿಯಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಎಲ್ಲರೂ ಯೋಗವನ್ನು ಕಲಿತು , ಉತ್ತಮ  ಆರೋಗ್ಯ ಹೊಂದುವಂತಾಗಲಿ” ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್‌ ಸುವರ್ಣ ಮಾತನಾಡಿ, “ಪ್ರಧಾನಿಯವರಿಗೆ ಯೋಗವನ್ನು ವಿಶ್ವಮಾನ್ಯ ಮಾಡಿದ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕು . ಆರೋಗ್ಯವಂತ ಜೀವನ ಶೈಲಿಗೆ ಯೋಗ ಅತ್ಯಂತ ಅವಶ್ಯವಾದದು.ಎಲ್ಲರೂ ಪ್ರತಿನಿತ್ಯ ಯೋಗ ಮಾಡುವ ಮೂಲಕ ಯೋಗ ಜೀವನ ನಡೆಸೋಣ ಎಂದು ಹೇಳಿದರು.

ಯೋಗ ಶಿಕ್ಷಕರಾದ ಶೋಭಾ ಶೆಟ್ಟಿ ಮತ್ತು ಚೆನ್ನಮ್ಮ ಉಡುಪ ಇವರುಗಳಿಂದ  ನಿಗದಿತ ಯೋಗಸಾನಗಳ ಪ್ರಾತ್ಯಕ್ಷಿಕೆಯನ್ನು ಯೋಗಾಸಕ್ತರ ಭಾಗವಹಿಸುವಿಕೆಯೊಂದಿಗೆ ನಡೆಸಲಾಯಿತು.

ಜಿಲ್ಲಾ ಆಯುಷ್‌ ಅದಿಕಾರಿ ಡಾ. ಸತೀಶ್‌ ಆಚಾರ್ಯ ಸ್ವಾಗತಿಸಿ, ವೈದ್ಯಾಧಿಕಾರಿಗಳಾದ ಡಾ. ನಾಗರಾಜ್‌ ಕೌಲಗಿ ವಂದಿಸಿದರು, ಡಾ.ವೀಣಾ ಕಾರಂತ್‌ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!