Sunday, September 8, 2024

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ

kundapura: ವಿದ್ಯಾರ್ಥಿಗಳಲ್ಲಿ ಶಿಸ್ತು – ಸಂಯಮ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ನಾಯಕರುಗಳ ಪದಗ್ರಹಣ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 19–06-2024ರಂದು ಯಜ್ಞಕುಂಡದಲ್ಲಿ ಅಗ್ನಿಜ್ವಲನೆಯ ಮೂಲಕ ವಿನೂತನವಾಗಿ ನಡೆಸಲಾಯಿತು. ಹತ್ತನೇ ತರಗತಿಯ ಕುಮಾರ್ ತೇಜಸ್ ಎಲ್.ಎಸ್. ಮತ್ತು ಕುಮಾರಿ ಭಕ್ತಿ ಪಿ. ರಾವ್ ವಿದ್ಯಾರ್ಥಿನಾಯಕ ಮತ್ತು ವಿದ್ಯಾರ್ಥಿನಾಯಕಿಯಾಗಿ ಆಯ್ಕೆಗೊಂಡರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಹಿರಿಯ ವರದಿಗಾರರಾದ ಜಿ. ಯು. ಭಟ್, ಹೊನ್ನಾವರ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ಅಗ್ನಿಯು ಜ್ಞಾನದ ಸಂಕೇತ. ಅಗ್ನಿಕುಂಡದಲ್ಲಿ ಅಗ್ನಿಯು ಪ್ರಜ್ವಲಿಸಿ ಬೆಳಕನ್ನು ಪಸರಿಸಿದಂತೆ ಪ್ರತಿಯೊಂದು ಮಗುವಿನಲ್ಲೂ ಜ್ಞಾನಾಗ್ನಿ ಬೆಳಗಬೇಕಿದೆ. ಆ ಜ್ಞಾನಾಗ್ನಿಯಿಂದ ಇಡೀ ವಿಶ್ವದ ಕತ್ತಲೆ ಕಳೆಯಬೇಕಿದೆ.  ಪ್ರತಿ ವಿದ್ಯಾರ್ಥಿಯೂ ಸನ್ಮಾರ್ಗವನ್ನೇ ಆಯ್ದುಕೊಂಡು ಲೋಕವೇ ಕೊಂಡಾಡುವ ವ್ಯಕ್ತಿ- ಶಕ್ತಿಗಳಾಗಬೇಕಿದೆ” ಎಂದು ಹಾರೈಸಿದರು.

ಇನ್ನೊರ್ವ ಮುಖ್ಯ ಅತಿಥಿ ಹೊನ್ನಾವರದ ಖ್ಯಾತ ವಿಜ್ಞಾನಿಗಳಾದ ಸುರೇಂದ್ರ ಕುಲಕರ್ಣಿಯವರು ಮಾತನಾಡುತ್ತಾ, “ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯವಾದ ದಿನವಿದು. ವಿದ್ಯಾರ್ಥಿಯು ಆತ್ಮವಿಶ್ವಾಸ, ಆತ್ಮಗೌರವ, ಶಿಸ್ತು, ಸಂಯಮ ಮತ್ತು ನಾಯಕತ್ವದ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಮುಂದುವರಿಯಬೇಕು. ಹಿರಿ-ಕಿರಿಯರಲ್ಲಿ, ಜೊತೆಗಾರರಲ್ಲಿ ಗೌರವದಿಂದ ವರ್ತಿಸುವುದರಿಂದ ಯೋಗ್ಯನಾಗಬಹುದು. ಉತ್ತಮ ವಿದ್ಯಾಭ್ಯಾಸದಿಂದ ಉನ್ನತ ಸ್ಥಾನಮಾನವನ್ನೂ ಪಡೆಯಬಹುದು. ವಿದ್ಯಾರ್ಥಿಗಳು ಸಿಕ್ಕ ಜವಾಬ್ದಾರಿಯನ್ನು ಚೊಕ್ಕವಾಗಿ ನಿಭಾಯಿಸುವ ಗುಣವನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಧೀಮಂತ ನಾಯಕನಾಗಬಹುದು.” ಎನ್ನುತ್ತಾ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ, ಪ್ರಾಂಶುಪಾಲರೂ ಆದ ಶರಣ ಕುಮಾರ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

ವಿದ್ಯಾರ್ಥಿನಿ ಹರ್ಷಿತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪೂರ್ವೀ ಜಗನ್ನಾಥ್ ಸ್ವಾಗತಿಸಿದರೆ, ಕುಮಾರಿ ಕೃಪಾಲಿ ಎಸ್, ಮೂಲಿಮನಿ ಧನ್ಯವಾದವನ್ನು ಅರ್ಪಿಸಿದರು. ಆಪ್ತಸಮಾಲೋಚಕಿ ಪ್ರತೀಕ್ಷಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಅಶ್ವಿನಿ ವಿದ್ಯಾರ್ಥಿ ನಾಯಕರುಗಳ ಪಟ್ಟಿಯನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಭಟ್ಕಳದ ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ಭಟ್, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!