Wednesday, September 11, 2024

ಯೋಗ (ಕವನ)

ಯೋಗ
ಯೋಗಾ ಯೋಗಾ ಯೋಗಾ…
ಯೋಗದಿಂದ ಆದೀತು ಶುಭಯೋಗಾ
ಸ್ವಸ್ಥ ಸಮಾಜಕೆ ನಿರಂತರ ಯೋಗಾ
ಸಾರಿರೀ ಜಗಕೆ ಯೋಗದ ಮಹತ್ವವನೀಗಾ

ಭರತ ಭೂಮಿಯ ಶ್ರೇಷ್ಠ ಪರಂಪರಾ
ಋಷಿ ಮುನಿಗಳ ತವರಿದು ನಿರಂತರಾ
ಧ್ಯಾನ ತಪಸ್ಸುಗಳ ಸಮ ಸಂಯೋಗಾ
ಸನಾತನ ಧರ್ಮದ ಕೊಡುಗೆ ಈ ಯೋಗಾ

ಅರಿಯಿರಿ ಭರತ ಭೂಮಿಯ ಅಸ್ಮಿತೆಗಳಾ
ನೆನೆಯಿರಿ ಹಿರಿಯರ ಹೆಮ್ಮೆಯ ಕೊಡುಗೆಗಳಾ
ಗುರುತಿಸಿ ಸಾಗಿರಿ ಹೆಜ್ಜೆಯ ಗುರುತುಗಳಾ
ಪಡೆಯಿರಿ ನಿತ್ಯವೂ ಯೋಗದ ಉಪಯೋಗಗಳಾ

ದೇವ ನಿರ್ಮಿತ ಜಗತ್ತಿನ ಸೋಜಿಗವಾ
ಸಕಲ ಜೀವಕೆ ನೀಡುತ ಚೈತನ್ಯವಾ
ಅರಿತರೆ ನೀ ನಿಸರ್ಗದ ವಿಸ್ಮಯವಾ
ಹಚ್ಚುವೆ ಭವಿಷ್ಯದ ಬೆಳಕಿನಾ ದೀಪವಾ

ದೈವದ ಕೊಡುಗೆಯೆ ನಮ್ಮದಿದು ಯೋಗಾ
ಸಾರಿರಿ ಜಗಕೆ ಇದು ನಮ್ಮ ಸುಯೋಗ
ತಿಳಿಯಿರಿ ಅದು ನಮ್ಮಯ ಯೋಗಾಯೋಗ
ಮಾಡಿರಿ ಪ್ರತಿದಿನ ಮರೆಯದೆ ಯೋಗ
-ಇಂದಿರಾ ನಾಡಿಗ್

(ಜೂನ್ 21 ವಿಶ್ವ ಯೋಗದ ಪ್ರಯುಕ್ತ ಕವನ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!